ಬೆಂಗಳೂರು,ಫೆ.12- ನಾವು ಎಲ್ಲದರಲ್ಲೂ ಧ್ವನಿಯನ್ನು ಎತ್ತುತ್ತೇವೆ. ಆದರೆ ಈ ಹಿಂದೆ ರೈಲ್ವೆ ಯೋಜನೆಗೆ ಭೂಮಿ ಕೊಡಲಿಲ್ಲ. ಆಗ ಕಾಂಗ್ರೆಸ್‍ನವರೇ ಹೆಚ್ಚು ಸಂಸದರಿದ್ದರು. ಅವರೇನು ಮಾಡಿದರು ಹೇಳಬೇಕಲ್ಲವೇ? ನಾನು ಎಲ್ಲವನ್ನೂ ಮಾಡಿದ್ದೆ ಎಂದು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 25 ಸಂಸದರು ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಧ್ವನಿ ಎತ್ತಿಲ್ಲ ಎಂಬ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು. ಕೊರೊನಾದಲ್ಲೂ 9.2 ಜಿಡಿಪಿ ನಿರ್ವಹಣೆ ಮಾಡಿದ್ದೇವೆ. 68 ವರ್ಷದ ಕಾಂಗ್ರೆಸ್ ಆಡಳಿತ ಕಂಡಿದ್ದೆವು. ತಾತ್ಕಾಲಿಕವಾಗಿ ಜನರನ್ನ ಓಲೈಕೆ ಮಾಡಲಾಗಿತ್ತು. ಆಗ ಜಿಡಿಪಿ ಏರಿಕೆಯಾಗಿರಲೇ ಇಲ್ಲ. ಕೋವಿಡ್‍ನಲ್ಲೂ ನಮ್ಮ ಜಿಡಿಪಿ ಕುಸಿದಿರಲಿಲ್ಲ ಎಂದು ಸಮರ್ಥಿಸಿಕೊಂಡರು.
ಬಜೆಟ್ ಮಂಡಿಸಬೇಕಾದರೆ ಬಹಳಕಷ್ಟ. ನಾನು ರಾಜ್ಯದ ಸಿಎಂ ಆಗಿ ಮಂಡಿಸಿದ್ದೆ. ಬೇಡಿಕೆಗಳನ್ನು ಗಮನಿಸಿ ಮಂಡಿಸುವುದು ಕಷ್ಟ. ನಾವು ಪ್ರಚಾರಕ್ಕಾಗಿ ಬಜೆಟ್ ಸಮರ್ಥಿಸಿಕೊಳ್ತಿಲ್ಲ. ಬಜೆಟ್ ನಲ್ಲಿ ಹೊಸ ಯೋಜನೆ ನಾವು ಘೋಷಿಸಿಲ್ಲ. ಆದರೆ ಹಳೆಯ ಯೋಜನೆ ಮುಂದುವರಿಸಿದ್ದೇವೆ
ಕೋರ್ಟ್ ಏನು ಹೇಳುತ್ತೆ ಅದನ್ನ ಪಾಲಿಸುತ್ತೇವೆ.
ಸುಪ್ರೀಂ, ಹೈಕೋರ್ಟ್ ಏನು ಹೇಳುತ್ತೆ ಅದನ್ನು ಮಾಡುತ್ತೇವೆ. ಇದರ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಎಲ್ಲರೂ ಕೋರ್ಟ್ ತೀರ್ಪನ್ನು ಪಾಲಿಸಬೇಕು. ರಾಷ್ಟ್ರಧ್ವಜದ ಬಗ್ಗೆ ಈಶ್ವರಪ್ಪನವರೇ ಹೇಳಿದ್ದಾರೆ. ಹಾಗಾಗಿ ಇದರ ಬಗ್ಗೆ ನೋ ಕಾಮೆಂಟ್ಸ್ ಎಲ್ಲಾ ಕಡೆಗಳಲ್ಲಿ ಡಿಜಿಟಲೀಕರಣ ಆಗ್ತಿದೆ. ಡಿಜಿಟಲ್ ಕರೆನ್ಸೀಕರಣದ ಚಿಂತನೆ ನಡೆದಿದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲೀಕರಣ ಆಗಿದೆ. ಭೂ ದಾಖಲೀಕರಣಕ್ಕೂ ಡಿಜಿಟಲ್ ವ್ಯವಸ್ಥೆಯಾಗಿದೆ ಎಂದರು.
