ಮುಂಬೈ, ಫೆ.19- ಛತ್ರಪತಿ ಶಿವಾಜಿ ಮಹಾರಾಜರ ಶಿವನೇರಿ ಕೋಟೆಗೆ ಸಾರ್ವಜನಿಕರು ಭೇಟಿ ನೀಡಲು ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಮರಾಠ ರಾಜಮನೆತನದ ಸದಸ್ಯ ಸಂಭಾಜಿ ರಾಜೇ ಛತ್ರಪತಿ ಆರೋಪಿಸಿದ್ದಾರೆ.
ಗಣ್ಯ ವ್ಯಕ್ತಿಗಳ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿಗೆ ಅಡ್ಡಿ ಪಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಿವಾಜಿ ಮಹಾರಾಜರು 1630 ರಲ್ಲಿ ಶಿವನೇರಿ ಕೋಟೆಯಲ್ಲಿ ಜನಿಸಿದರು. ಇಂದು ಅವರ ಜನ್ಮ ದಿನವಾಗಿದ್ದು, ಇದರ ಅಂಗವಾಗಿ ಸಾವಿರಾರು ಮಂದಿ ಕೋಟೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಪೊಲೀಸರು ಅವರನ್ನು ತಡೆದು ನಿಲ್ಲಿಸುತ್ತಿದ್ದಾರೆ.
ಆರತಕ್ಷತೆ ವೇಳೆ ರಸಗುಲ್ಲಕ್ಕಾಗಿ ಬಿತ್ತು 4 ಜನರ ಹೆಣ..!
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಬೆಳಗ್ಗೆ ಕೋಟೆಗೆ ಭೇಟಿ ನೀಡಿದರು. ಮುಂದಿನ ವರ್ಷದಿಂದ ಶಿವನೇರಿ ಕೋಟೆಗೆ ಭೇಟಿ ನೀಡುವ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರಾಜ್ಯಸಭೆಯ ಮಾಜಿ ಸದಸ್ಯರು ಆಗಿರುವ ಸಾಂಭಾಜಿ ಛತ್ರಪತಿ, ಭಾನುವಾರ ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಆದರೆ ಅವರಿಗೆ ಕೋಟೆಗೆ ನಿಗದಿತ ಸಮಯಕ್ಕೆ ಭೇಟಿ ನೀಡಲು ತೊಂದರೆಯಾಗಿತ್ತು. ನಂತರ ಕೋಟೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕೋಟೆಯ ಬಳಿ ಇದ್ದಾಗ, ಕೆಲವು ಶಿವಭಕ್ತರು ನನ್ನ ಬಳಿಗೆ ಬಂದು ಕೋಟೆಗೆ ಭೇಟಿ ನೀಡದಂತೆ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ದೂರಿದರು.
ಪೊಲೀಸರು ಅಡ್ಡಿ ಪಡಿಸುತ್ತಿರುವುದೇಕೆ. ಜನಸಂದಣಿಯಿಂದ ಕಾಲ್ತುಳಿತದಂತಹ ಅಹಿತಕರ ಘಟನೆ ನಡೆದರೆ ಯಾರು ಹೊಣೆ ಎಂದು ಕಿಡಿಕಾರಿದರು. ಇದು ಅತ್ಯಂತ ಅನ್ಯಾಯ. ಶಿವನೇರಿ ಕೋಟೆಗೆ ಭೇಟಿ ನೀಡುವ ಶಿವಭಕ್ತರಿಗೆ ತೊಂದರೆಯಾಗಬಾರದು ಎಂದು ಎಚ್ಚರಿಸಿದರು.
ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶಿಂಧೆ, ಸಂಭಾಜಿ ಛತ್ರಪತಿ ಅವರ ಹೇಳಿಕೆಯನ್ನು ಕೇಳಿದ್ದೇನೆ. ಮುಂದಿನ ವರ್ಷ ಶಿವನೇರಿ ಕೋಟೆಗೆ ಭೇಟಿ ನೀಡುವ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ವಿಚಾರಣೆಗೆ ಕಾಲವಕಾಶ ಕೋರಿದ ಮನೀಷ್ ಸಿಸೋಡಿಯಾ
ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಮುಂದಿನ ವರ್ಷ ಉತ್ತಮ ವ್ಯವಸ್ಥೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ. ಈ ಕುರಿತು ಶೀಘ್ರವೇ ಸಭೆ ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವನೇರಿ ಕೋಟೆ ಇರುವ ಕ್ಷೇತ್ರದಲ್ಲಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಅಮೋಲ್ ಕೋಲ್ಹೆ, ಶಿವನೇರಿ ಕೋಟೆಯ ಮೇಲೆ ಶಾಶ್ವತ ಕೇಸರಿ ಧ್ವಜ ಹಾರಿಸಬೇಕು. ಈ ಬೇಡಿಕೆ ಈಡೇರಿಕೆಗೆ ಭಗವಾ ಜನೀವ್ ಆಂದೋಲನವನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದರು. ಕೋಟೆಯ ಮೇಲೆ ಧ್ವಜ ರೋಹಣಕ್ಕೆ ಯಾವುದೇ ರೀತಿಯ ಆಕ್ಷೇಪಣೆ ವ್ಯಕ್ತವಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.
Sambhaji, Chhatrapati, claims, Shivaji Maharaj, followers, stopped, visiting, Pune fort,