ಬೆಂಗಳೂರು,ಜ.29- ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್ ರಾಯ್ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ರಾತ್ರಿ ಕಳೆದ 2ಗಂಟೆ ಸುಮಾರಿಗೆ ಬೆಂಗಳೂರಿನ ಭೈರಸಂದ್ರದಲ್ಲಿರುವ ಅವರ ನಿವಾಸದಲ್ಲಿ ಮಲಗಿರುವಾಗಲೆ ಹೃದಯಾಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಅವರಿಗೆ ಹೃದಯಾಘಾತವಾಗಿತ್ತು, ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಕನ್ನಡದ ಖ್ಯಾತ ನಟರಾದ ಢಾ.ರಾಜ್ಕುಮಾರ್,ಅನಂತ್ ನಾಗ್, ಶಂಕರ್ ನಾಗ್ , ವಿಷ್ಣುವರ್ಧನ್ ಸೇರಿ ಅನೇಕ ನಾಯಕ ನಟರು, ಪ್ರಮುಖ ನಟರ ಜೊತೆ ಮಂದೀಪ್ ರಾಯ್ ನಟಿಸಿದ್ದರು
ಬಹುತೇಕ ಹಾಸ್ಯಪಾತ್ರದಲ್ಲಿ ನಟಿಸಿ ಗಮನಸೆಳೆದಿದ್ದರು ಇದುವರೆಗೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸೋದ್ ತಪ್ಪಾ, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಜನಪ್ರೀಯತೆ ತಂದುಕೊಟ್ಟಿತ್ತು.
ಇಂದು ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು ಮಂದೀಪ್ ರಾಯ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಡಿದು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
#Sandalwood, #actor, #MandeepRoy, #passesaway,