ಎಸ್‍ಪಿ ಮುಖಂಡ ಅಜಂಖಾನ್, ಮಗ ಅಬ್ದುಲ್ಲಾಗೆ 2 ವರ್ಷ ಜೈಲು ಶಿಕ್ಷೆ

Social Share

ಮೊರಾದಾಬಾದ್,ಫೆ.14- ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರ ಪುತ್ರ ಶಾಸಕ ಅಬ್ದುಲ್ಲಾ ಅಜಂ ಅವರಿಗೆ ಉತ್ತರ ಪ್ರದೇಶದ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

15 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಸಿದಂತೆ ತೀರ್ಪು ನೀಡಿರುವ ನ್ಯಾಯಾಲಯ ಅಜಂಖಾನ್ ಮತ್ತು ಅಬ್ದುಲ್ಲಾ ಅಜಂ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದರೂ ಕೋರ್ಟ್ ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ.

ಎಂಪಿ-ಎಂಎಲ್‍ಎ ವಿಶೇಷ ನ್ಯಾಯಾಲಯದ ನ್ಯಾಯಾಧಿಶರಾದ ಸ್ಮಿತಾ ಗೋಸ್ವಾಮಿ ಅವರು ಇಬ್ಬರಿಗೂ ಜೈಲು ಶಿಕ್ಷೆ ವಿಸಿದರು ಮತ್ತು ಅವರಿಗೆ ತಲಾ 3,000 ದಂಡ ವಿಧಿಸಿದರು ಎಂದು ಜಿಲ್ಲಾ ಸರ್ಕಾರಿ ವಕೀಲ ನಿತಿನ್ ಗುಪ್ತಾ ತಿಳಿಸಿದ್ದಾರೆ.

2007ರ ಡಿಸಂಬರ್‍ನಲ್ಲಿ ಉತ್ತರಪ್ರದೇಶದ ರಾಂಪುರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಶಿಬಿರಗಳ ಮೇಲಿನ ದಾಳಿ ಖಂಡಿಸಿ ಅಜಂಖಾನ್ ಮತ್ತು ಇತರ ಏಳು ಮಂದಿ 2008ರ ಜನವರಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದರು.ಈ ಕುರಿತಂತೆ ಛಜಲೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಲಯ ಉಳಿದ ಏಳು ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿ ಅಜಂಖಾನ್ ಮತ್ತು ಆತನ ಪುತ್ರನನ್ನು ಆರೋಪಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್‍ಲಾಲ್ ವಿಷ್ಣೋಯ್ ತಿಳಿಸಿದ್ದಾರೆ.

ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಆರೋಪಿಗಳ ಪರ ವಕೀಲ ಶಹನವಾಜ್ ಹುಸೇನ್ ಹೇಳಿದ್ದಾರೆ.

Samajwadi Party Leader Azam Khan, Son Get 2 Years In Jail For 2008 Protest

Articles You Might Like

Share This Article