ಇತ್ತೀಚಿಗೆ ಕಂಟೆಂಟ್ ಒರಿಯೆಂಟೆಡ್ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೀರೋಯಿಸಂ ಹೊರತುಪಡಿಸಿ ಕಥೆಗೆ ಪ್ರಾಮುಖ್ಯತೆ ಕೊಟ್ಟು ತಯಾರಾಗುತ್ತಿರುವ ಈ ರೀತಿಯ ಕಥೆಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿವೆ. ಅದೇ ರೀತಿ ರಾಜ್ಯದ್ಯಂತ ಬಿಡುಗಡೆಗೊಂಡು ಸಿನಿ ಪ್ರೇಕ್ಷಕರ ಮನೆಗೆದ್ದಿರುವ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಕೂಡ ಇದೇ ಜಾನರ್ ನಲ್ಲಿ ಮೂಡಿ ಬಂದಿದೆ.
ಪ್ರೀತಿ ಮಾಡಿ ವಿವಾಹವಾಗುವ ಅನ್ಯ ಜಾತಿಯ ಪ್ರೇಮಿಗಳ ಕೊಲೆಯೊಂದಿಗೆ ಶುರುವಾಗುವ ಕಥೆ ಸಿನಿಮಾ ನೋಡುವ ಪ್ರೇಕ್ಷಕರನ್ನ ಕೊನೆಯವರೆಗೂ ಕುತೂಹಲದಲ್ಲೇ ಕೊಂಡಯುತ್ತದೆ. ವಿವಿಧ ಆಯಾಮಗಳಲ್ಲಿ ತನಿಖೆಗೆ ಒಳಪಡುವ ಕಥೆಯಲ್ಲಿನ ತಿರುವುಗಳು ನಿರ್ದೇಶಕ ಭಾಸ್ಕರ್ ಆರ್ ನೀನಾಸಂ ಅವರ ಜಾಣ್ಮೆಯನ್ನು ಪ್ರದರ್ಶಿಸುತ್ತದೆ.
ಮೇಲ್ಜಾತಿಯ ಹುಡುಗಿ ಕೆಳ ಜಾತಿಯ ಹುಡುಗನನ್ನ ವಿವಾಹವಾಗಿ ಕೆಲವೇ ದಿನಗಳಲ್ಲಿ ಅವರ ಜೀವನ ಅಂತ್ಯವಾದಾಗ ಇದೊಂದು ಮರ್ಯಾದೆ ಹತ್ಯೆ ಎಂಬ ದಿಕ್ಕಿನಲ್ಲಿ ಇನ್ವೆಸ್ಟಿಗೇಷನ್ ನಡೆದಾಗ ಇದು ಅದೇ ಇರಬಹುದು ಎಂದು ಅಂದುಕೊಳ್ಳುತ್ತಾರೆ ಆದರೆ ಅದು ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಆ ತಿರುವುಗಳೇ ಸಿನಿಮಾದ ಹೈಲೈಟ್ಸ್.
20ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆ ಅಫ್ತಾಬ್ ಸಂಬಂಧ
ಯುವ ಪ್ರೇಮಿಗಳ ಪಾತ್ರದಲ್ಲಿ ಅಭಿನಯಿಸಿರುವ ಪಾವನ ಗೌಡ ಮತ್ತು ಮಧು ನಂದನ್ ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೆಯೇ ಸಿನಿಮಾದಕ್ಕೂ ಮುಖ್ಯ ಪಾತ್ರವನ್ನು ನಿಭಾಯಿಸಿರುವ ತನಿಖಾಧಿಕಾರಿ ಪೃಥ್ವಿರಾಜ್ ಮಿಂಚಿದ್ದಾರೆ.
ಇನ್ನು ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂದು ಅನುಮಾನ ಹುಟ್ಟಿಸುವ ಮತ್ತೊಬ್ಬ ಪೊಲೀಸ್ ಅಧಿಕಾರಿಯಾಗಿ ತನ್ನ ಸಹಜ ಅಭಿನಯದಿಂದ ಎಲ್ಲರನ್ನು ಸೆಳೆಯುತ್ತಾರೆ ಅಚ್ಯತ್ ಕುಮಾರ್. ಮತ್ತೊಬ್ಬ ಪೊಲೀಸ್ ಪೇದೆಯ ಮೇಲು ಅದೇ ಅನುಮಾನ ಮುಂದುವರೆದು ಇವರೇ ಇದಕ್ಕೆ ಕಾರಣ ಎನ್ನುವಂತೆ ಕೊಂಡಯ್ಯವ ಕಥೆಯಲ್ಲಿ ಕೊಲೆಯಾದ ಹುಡುಗಿಯ ಭಾವ ಮತ್ತು ಪೋಲಿಸ್ ಪಾತ್ರದಲ್ಲಿ ಜಹಾಂಗೀರ್ ಸೈ ಎನಿಸಿಕೊಂಡಿದ್ದಾರೆ.
ಶಾಂತಿ ಕದಡಲು ಬಿಜೆಪಿಗೆ ರೌಡಿಶೀಟರ್ಗಳೇ ಬೇಕು: ಸಿದ್ದರಾಮಯ್ಯ
ಸಚಿನ್ ಬಸರೂರು ಸಂಗೀತ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಲ್ಲಿ ವರ್ಕೌಟ್ ಆಗಿದೆ. ನೈಜ ಘಟನೆಗಳಿಗೆ ನಿರ್ದೇಶಕರು ಸಿನಿಮಾ ರೂಪ ಕೊಟ್ಟು ಬೆಳ್ಳಿತೆರೆಯ ಮೇಲೆ ತಂದಿರುವ ಪರಿ ಎಲ್ಲರಿಂದ ಮೆಚ್ಚುಗೆಯನ್ನ ಪಡೆದಿದೆ.
#SadduVicharaneNadeyuttide, #kannada, #movie, #review, #rakeshmaiya, #paavanagowda, #sachinbasrur, #madhunandan, #achyuthkumar, #pramodmaravanthe, #PanchamJeeva,