ಮೈಸೂರು,ಜ.11- ಸ್ಯಾಂಟ್ರೊ ರವಿ ವಿರುದ್ಧ ರೇಪ್ ಕೇಸ್ ಮತ್ತು ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಆತನ ಬಂಧನಕ್ಕೆ ನಾಲ್ಕು ತಂಡ ರಚಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಟರ್ ನ್ಯಾಷನಲ್ ಇಮಿಗ್ರೆಷನ್ ಚೆಕ್ ಪೋಸ್ಟ್ ಲುಕ್ ಔಟ್ ನೋಟಿಸ್ ಸಕ್ಯೂಲರ್ ಕೂಡ ಕೊಟ್ಟಿದ್ದೇವೆ ಎಂದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಆತನ ಪತ್ನಿ ವನಜಾಕ್ಷಿಯನ್ನು ವಿಚಾರಣೆಗೆ ಒಳಪಡಿಸಿ, ಸ್ಯಾಂಟ್ರೊ ರವಿಯ ಹಣಕಾಸು ವ್ಯವಹಾರ, ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಸ್ಯಾಂಟ್ರೊ ರವಿ ಮೊಬೈಲ್ ಬಳಸುತ್ತಿಲ್ಲ. ಆದ ಕಾರಣ ಸಿಕ್ಕಿ ಬೀಳುತ್ತಿಲ್ಲ. ಆದರೂ, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇಡೀ ರಾಜ್ಯದಲ್ಲೇ ಬಿರುಗಾಳಿ ಎಬ್ಬಿಸಿರುವ ಸ್ಯಾಂಟ್ರೊ ರವಿ ಹೆಡೆಮುರಿ ಕಟ್ಟಲು ಎಡಿಜಿಪಿ ಅಲೋಕ್ ಕುಮಾರ್ ನಗರದಲ್ಲಿ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ, ಅಲೋಕ್ ಕುಮಾರ್ ಅವರ ಮುಂದೆ ಸ್ಯಾಂಟ್ರೊ ರವಿಯ ಪತ್ನಿ ಖುದ್ದು ಹಾಜರಾಗಿ ಕಾಮುಕನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೆ ಅಲ್ಲದೆ ಸ್ಯಾಂಟ್ರೊ ರವಿ ಕಟ್ಟಿರುವ ಕಾಮುಕ ಲೋಕದ ಸಾಮ್ರಾಜ್ಯವನ್ನು ಅನಾವರಣಗೊಳಿಸಿದ್ದಾರೆ.
ಪಾಕ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ವಿರುದ್ಧ ಬಂಧನ ವಾರಂಟ್ ಜಾರಿ
ಸ್ಯಾಂಟ್ರೊ ರವಿಯ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದು, ಇಂಟರ್ನ್ಯಾಷನಲ್ ಇಮಿಗ್ರೇಷನ್ ಚೆಕ್ ಪೋಸ್ಟ್ನಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವ ಸ್ಯಾಂಟ್ರೊ ರವಿಗೆ ಕೋಳ ತೊಡಿಸಲು ಖಾಕಿ ವ್ಯಾಪಕ ಜಾಲ ಬೀಧಿಸಿದೆ.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಎಡಿಜಿಪಿ ಮುಂದೆ ಖದ್ದು ಹಾಜರಾದ ಸ್ಯಾಂಟ್ರೊ ರವಿಯ ನಾಲ್ಕನೆ ಪತ್ನಿ, ಆತನ ಕಾಮುಕ ಕರ್ಮ ಕಾಂಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ತನಗಾದ ಅನ್ಯಾಯವನ್ನು ಸಂತ್ರಸ್ತೆ ಸುದೀರ್ಘವಾಗಿ ವಿವರಿಸಿದರು.
ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ನನಗೆ ನೀಡಿದ ಕಿರುಕುಳವನ್ನು ಎಡಿಜಿಪಿ ಅವರಿಗೆ ವಿವರಿಸಿದ್ದೇನೆ. ಅವರು ಅಮಾನತು ಆಗಬೇಕು. ಅಷ್ಟೆ ಅಲ್ಲದೆ ಸ್ಯಾಂಟ್ರೊ ರವಿಯನ್ನು ಬಂಧಿಸಬೇಕು. ಕಾನೂನಿನ ಮೇಲೆ ನನಗೆ ಅಪಾರ ಗೌರವ ಇದೆ. ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಸಂತ್ರಸ್ಥೆ ಮಾಧÀ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.
ಸಂತ್ರಸ್ಥೆ ಜೊತೆಗೆ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರುಶು ಕೂಡ ಹಾಜರಾಗಿ ಸ್ಯಾಂಟ್ರೊ ರವಿಯ ಕಾಮುಕ ಲೋಕದ ಬಗ್ಗೆ ಫೋಟೋ, ವಿಡಿಯೋ ಸೇರಿದಂತೆ ದಾಖಲಾತಿಯ ಸಾಕ್ಷ್ಯ ನೀಡಿದ್ದಾರೆ.
ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ
ಎಡಿಜಿಪಿ ಅಲೋಕ್ ಕುಮಾರ್ ಸಂತ್ರಸ್ಥೆ ಮತ್ತು ಆಕೆಯ ತಂಗಿಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದರು. ಹೈ ವೋಲ್ಟೇಜ್ ಮೀಟಿಂಗ್ ನಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಸೇರಿದಂತೆ ತನಿಖಾಧಿಕಾರಿಗಳು ಭಾಗಿಯಾಗಿ ಸ್ಯಾಂಟ್ರೊ ರವಿಯ ಮೈಸೂರಿನ ಇತಿಹಾಸ ಏನೆಂದು ವಿವರಿಸಿದ್ದಾರೆ.
Santro Ravi, arrest, Four, special team, ADGP, Alok Kumar, Mysore,