ಬೆಂಗಳೂರು.ಜ.23-ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಗಮನ ಸೆಳೆದಿದ್ದ ಹಿರಿಯ ನಟ ಲಕ್ಷ್ಮಣ್(74) ಹೃದಯಾಘಾತದಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಯಜಮಾನ ಸೂರ್ಯವಂಶ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟ್ಟಿಸಿದ್ದ ಅವರು ಹಾಸ್ಯ-ನೆಗೆಟೀವ್ ರೋಲ್ನಲ್ಲೂ ಮಿಂಚಿದ್ದರು . ಕಳೆದ ರಾತ್ರಿ ಲಕ್ಷ್ಮಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ಮುಂಜಾನೆ 3.30 ಸುಮಾರಿಗೆ ಮನೆಯವರು ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಸಿಜಿ ಮಾಡಿದ ನಂತರ ಚೇತರಿಸಿಕೊಂಡಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಕಾರು-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಐವರ ಸಾವು
ಆದರೆ ಬೆಳಿಗ್ಗೆ ಮತ್ತೆ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟರು ಎಂದು ಹೇಳಲಾಗುತ್ತಿದೆ. ನಾಗರಬಾವಿಯ ಅವರ ಮನೆಯಲ್ಲಿ ಆವರಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಲಕ್ಷ್ಮಣ್ ನಿಧನಕ್ಕೆ ಸ್ಯಾಂಡಲ ವುಡ್ ನಟ ನಟಿಯರು ನಿರ್ಮಾಪಕರು ನಿರ್ದೇಶಕರು ಹಾಗೂ ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.
Sandalwood, veteran, actor, Lakshman, passed away,