ದೇವಸ್ಥಾನಗಳಲ್ಲಿ ಸಲಾಂ ಆರತಿ ರದ್ದುಪಡಿಸಿ ಸಂಧ್ಯಾ ಆರತಿಗೆ ಸುತ್ತೋಲೆ

Social Share

ಬೆಂಗಳೂರು,ಡಿ.10- ರಾಜ್ಯ ರಾಜಕಾರಣದಲ್ಲಿ ಧರ್ಮ ದಂಗಲ್ ಉಂಟಾಗುವ ಲಕ್ಷಣಗಳು ಗೋಚರಿಸಿದ್ದು, ಟಿಪ್ಪು ಸುಲ್ತಾನ್ ಕಾಲದಲ್ಲಿದ್ದ ಸಲಾಂ ಆರತಿಯನ್ನು ರದ್ದುಪಡಿಸಲಾಗಿದೆ. ಇನ್ನು ಮುಂದೆ ಧಾರ್ಮಿಕ ಇಲಾಖೆಯು ಧರ್ಮರಾಯ ದತ್ತಿ ಇಲಾಖೆಯಾಗಿ ಕಾರ್ಯ ನಿರ್ವಹಣೆ ಮಾಡಲಿದೆ.

ಧಾರ್ಮಿಕ ಪರಿಷತ್ ಹೊರಡಿಸಿರುವ ಸುತ್ತೋಲೆಯಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಸಲಾಂ ಆರತಿಯನ್ನು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ನಡೆದು ಬರುತ್ತಿದ್ದ ಸಲಾಂ ಆರತಿ ಬದಲಿಗೆ ಇನ್ನು ಮುಂದೆ ಸಂಧ್ಯಾ ಆರತಿ ಆಚರಣೆ ಮಾಡಬೇಕೆಂದು ಸುತ್ತೋಲೆಯಲ್ಲಿ ಹೊರಡಿಸಲಾಗಿದೆ.

ರಾಜ್ಯದ ಪ್ರಮುಖ ದೇವಾಲಯಗಳಾದ ಕೊಲ್ಲೂರು ಮೂಕಾಂಬಿಕೆ, ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನ, ಶೃಂಗೇರಿ, ಕುಕ್ಕೇಸುಬ್ರಹ್ಮಣ್ಯ , ಪುತ್ತೂರು ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ಪ್ರತಿದಿನ ಸಲಾಂ ಆರತಿಯನ್ನು ಮಾಡಲಾಗುತ್ತಿತ್ತು.

ಮೋದಿ ವಿರುದ್ಧ ಮತ್ತೆ ಕಿಡಿಕಾರಿದ ಸಾಕೇತ್

ನಾಡಿನ ಪ್ರಜೆಗಳು, ಮಂತ್ರಿ ಮತ್ತು ರಾಜನ ಒಳಿತಿಗಾಗಿ ಸಲಾಂ ಆರತಿಯನ್ನು ನಡೆಸಬೇಕೆಂದು ಟಿಪ್ಪು ಸುಲ್ತಾನ್ 1756ರಲ್ಲೇ ತನ್ನ ಆಡಳಿತಾವಯಲ್ಲಿ ಈ ಪದ್ದತಿಯನ್ನು ಜಾರಿ ಮಾಡಿದ್ದ ಎಂಬ ನಂಬಿಕೆಯಿದೆ. ಸಲಾಂ ಆರತಿ ಮಾಡುವುದರಿಂದ ನಾಡಿನ ಸುಭಿಕ್ಷೆ ಮತ್ತು ಪ್ರಜೆಗಳ ಕಲ್ಯಾಣಕ್ಕಾಗಿ ದೇವಾಲಯಗಳಲ್ಲಿ ಇದನ್ನು ನಡೆಸಬೇಕೆಂದು ಟಿಪ್ಪು ಸುಲ್ತಾನ್ ಸುತ್ತೋಲೆ ಹೊರಡಿಸಿದ್ದರು ಎಂಬ ಪ್ರತೀತಿ ಇದೆ.

ಸಲಾಂ ಆರತಿಯನ್ನು ರದ್ದುಪಡಿಸಬೇಕೆಂದು ಹಿಂದೂ ಅರ್ಚಕರೇ ಮುಜರಾಯಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರ ಬದಲಿಗೆ ಸಂಧ್ಯಾ ಆರತಿ ಪ್ರಾರಂಭಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು.
ಅರ್ಚಕರ ಕೋರಿಕೆ ಮೇರೆಗೆ ಈವರೆಗೂ ಹಿಂದೂ ದೇವಾಲಯಗಳಲ್ಲಿ ನಡೆಯುತ್ತಿದ್ದ ಸಲಾಂ ಆರತಿ ಇನ್ನು ಮುಂದೆ ಸಂಧ್ಯಾರತಿಯಾಗಿ ಬದಲಾವಣೆಯಾಗಲಿದೆ.

ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲುನಿತೀಶ್ ವೈಫಲ್ಯ ಕಾರಣ : ಪ್ರಶಾಂತ್

ಹಿಂದೂ ದೇವಾಲಯಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಸಂಧ್ಯಾವಂದನೆ ವೇಳೆ ಸಂಧ್ಯಾರತಿ ಮಾಡಬೇಕು ಎಂದು ಸೂಚಿಸಲಾಗಿದೆ.

ಇಲಾಖೆಯ ಹೆಸರು ಬದಲಾವಣೆ:
ಈವರೆಗೂ ಮುಜರಾಯಿ ಇಲಾಖೆಯನ್ನು ಧಾರ್ಮಿಕ ದತ್ತಿ ಇಲಾಖೆ ಹೆಸರಿನಡಿ ಕಾರ್ಯ ನಿರ್ವಹಿಸಲಾಗುತ್ತಿತ್ತು. ಇದೀಗ ಧಾರ್ಮಿಕ ಪರಿಷತ್ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಹೆಸರನ್ನು ಕೂಡ ಬದಲಾಯಿಸಲಾಗಿದೆ.
ಇನ್ನು ಮುಂದೆ ಧಾರ್ಮಿಕ ಇಲಾಖೆ ಇಲ್ಲವೇ ಮುಜರಾಯಿ ಇಲಾಖೆ ಎನ್ನುವ ಬದಲು ಧರ್ಮರಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕಡ್ಡಾಯವಾಗಿ ಹಿಂದೂ ದೇವಾಲಯಗಳಲ್ಲಿ ಅರ್ಚಕರು ಧರ್ಮರಾಯ ದತ್ತಿ ಇಲಾಖೆ ಎಂದು ನಾಮಕರಣ ಮಾಡುವಂತೆ ನಿರ್ದೇಶನ ಕೊಡಲಾಗಿದೆ.

Salam Aarti, Tipu Sultan, BJP govt, Karnataka,

Articles You Might Like

Share This Article