ಬೆಂಗಳೂರು, ಫೆ.14- ಸರ್ಕಾರ ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿಲ್ಲ. ಬಹುಶಃ ನಾನು ಕುಳಿತ ಸ್ಥಳದ ವಾಸ್ತು ಸರಿ ಇಲ್ಲವಾಗಿರಬಹುದು, ನನ್ನ ಕುರ್ಚಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಒತ್ತಾಯಿಸಿದ ಸ್ವಾರಸ್ಯಕರ ಪ್ರಸಂಗ ನಡೆಯಿತು.
ವಿಧಾನ ಪರಿಷತ್ನಲ್ಲಿ ಸಲೀಂ ಅಹಮ್ಮದ್, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಹಿಂಸೆ, ಲೈಂಗಿಕ ಶೋಷಣೆಗಳ ಕುರಿತು ಮಾಹಿತಿ ಕೇಳಿದ್ದರು.
ಆ ಪ್ರಶ್ನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಇಲಾಖೆಗೆ ವರ್ಗಾವಣೆಯಾಗಿದೆ ಎಂದು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ನಾನು ಕೇಳಿದ ಎಲ್ಲಾ ಪ್ರಶ್ನೆಗಳು ವರ್ಗಾವಣೆಯಾಗುತ್ತಿವೆ.
ನನ್ನ ಕುರ್ಚಿ ಸ್ಥಾನ ಬದಲಾವಣೆ ಮಾಡಿ ಎಂದು ಸಲೀಂ ಅಹಮ್ಮದ್ ಮನವಿ ಮಾಡಿದರು. ನಾನು ಹತ್ತು ದಿನಗಳ ಹಿಂದೆ ಪ್ರಶ್ನೆ ಕೇಳಿದ್ದೇನೆ. ಇನ್ನೂ ಯಾಕೆ ಉತ್ತರ ಕೊಟ್ಟಿಲ್ಲ. ಈ ಸರ್ಕಾರಕ್ಕೆ ಜಾ್ಞನವಿಲ್ಲವೇ ಎಂದು ಕಿಡಿಕಾರಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರಶ್ನೆ ವರ್ಗಾವಣೆಯಾಗಿದೆ ಎಂದಾಗ, ಆಗ ಮಧ್ಯ ಪ್ರವೇಶಿಸಿದ ಸಭಾಪತಿ, ಬಸವರಾಜ ಬೊಮ್ಮಾಯಿ, ಪ್ರಶ್ನೆ ಮೊದಲೇ ಕಳುಹಿಸಿರುತ್ತಾರೆ. ಕೊನೆ ಕ್ಷಣದಲ್ಲಿ ವರ್ಗಾವಣೆ ಮಾಡುವುದು ಯಾಕೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಆಧುನಿಕ ಜೀತ ಪದ್ಧತಿ ನಡೆಯುತ್ತಿದೆ.
ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಸರ್ಕಾರ ಉತ್ತರ ಕೊಡಲು ಯಾಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು. ಶುಕ್ರವಾರ ಉತ್ತರ ಕೊಡಿಸಿ ಎಂದು ಸರ್ಕಾರಕ್ಕೆ ಸೂಚಿಸುವ ಮೂಲಕ ಸಭಾಪತಿ ಅವರು ಚರ್ಚೆಗೆ ತೆರೆ ಎಳೆದರು.
#SaleemAhmed, #Session,