ಬೆಂಗಳೂರು,ಸೆ.30- ಮಳೆಗಾಲ ಮುಗಿದ ಕೂಡಲೇ ಮರಳಿನ ನಿಕ್ಷೇಪಗಳನ್ನು ಹಂಚಿಕೆ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಕನ್ನಡ ಭಾಗದ 15 ಜಿಲ್ಲೆಗಳನ್ನು ಹಟ್ಟಿ ಚಿನ್ನದ ಗಣಿ ನಿಗಮಕ್ಕೆ ಹಾಗೂ ದ.ಕರ್ನಾಟಕದ 15 ಜಿಲ್ಲೆಗಳನ್ನು ರಾಜ್ಯ ಖನಿಜ ನಿಗಮಕ್ಕೆ ನೀಡಲಾಗಿದ್ದು, ಈವರೆಡೂ ನಿಗಮಗಳ ಮೂಲಕ ಮರಳು ನಿಕ್ಷೇಪ ಹಂಚಿಕೆಯಾಗಲಿದೆ.
ಪ್ರತಿ ಟನ್ಗೆ 800 ರೂ. ನಿಗದಪಡಿಸಲಾಗಿದೆ. ಹರಿಯುವ ನೀರಿನಲ್ಲಿ ಮರಳು ತೆಗೆಯುವುದನ್ನು ನಿಷೇಸಲಾಗಿದೆ. ರಾಜ್ಯಕ್ಕೆ ವಾರ್ಷಿಕ 45 ದಶಲಕ್ಷ ಮೆಟ್ರಿಕ್ ಟನ್ ಬೇಡಿಕೆಯಿದ್ದು, 35 ದಶಲಕ್ಷ ಮೆಟ್ರಿಕ್ ಟನ್ ಎಂಸ್ಯಾಂಡ್ ಪೂರೈಕೆಯಾಗುತ್ತಿದೆ. ಇದರ ಮೂಲಕವೇ ಅಭಿವೃದ್ದಿ ಕಾಮಗಾರಿಗಲು ನಡೆಯುತ್ತಿವೆ ಎಂದರು.
ಸ್ವಾಭಾವಿಕ ಮರಳು ಲಭ್ಯತೆ ವಿರಳವಾಗಿದೆ. ಹಿಂದಿನ ಸರ್ಕಾರದಲ್ಲಿ ವಿದೇಶದಿಂದ ಮರಳು ಆಮದು ಮಾಡಿಕೊಳ್ಳಲಾಗಿತ್ತು. ಅದರಿಂದ ಸರ್ಕಾರಕ್ಕೆ ನಷ್ಟವಾಗಿದೆ ಎಂದರು.ಕೈಗಾರಿಕಾ ಸ್ನೇಹಿಯಾಗುವಂತೆ ಕಲ್ಲು-ಕ್ವಾರಿ ನಿಯಮಗಳನ್ನು ಸರಳೀಕರಣಗೊಳಿಸಲಾಗುತ್ತಿದ್ದು, ಕರಡು ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.
ಅಂಗನವಾಡಿಗಳ ಮೂಲಕ ಮೊಟ್ಟೆ ನೀಡುವುದನ್ನು ತಾಲ್ಲೂಕು ಮಟ್ಟದಲ್ಲೇ ಟೆಂಡರ್ ಮೂಲಕ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಔಷ ಖರೀದಿಗೆ ಸಂಬಂಧಿಸಿದಂತೆ ಅಂಗನವಾಡಿಗಳಿಗೆ 1500 ರೂ, ಮಿನಿ ಅಂಗನವಾಡಿಗಿಗೆ 750 ರೂ. ನೇರವಾಗಿ ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರ ಗೌರವ ಧನವನ್ನು ಒಂದು ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದ್ದು, ಹೊಸ ಪಿಂಚಣಿ ಸೇವೆ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 66,361 ಅಂಗವಾಡಿಗಳು 3,364 ಮಿನಿ ಅಂಗನವಾಡಿಗಳಿವೆ. ರಾಜ್ಯದಲ್ಲಿ 4244 ಹೊಸ ಅಂಗನವಾಡಿ ಗಳನ್ನು ರಾಜ್ಯ ಸರ್ಕಾರದ ಅನುದಾನ ದಲ್ಲೇ ಆರಂಭಿಸಲಾಗುತ್ತದೆ. ಹೊಸ ಅಂಗನವಾಡಿಗಳಿಗೆ ಕೇಂದ್ರ ಸರ್ಕಾರದಲ್ಲಿ ಮಂಜೂರಾತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯವರೆಗೂ ಕಾಯದೆ ರಾಜ್ಯ ಸರ್ಕಾರವೇ 268ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲು ಮುಂದಾಗಿದೆ ಎಂದರು.
ರಾಜ್ಯದಲ್ಲಿನ ನೊಂದಾಯಿತ 35 ವೃದ್ದಾಶ್ರಮಗಳಿಗೆ ನೀಡಲಾಗುತ್ತಿದ್ದ ತಲಾ ವಾರ್ಷಿಕ 8 ಲಕ್ಷ ಅನುದಾನವನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದಿಂದ 49 ಸ್ವಯಂಸೇವಕರಿಗೆ ತಲಾ 25 ಲಕ್ಷ ರೂ. ಅನುದಾನ ದೊರೆಯಲಿದೆ.2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 58 ಲಕ್ಷ ಹಿರಿಯ ನಾಗರಿಕರಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಮಾಶಾಸನ ನೀಡಲಾಗುತ್ತಿದ್ದು, 41.61 ಲಕ್ಷ ಫಲಾನುಭವಿಗಳಿಗೆ ಮಾಸಾಶನ ಪಡೆಯುತ್ತಿದ್ದಾರೆ.
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 1200 ರೂ. ಮಾಶಾಸನ ನೀಡಲಾಗುತ್ತಿದೆ ಎಂದ ಅವರು, ನಾಳೆ ರಾಷ್ಟ್ರೀಯ ಹಿರಿಯ ನಾಗರಿಕರ ಚುನಾವಣೆ ಆಚರಿಸಲಿದ್ದು, ಕ್ರೀಡೆ, ಸಾಹಿತ್ಯ ನ್ಯಾಯಾಂಗ ಸೇರಿದಂತೆ ವಿವಿಧ ಕ್ಷೇತ್ರದ 6 ಮಂದಿಗೆ ಹಾಗೂ ಒಂದು ಸಂಸ್ಥೆಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.