8 ಕೋಟಿ ರೂ. ಮೌಲ್ಯದ  ರಕ್ತಚಂದನ ವಶ, ಮೂವರ ಸೆರೆ

ಭೂಪಾಲ್,- ಅಂತಾರಾಜ್ಯ ರಕ್ತಚಂದನ ಕಳ್ಳ ಸಾಗಾಣೆಯ ವ್ಯವಸ್ಥಿತ ಜಾಲವೊಂದನ್ನು ಬೇಧಿಸಿರುವ ಮಧ್ಯಪ್ರದೇಶ ಅರಣ್ಯ ಇಲಾಖೆ ವಿಶೇಷ ಕಾರ್ಯ ಪಡೆ ಮೂವರನ್ನು ಬಂಧಿಸಿ 8 ಕೋಟಿ ರೂ. ಮೌಲ್ಯದ 15,500 ಕೆ.ಜಿ. ರೆಡ್‍ಸ್ಯಾಂಡಲ್ ವಶಪಡಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ದಾರ್ ಜಿಲ್ಲೆಯ ತಲಘಟ್ ಬಳಿ ವಾಹನವೊಂದನ್ನು ತಡೆದು ಪರಿಶೀಲಿಸಿದ ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ಅದರಲ್ಲಿ 15,500 ಕೆ.ಜಿ. ರಕ್ತಚಂದನ ಇದ್ದದ್ದು ಪತ್ತೆಯಾಯಿತು.

ವಾಹನ ಸಮೇತ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರು ತಮಿಳುನಾಡಿ ನವರಾಗಿದ್ದು , ಅವರು ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ಇವುಗಳನ್ನು ಸಾಗಿಸುತ್ತಿದ್ದ ಸಂಗತಿ ತಿಳಿಯಿತು. ಅಲ್ಲದೆ ಈ ಪ್ರಕರಣದ ಪ್ರಮುಖ ವ್ಯಕ್ತಿ ತಮಿಳುನಾಡಿನ ತಿರುವಳ್ಳವರ್ ಜಿಲ್ಲೆಯ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು.

ತಿರುಮಲ ತಿರುಪತಿ ದೇವಸ್ಥಾನದ ಅರಣ್ಯದ ಸಂರಕ್ಷಿತ ಪ್ರದೇಶದಿಂದ ಇವುಗಳನ್ನು ಕತ್ತರಿಸಿ ಕಳ್ಳ ಸಾಗಣೆ ಮಾಡಿದ ಮಾಹಿತಿ ಲಭಿಸಿದೆ.