ನವದೆಹಲಿ,ಫೆ.6- ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಹಾಗೂ ಮಾಜಿ ನಾಯಕ ವಿರಾಟ್ ಕೋಹ್ಲಿ ಅವರು ಮತ್ತೊಮ್ಮೆ ತಮ್ಮ ವೃತ್ತಿ ಜೀವನದ ಉತ್ತುಂಗ ತಲುಪುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಭಟ್ ಭವಿಷ್ಯ ನುಡಿದಿದ್ದಾರೆ.
ಅಫ್ಘಾನಿಸ್ತಾನದ ವಿರುದ್ಧ ಅಜೇಯ 122 ರನ್ ಗಳಿಸಿದ ನಂತರ ಮತ್ತ ಶತಕ ಸಿಡಿಸಲು ಸಾಧ್ಯವಾಗದ ಕೋಹ್ಲಿ ಅವರು, ನಂತರ ಅಮೋಘ ಆಟದ ಮೂಲಕ ಮೂರು ಶತಕಗಳನ್ನು ಸಿಡಿಸಿ ಅದ್ಭುತ ಫಾರ್ಮ್‍ಗೆ ಮರಳಿದ್ದಾರೆ.
ಕೋಹ್ಲಿ ಅವರು ಶ್ರಿಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ಮಾದರಿ ಅದ್ಭುತ ಆಟಗಾರ ಅವರು ಈಗ ಫಾರ್ಮ್‍ನಲ್ಲಿದ್ದರೂ ಅವರಿಂದ ಮತ್ತಷ್ಟು ಉತ್ತಷ್ಟು ಅತ್ಯುತ್ತಮ ಆಟ ಬರಬೇಕಿದೆ ಎಂದು ಭಟ್ ಹೇಳಿದ್ದಾರೆ.
ಬಿಜೆಪಿಗರಿಗೆ ಶಶಿ ತರೂರು ತಿರುಗೇಟು
ಸಂಗಕ್ಕರ ಅವರು ಆರಂಭದಲ್ಲಿ ಉತ್ತಮ ಆಟ ಆಡಲಿಲ್ಲ ಆದರೆ, ತಮ್ಮ ವೃತ್ತಿಜೀವನದ ಕೊನೆ ಘಳಿಗೆಯಲ್ಲಿ ಅದ್ಭುತ ಆಟ ಆಡುವ ಮೂಲಕ ಗಮನ ಸೆಳೆದಿದ್ದರು ಅದೇ ರೀತಿ ವಿರಾಟ್ ಕೊಹ್ಲಿ ಅವರಿಂದ ಇನ್ನು ಅತ್ಯುತ್ತಮ ಸಾಧನೆ ಇನ್ನೂ ಬರಬೇಕಿದೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‍ನ ಮಿತಿಮೀರಿದ ಮೊತ್ತವು ಆಟಗಾರನ ಮೇಲೆ ಟೋಲ್ ತೆಗೆದುಕೊಳ್ಳುತ್ತದೆ. ಸ್ಮಾರ್ಟ್ ಆಟಗಾರರು ತಮ್ಮ ಸ್ವರೂಪವನ್ನು ಆರಿಸಿಕೊಳ್ಳುತ್ತಾರೆ ಮತ್ತು ಅದರ ಮೇಲೆ ಕೇಂದ್ರೀಕರಿಸಿ ಮುಂದುವರಿಯಬಹುದು. , ಅವರ ಭವಿಷ್ಯವನ್ನು ನಿರ್ಧರಿಸುವುದು ಕೊಹ್ಲಿಗೆ ಬಿಟ್ಟದ್ದು, ಆದರೆ ಅವರ ಅತ್ಯುತ್ತಮವಾದವು ಮತ್ತೆ ಬರುತ್ತದೆ ಎಂದು ನಾನು ಭಾವಿಸುತ್ತೇನೆ, ಎಂದು ಅವರು ಸೇರಿಸಿದರು.
ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು
ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೋಹ್ಲಿ ಮತ್ತೊಮ್ಮೆ ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದು ಭಟ್ ಅಭಿಪ್ರಾಯಪಟ್ಟಿದ್ದಾರೆ.
Salman Butt, slams, critics, Virat Kohli, T20I,