ಮುಂಬೈ,ನ.29- ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ವಕ್ತಾರ ಸಂಜಯ್ ರಾವತ್, ಕಾಶ್ಮೀರಿ ಫೈಲ್ಸ್ 2.0 ಚಿತ್ರ ಮಾಡುವಂತೆ ಸವಾಲೆಸೆದಿದ್ದಾರೆ.
ಚಿತ್ರದ ಕುರಿತು ಇಸ್ರೇಲ್‍ನ ನಡ್ವಾಲಾಪಿಡ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಚಿತ್ರದ ಹಿಂದೆ ಅಪಪ್ರಚಾರ ಅಡಗಿದೆ ಎಂದು ತಿಳಿಸಿದ್ದಾರೆ.
ಚಿತ್ರವನ್ನು ಆಧಾರವಾಗಿಟ್ಟುಕೊಂಡು ಒಂದು ಪಕ್ಷ ಮತ್ತೊಂದು ಪಕ್ಷದ ವಿರುದ್ಧ ಅಪಪ್ರಚಾರ ಮಾಡುವುದರಲ್ಲಿ ತೊಡಗಿದೆ. ಕಾಶ್ಮೀರಿ ಫೈಲ್ಸ್ ಚಿತ್ರ ಬಿಡುಗಡೆಯಾದ ನಂತರ ಕಾಶ್ಮೀರದಲ್ಲಿ ಗರಿಷ್ಠ ಪ್ರಮಾಣದ ಹತ್ಯೆಗಳಾಗಿವೆ.
ವಿದ್ಯಾರ್ಥಿ ವೇತನ ಸ್ಥಗಿತ: ಕೇಂದ್ರದ ತೊಘಲಕ್ ನಿರ್ಧಾರದ ವಿರುದ್ಧ ಸುರ್ಜೆವಾಲ ಆಕ್ರೋಶ
ಕಾಶ್ಮೀರ ಪಂಡಿತರು, ಭದ್ರತಾ ಸಿಬ್ಬಂದಿಗಳು ಹತ್ಯೆಯಾಗುತ್ತಿದ್ದಾರೆ. ಖುದ್ದು ಕಾಶ್ಮೀರಿ ಪಂಡಿತರ ಕುಟುಂಬಗಳೇ ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಆದರೆ ಪಕ್ಷ ಮತ್ತು ಸರ್ಕಾರ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಬದಲಾಗಿ ರಾಜಕೀಯ ಲಾಭಕ್ಕಾಗಿ ಚಿತ್ರವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಧರ್ಮ ದಂಗಲ್: ಪೊಲೀಸ್ ಭದ್ರತೆಯಲ್ಲಿ ಸುಬ್ರಮಣ್ಯಸ್ವಾಮಿ ರಥೋತ್ಸವ
ವಾಸ್ತವ ಸಂಗತಿಗಳನ್ನು ಮುಂದಿಟ್ಟುಕೊಂಡು ಇತ್ತೀಚಿನ ಬೆಳವಣಿಗೆಗಳನ್ನು ಆಧರಿಸಿ 2ನೇ ಹಂತದ ಕಾಶ್ಮೀರಿ ಫೈಲ್ಸ್ ಚಿತ್ರ ಮಾಡಿ ಎಂದು ಅವರು ಸವಾಲು ಹಾಕಿದ್ದಾರೆ.
Sanjay Raut, IFFI, jury, head, remarks, Make, KashmirFiles2.0