ಕಾಡಿನ ರೋಮಾಂಚನಕಾರಿ ಪ್ರಯಾಣ ‘ಸಫಾರಿ ಇಂಡಿಯಾ’

Social Share

ಜನವರಿ 2022: ಝೀಝೆಸ್ಟ್ಇದೇ ಮೊದಲ ಬಾರಿಗೆ ಹೊಸ ರೀತಿಯ ‘ಸಫಾರಿಇಂಡಿಯಾ’ ಶೋ ಪ್ರಾರಂಭಿಸಿದೆ. ನಟ ರಣವಿಜಯ ಸಿಂಘಾ ಅವರು ಭಾರತದ ಕೆಲವು ಪ್ರಮುಖ ರಾಷ್ಟ್ರೀಯ ಉದ್ಯಾನವನಗಳನ್ನು ಸುತ್ತಲಿದ್ದು, ಸಾಹಸ, ಮನರಂಜನೆ ಮತ್ತು ರೋಮಾಂಚಕ ಪ್ರಯಾಣದ ಅನುಭವನ್ನು ನೀಡುವ ಕಾರ್ಯಕ್ರಮವಾಗಿದೆ. ಭಾರತದ ಶ್ರೀಮಂತ ಜೀವವೈವಿಧ್ಯ, ಉದ್ಯಾನವನಗಳ ಹಿಂದೆ ಇರುವ ಜನರನ್ನು ಭೇಟಿ ಮಾಡುವ, ಭವ್ಯವಾದ ವನ್ಯಜೀವಿಗಳನ್ನು ಸಂರಕ್ಷಿಸುವ ತುರ್ತನ್ನು ಅನ್ವೇಷಿಸುವ ಮತ್ತು ಅನುಭವಿಸುವಗುರಿಯೊಂದಿಗೆ, ಸಫಾರಿಇಂಡಿಯಾ ,ಎಂಟು ಭಾಗಗಳ ಟೆಂಟ್‌ ಪೋಲ್ಸರಣಿಯ ಮೂಲಕ ಭಾರತದ ಏಳು ಪೌರಾಣಿಕ ರಾಷ್ಟ್ರೀಯ ಉದ್ಯಾನವನಗಳನ್ನು ಪರಿಶೋಧಿಸಿದೆ.
ಜಗತ್ತಿನ ಹಲವಾರು ಭಾಗಗಳಲ್ಲಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಈ ಸಮಯದಲ್ಲಿ, ಪ್ರಾಣಿಗಳನ್ನು ದಯೆಯಿಂದ ನಡೆಸಿಕೊಳ್ಳುವುದು ಮಾನವರಾದ ನಮಗೆ, ಹಿಂದೆಂದಿಗಿಂತಲೂ ಈಗ ಹೆಚ್ಚುಅಗತ್ಯವಾದ ಕ್ರಮವಾಗಿದೆ. ಈ ಪ್ರಾಣಿಗಳು ಮಾನವೀಯತೆ ಮತ್ತು ನೈಸರ್ಗಿಕವಾದ ಎಲ್ಲ ಸೌಂದರ್ಯದ ನಡುವಿನ ಸೇತುವೆಯಾಗಿವೆ.
ಇದೇ ಉದ್ದೇಶದಿಂದ ಆರಂಭವಾಗಿರುವ ಸಫಾರಿಇಂಡಿಯಾ, ದೇಶದ ಮಹತ್ವದ ವನ್ಯಜೀವಿ ಪರಿಸರ ವ್ಯವಸ್ಥೆಯ ಮೂಲಕ ನಿಮ್ಮನ್ನು ಸಾಹಸಮಯ ಪ್ರಯಾಣಕ್ಕೆ ಕರೆದೊಯ್ಯಲು ಸಜ್ಜಾಗಿದೆ. ಆತಿಥೇಯ ರಣವಿಜಯ್ಜೊತೆಗಿನ ಸಫಾರಿಇಂಡಿಯಾ, ಅರಣ್ಯದ ಹೃದಯ ಭಾಗದಲ್ಲಿ ವಾಸಿಸುವ ಜೀವನವನ್ನು ಪತ್ತೆ ಹಚ್ಚುವ, ಭೂಮಿಯ ದಟ್ಟವಾದ ಉಷ್ಣವಲಯದ ಕಾಡುಗಳಲ್ಲಿಟ್ರೆಕ್ಕಿಂಗ್ಮಾಡುವ, ಅಪಾಯಕಾರಿ ನದಿಗಳನ್ನು ದಾಟುವ, ಕಾಡಿನ ಅಪರೂಪದ ಭಾಗಗಳನ್ನು ಅನ್ವೇಷಿಸುವ ಸಾಹಸಮಯ ಪ್ರಯಾಣವಾಗಿದೆ.
ಸಫಾರಿಇಂಡಿಯಾ ದಲೆನ್ಸ್ಮೂಲಕ ಸೆರೆಹಿಡಿಯಲಾಗಿರುವ ಏಳು ರಾಷ್ಟ್ರೀಯ ಉದ್ಯಾನವನಗಳೆಂದರೆ–
 ನೈನಿತಾಲ್ ಜಿಲ್ಲೆಯಲ್ಲಿರುವಜಿಮ್ಕಾರ್ಬೆಟ್ರಾಷ್ಟ್ರೀಯಉದ್ಯಾನ
 ಅಸ್ಸಾಂನಕಾಜಿರಂಗರಾಷ್ಟ್ರೀಯಉದ್ಯಾನ
 ಅರುಣಾಚಲ ಪ್ರದೇಶದ ಪಕ್ಕೆ ಅಭಯಾರಣ್ಯ
 ರಾಜಸ್ಥಾನದ ರಣಥಂಬೋರ್ರಾಷ್ಟ್ರೀಯಉದ್ಯಾನ
 ಗುಜರಾತ್ನ ಗಿರ್ಅರಣ್ಯರಾಷ್ಟ್ರೀಯಉದ್ಯಾನ
 ಗೋವಾದ ನೇತ್ರಾವಳಿವನ್ಯಜೀವಿಅಭಯಾರಣ್ಯ
 ಕರ್ನಾಟಕದದುಬಾರೆಆನೆಶಿಬಿರ
ಪ್ರತಿಯೊಂದುಕಾಡು, ತನ್ನದೇಆದವನ್ಯಜೀವಿವೈವಿಧ್ಯತೆಯೊಂದಿಗೆನಿಸರ್ಗಕ್ಕೆಜೀವತುಂಬುತ್ತದೆಮತ್ತುಅದುತನ್ನದೇಆದಭಾವನೆಗಳಘರ್ಜನೆಯನ್ನುಪ್ರತಿಧ್ವನಿಸುತ್ತದೆ. ಇಂತಹ ರೋಮಾಂಚನಕಾರಿಮತ್ತುಆಹ್ಲಾದಕರಅನುಭವವನ್ನು ಕಾರ್ಯಕ್ರಮ ವೀಕ್ಷಕರಿಗೆ ಒದಗಿಸಲಿದೆ.

Articles You Might Like

Share This Article