ಸಕಲೇಶಪುರದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್..!

Social Share

ಸಕಲೇಶಪುರ, ಡಿ.14- ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯ ತಾಲೂಕಿನಲ್ಲಿ ಹೊರಬಂದಿದೆ. ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ, ಅತ್ಯಾಚಾರ, ಜಾತಿ ನಿಂದನೆ ಪ್ರಕರಣದಡಿ ನಾಲ್ವರನ್ನು ಬಂಧಿಸಲಾಗಿದೆ.

ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಕಾಫಿ ತೋಟವೊಂದರ ಮಾಲೀಕ ಸುದರ್ಶನ್ ಸೇರಿದಂತೆ ಅದೇ ಗ್ರಾಮದ ಸ್ವಾಗತ್, ಪಾಪಣ್ಣ ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಬಾಲಕಿ ಮನೆಯವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪಿಎಸ್‍ಐ ಬಸವರಾಜ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿಯಲ್ಲಿ ಖರ್ಗೆ ನೇತೃತ್ವದಲ್ಲಿ ನಡೆದ ಕರ್ನಾಟಕ ನಾಯಕರ ಸಭೆಯ ಸೀಕ್ರೆಟ್ ಬಿಚ್ಚಿಟ್ಟ ಕಾಂಗ್ರೆಸ್

ಪುಟ್ಟ ಬಾಲಕಿಗೆ ಆರೋಪಿಗಳು ಆಮಿಷವೊಡ್ಡಿ ಅತ್ಯಾಚಾರ ನಡೆಸಿ ಏನೂ ಗೊತ್ತಿಲ್ಲದಂತೆ ಗ್ರಾಮದಲ್ಲಿ ತಿರುಗಾಡಿಕೊಂಡಿದ್ದರು. ಆದರೆ, ಬಾಲಕಿಯ ವರ್ತನೆ, ದೇಹದಲ್ಲಾಗುತ್ತಿರುವ ಬದಲಾವಣೆ ಗಮನಿಸಿದ ಮನೆಯವರು ವಿಚಾರಿಸಿದಾಗ ಆಕೆ ತನ್ನ ಮೇಲಾದ ದೌರ್ಜನ್ಯದ ಕಥೆ ಹೇಳಿದ್ದಾಳೆ.

ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ

ಮನೆಯವರು ಕೂಡಲೇ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿದ್ದು, ಈ ನಿಟ್ಟಿನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.

Sakaleshpur, Gang rape, Four arrested,

Articles You Might Like

Share This Article