ಶಿವಸೇನೆ ಸಂಸದ ಸಂಜಯ್ ರಾವತ್ ಅರೆಸ್ಟ್

Social Share

ಮುಂಬೈ, ಆ.1- ಮುಂಬೈನ ಚಾವಾಲ್ ಅಭಿವೃದ್ಧಿ ಯೋಜನೆಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ರಾಜ್ಯ ಸಭೆ ಸದಸ್ಯ ಸಂಜಯ್ ರಾವತ್ ಅವರನ್ನು ತಡರಾತ್ರಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಹಲವು ದಾಖಲೆ ಸೇರಿ 11.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ . ನಿವಾಸದಲ್ಲಿ 9 ತಾಸು ಶೋಧ ನಂತರ ನಿನ್ನೆ ಸಂಜೆ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‍ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ ರಾವತ್ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ಬಳಿಕ ತನಿಖೆಗೆ ಸಹಕರಿಸದ ಕಾರಣ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈನ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು, ಅಲ್ಲಿ ಜಾರಿ ನಿರ್ದೇಶನಾಲಯವು ಅವರ ಕಸ್ಟಡಿಗೆ ಕೋರಲಿದೆ ಎಂದುಬ ತಿಳಿಸಿದ್ದಾರೆ.

ಇಡಿ ಕಳೆದ ಏಪ್ರಿಲ್‍ನಲ್ಲಿ ಈ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರಿಗೆ ಸೇರಿದ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಸಂಜಯ್ ರಾವುತ್ ಅವರ ಸಹಾಯಕ ಮತ್ತು ಗುರು ಆಶಿಶ್ ಕನ್‍ಸ್ಟ್ರಕ್ಷನ್ ಸಂಸ್ಥೆಯ ಮಾಜಿ ನಿರ್ದೇಶಕರಾದ ಪ್ರವೀಣ್ ಎಂ ರಾವುತ್ ಅವರು ಪಾಲ್ಘರ್‍ಗೂ ಬಿಸಿ ತಟ್ಟಿದೆ.

ಥಾಣೆ ಜಿಲ್ಲೇಯಲ್ಲಿ ಹೊಂದಿರುವ ಜಮೀನಿನ ದಾಖಲೆ ವರ್ಷಾ ರಾವುತ್ ಹೆಸರಲ್ಲಿದೆ ಮುಂಬೈನ ಉಪನಗರ ದಾದನರ್‍ನಲ್ಲಿರುವ ಫ್ಲಾಟ್ ಮತ್ತು ಅಲಿಬಾಗನ ಕಿಹಿಮ್ ಬೀಚ್‍ನಲ್ಲಿರುವ ಎಂಟು ಪ್ಲಾಟ್‍ಗಳು ವರ್ಷಾ ರಾವುತ್ ಮತ್ತು ಸಂಜಯ್ ರಾವತ್ ಅವರ ಆಪ್ತ ಸಹಚರ ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಜಂಟಿಯಾಗಿ ಹೊಂದಿದ್ದಾರೆ ಎಂದು ಇಡಿ ತಿಳಿಸಿದೆ.

Articles You Might Like

Share This Article