ಮಲ್ಲಿಕ್ ನನ್ನನ್ನು ಗುಲಾಮನಂತೆ ನಡೆಸಿಕೊಂಡಿದ್ದ: ಅಕ್ರಂ

Social Share

ಲಾಹೋರ್,ನ.29- ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದ ಸಲೀಂ ಮಲ್ಲಿಕ್ ಅವರು ಆರಂಭದ ದಿನಗಳಲ್ಲಿ ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು ಎಂದು ಪಾಕ್ ತಂಡದ ಮಾಜಿ ವೇಗಿ ವಾಸೀಂ ಅಕ್ರಂ ಆರೋಪಿಸಿದ್ದಾರೆ.

ಅಕ್ರಂ ಬರೆದಿರುವ ಜೀವನ ಚರಿತ್ರೆ ಸುಲ್ತಾನ್: ಎ ಮೆಮೋಯಿರ್ ನಲ್ಲಿ ತಮ್ಮ ತಂಡದ ಮಾಜಿ ನಾಯಕ ಮಲ್ಲಿಕ್ ವಿರುದ್ಧ ಹಲವಾರು ಗುರುತರ ಆರೋಪಗಳನ್ನು ಮಾಡಿದ್ದಾರೆ.

ಎಡಗೈ ವೇಗಿಯಾಗಿದ್ದ ಮಲಿಕ್ ತನ್ನ ಹಿರಿತನದ ಲಾಭವನ್ನು ಪಡೆದುಕೊಳ್ಳುತ್ತಿದ್ದರು ಮತ್ತು ಪ್ರವಾಸಗಳಲ್ಲಿ ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು ಎಂದು ಅವರು ತಮ್ಮ ಜೀವನ ಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಎಷ್ಟು ರೌಡಿಶೀಟರ್ ಇದ್ದಾರೆ ಲೆಕ್ಕ ಹಾಕಿಕೊಳ್ಳಿ : ಸಿಎಂ ಬೊಮ್ಮಾಯಿ

ಅವರು ನಕಾರಾತ್ಮಕ ಮತ್ತು ಸ್ವಾರ್ಥಿ ಮತ್ತು ನನ್ನನ್ನು ಸೇವಕನಂತೆ ನಡೆಸಿಕೊಂಡರು. ನಾನು ಅವನಿಗೆ ಮಸಾಜ್ ಮಾಡಬೇಕೆಂದು ಅವನು ಒತ್ತಾಯಿಸುತ್ತಿದ್ದರು. ಅವನು ಅವನ ಬಟ್ಟೆ ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಲು ನನಗೆ ಆದೇಶಿಸಿದ್ದರು ಎಂದು ಅವರು ಬಹಿರಂಗಗೊಳಿಸಿದ್ದಾರೆ.

ಅಕ್ರಂ ಅವರೊಂದಿಗೆ ಹಲವಾರು ಪಂದ್ಯಗಳನ್ನಾಡಿ ಪಾಕ್ ತಂಡದ ನಾಯಕರಾಗಿಯೂ ಮಿಂಚಿದ್ದ ಮಲ್ಲಿಕ್ ಅವರು 2000ನೇ ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಪಾಕ್ ತಂಡದಿಂದ ಹೊರಬಿದ್ದಿದ್ದರು.

ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿದ ಬಿಎಸ್‍ಎಫ್ ಪಡೆ

ಇದೀಗ ತಮ್ಮ ಒಂದು ಕಾಲದ ಜೊತೆಗಾರ ಆಟಗಾರ ಅಕ್ರಂ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಲ್ಲಿಕ್, ನಾನು ಅವನಿಗೆ ಕರೆ ಮಾಡಲು ಪ್ರಯತ್ನಿಸಿದೆ ಆದರೆ ಅವನು ಉತ್ತರಿಸಲಿಲ್ಲ. ನಾನು ಸಂಕುಚಿತ ಮನಸ್ಸಿನವನಾಗಿದ್ದರೆ, ನಾನು ಅವರಿಗೆ ಬೌಲಿಂಗ್ ಮಾಡುವ ಅವಕಾಶವನ್ನು ನೀಡುತ್ತಿರಲಿಲ್ಲ ಆದರೂ ಆತ ನನ್ನ ಬಗ್ಗೆ ಏಕೆ ಇಂತಹ ಟೀಕೆಗಳನ್ನು ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಾರೆ.

Saleem Malik, treated, me, like, servant, Wasim Akram,

Articles You Might Like

Share This Article