ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

Social Share

ಬೆಂಗಳೂರು,ಜ.16-ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದ್ದ ಸ್ಯಾಂಟ್ರೊ ರವಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಕಳೆದ ಮೂರು ದಿನಗಳ ಹಿಂದೆ ಗುಜರಾತ್‍ನ ಅಹಮಾದಾಬಾದ್‍ನಲ್ಲಿ ಬಂಧನಕ್ಕೊಳಪಟ್ಟು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿ ತನಿಖೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಧಿಅಕಾರಿಗಳ ವರ್ಗಾವಣೆ, ಮಾನವ ಕಳ್ಳಸಾಗಾಣಿಕೆ, ವಂಚನೆ, 2ನೇ ಪತ್ನಿ ಮೇಲೆ ಅತ್ಯಾಚಾರ ಆರೋಪ ಸೇರಿದಂತೆ ಹಲವಾರು ಪ್ರಕರಣಗಳು ಈತನ ಮೇಲಿದೆ. ಈತನ ಮೇಲೆ ಕೇಳಿಬಂದಿರುವ ಆರೋಪಗಳ ಕುರಿತು ಸಿಐಡಿಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆತನ 2ನೇ ಪತ್ನಿ ನೀಡಿದ್ದ ದೂರಿನ ಮೇರೆಗೆ ತನಿಖೆಗೆ ಸರ್ಕಾರ ಸೂಚನೆ ನೀಡಿದೆ.

ನಗರದ ಕುಮಾರಕೃಪ ಅತಿಥಿಗೃಹದಲ್ಲಿ ತನಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ಸಚಿವರು ಚಿರಪರಿಚಿತರು ಎಂದು ಹೇಳಿಕೊಂಡು ಹಲವು ಅಧಿಕಾರಿಗಳು ವರ್ಗಾವಣೆ ಮಾಡಿಸಿದ್ದ ಎಂಬ ಆರೋಪವಿದೆ.

ಹಣ ವರ್ಗಾವಣೆ ವಂಚನೆ ಆರೋಪದಡಿ ಸ್ಯಾಂಟ್ರೋ ರವಿ ವಿರುದ್ಧ ಜಗದೀಶ್ ಎಂಬುವರು ಆರ್‍ಆರ್‍ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಲವು ವರ್ಷಗಳಿಂದ ರವಿಯು ಹನಿ ಟ್ರ್ಯಾಪಿಂಗ್‍ಅಥವಾ ಬ್ಲ್ಯಾಕ್‍ಮೇಲ್ ಮಾಡುವ ಮೂಲಕ ಗಣ್ಯರಿಂದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ತನ್ನ ಇತರ ಕೆಲಸವನ್ನು ಮಾಡಲು ಪ್ರಾರಂಭಿಸಿದ್ದ ಎಂದು ತಿಳಿದುಬಂದಿದೆ.

ನೇಪಾಳ ವಿಮಾನ ದುರಂತದಲ್ಲಿ ಎಲ್ಲಾ 72 ಪ್ರಯಾಣಿಕರ ಸಾವು..!

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಾಟ್ಸಪ್ ಮೆಸೇಜ್‍ಗಳು , ಸ್ಯಾಂಟ್ರೊ ರವಿ ಜೊತೆಗಿದ್ದ ಫೋಟೋಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

ಇದು ಹೊರಬೀಳುತ್ತಿದ್ದಂತೆ ಸ್ಯಾಂಟ್ರೊ ರವಿ ತಲೆಮರೆಸಿಕೊಂಡು ಗುಜರಾತ್‍ಗೆ ಪರಾರಿಯಾಗಿದ್ದ. ಸ್ಯಾಂಟ್ರೋ ರವಿ ದೇಶದಿಂದ ಪರಾರಿಯಾಗುವುದನ್ನು ತಡೆಯಲು ಆತನ ವಿರುದ್ಧ ಲುಕ್‍ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಆತನ ಬಂಧನಕ್ಕಾಗಿ ನಾಲ್ವರು ಎಸ್‍ಪಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸ್ಯಾಂಟ್ರೋ ರವಿ ಆಮಿಷಕ್ಕೆ ಒಳಗಾಗುವಂತ ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

ಸ್ಯಾಂಟ್ರೋ ರವಿ ರಾಜ್ಯ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿಯ ಮಗ. ರವಿ, 1995 ರಿಂದ ಮಾನವ ಕಳ್ಳಸಾಗಣೆದಾರನಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು 1988ರಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯ ಮೇಲೆ ದೈಹಿಕ ದೌರ್ಜನ್ಯ ನಡೆಸಿ ಅದನ್ನು ಮುಚ್ಚಿಡಲು ಪ್ರಯತ್ನಿಸಿದ ಕೆಲವು ದಿನಗಳ ನಂತರ ಅವನನ್ನು ಬಂಧಿಸಲಾಗಿತ್ತು, ಆದರೆ ಅನಾರೋಗ್ಯದ ನೆಪದಲ್ಲಿ ಮೈಸೂರು ಮೂಲದ ಕೆಆರ್ ಆಸ್ಪತ್ರೆಯಿಂದ ಪರಾರಿಯಾಗಿದ್ದ.
ಈ ಎಲ್ಲಾ ಪ್ರಕರಣಗಳನ್ನು ತನಿಖೆ ನಡೆಸಲು ಸರ್ಕಾರ ಸಿಐಡಿಗೆ ಸೂಚಿಸಿದೆ.

Articles You Might Like

Share This Article