ಸ್ಯಾಂಟ್ರೋ ರವಿ ವಿರುದ್ಧದ 20 ವರ್ಷ ಹಿಂದಿನ ಪ್ರಕರಣ ತನಿಖೆ : ಸಿಎಂ

Social Share

ಮೈಸೂರು,ಜ.7- ರೌಡಿಶೀಟರ್ ಸ್ಯಾಂಟ್ರೊ ರವಿ ಮೇಲೆ ಕೇಳಿ ಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈತನ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ರೌಡಿ ಚಟುವಟಿಕೆ ಸೇರಿದಂತೆ 20 ವರ್ಷಗಳ ಹಿಂದಿನ ಪ್ರಕರಣವನ್ನು ತನಿಖೆ ಮಾಡುತ್ತೇವೆ. ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ. ಈಗಾಗಲೇ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾನ್ಮುಖರಾಗಿದ್ದಾರೆ ಎಂದು ತಿಳಿಸಿದರು.

ಸ್ಯಾಂಟ್ರೋ ರವಿ ಕೇವಲ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿಲ್ಲ. ಆತ ವಿಪಕ್ಷ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾನೆ. ತನಿಖೆ ನಡೆಯದೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾರೇ ಇರಲಿ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಅವರನ್ನು ರಕ್ಷಣೆ ಮಾಡಿ ನಮಗೆ ಆಗಬೇಕಾದ ಅನುಕೂಲವಾದರೂ ಏನು ಎಂದು ಪ್ರಶ್ನಿಸಿದರು.

ವಿಷಾಹಾರ ಸೇವನೆ : ಕೇರಳದ ಯುವತಿ ಮಂಗಳೂರಿನಲ್ಲಿ ನಿಧನ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಪ್ರಶ್ನೆ ಬೇಡ. ಕಾನೂನು ಬಾಹಿರ ಚಟುವಟಿಕೆ ಯಾರೇ ನಡೆಸಿದ್ದರೂ ತಪ್ಪು ತಪ್ಪೆ. ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆಸಲು ಖುದ್ದು ನಮ್ಮ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರೇ ಸೂಚಿಸಿದ್ದಾರೆ. ಯಾರನ್ನೂ ಕೂಡ ರಕ್ಷಣೆ ಮಾಡುವುದಿಲ್ಲ. ಪ್ರತಿಪಕ್ಷಗಳ ನಾಯಕರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿರುಗೇಟು ನೀಡಿದರು.

ಸ್ಯಾಂಟ್ರೋ ರವಿ ಜತೆ ಫೋಟೋಗಳು, ಆತನಿಗೆ ಕರೆ ಮಾಡಿರುವ ದೂರವಾಣಿ ಕರೆಗಳು ನಕಲಿ. ಕುಮಾರ ಕೃಪದಲ್ಲಿ ಅವರ ಜತೆ ವರ್ಗಾವಣೆಯಲ್ಲಿ ಶಾಮೀಲಾಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು, ಎಲ್ಲಾ ಆಯಾಮಗಳಲ್ಲೂ ಸರ್ಕಾರ ತನಿಖೆ ನಡೆಸುತ್ತದೆ. ಒಂದು ವೇಳೆ ಆತ ತಲೆ ಮರೆಸಿಕೊಂಡಿದ್ದರೂ ಪೊಲೀಸರು ಬಂಧಿಸಲು ಸ್ವತಂತ್ರರು ಎಂದು ತಿಳಿಸಿದರು.

ಆತ ಹಲವಾರು ವರ್ಷಗಳಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬುದರ ಕುರಿತು ತನಿಖೆ ನಡೆಸುತ್ತೇವೆ. ನನ್ನ ಮಗನ ಜತೆ ಆತ ಎಲ್ಲಿಯೂ ಮಾತುಕತೆ ನಡೆಸಿಲ್ಲ. ವಿರೋಧ ಪಕ್ಷಗಳು ಆಧಾರ ರಹಿತವಾಗಿ ಆರೋಪ ಮಾಡಬಾರದು. ಮೊದಲು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ತಿರುಗೇಟು ನೀಡಿದರು.

ವಿಧಾನಸೌಧದ ಬಳಿ ಲೋಕಾಯುಕ್ತ ಇಂಜಿನಿಯರ್ ಬಳಿ ಹಣ ಸಿಕ್ಕ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಲಿದ್ದಾರೆ. ಹಣ ಎಲ್ಲಿಂದ ಬಂತು, ಯಾವ ಉದ್ದೇಶಕ್ಕಾಗಿ ತಂದಿದ್ದ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ.
ಈಗಾಗಲೇ ಆತನಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ ಎಂದರು.

ಹಿಂದೆ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 22 ಲಕ್ಷ ನಗದು ಸಿಕ್ಕಿತ್ತು. ಎಸಿಬಿ ಕೊಟ್ಟು ಕೊನೆಗೆ ಪ್ರಕರಣವನ್ನೇ ಕಾಂಗ್ರೆಸ್‍ನವರು ಮುಚ್ಚಿ ಹಾಕಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇದೆಯೇ ಎಂದು ಬೊಮ್ಮಾಯಿ ಪ್ರಶ್ನೆ ಮಾಡಿದರು.

ಬಿಬಿಎಂಪಿ ಐಡಿಯಾ ಅಟ್ಟರ್ ಪ್ಲಾಪ್, ಬಿರುಕು ಬಿಟ್ಟ ದೇಶದ ಪ್ರಪ್ರಥಮ ರ‍್ಯಾಪಿಡ್ ರಸ್ತೆ

ಈಗಾಗಲೇ ಪೊಲೀಸರು ತನಿಖೆ ನಡೆಸಿ ಹೇಳಿಕೆ ಪಡೆದಿದ್ದಾರೆ. ತನಿಖೆ ಮುಗಿಯುವವರೆಗೂ ವಿಪಕ್ಷದವರು ಸಹನೆಯಿಂದ ವರ್ತಿಸಬೇಕು. ನಿಮ್ಮ ಕಾಲದಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿದ್ದವು ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.

ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರ ಪ್ರದರ್ಶನ ತಿರಸ್ಕರಿಸುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ
ಈ ಕುರಿತು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು. ನಮಗೆ ಖಂಡಿತವಾಗಿಯೂ ಭಾಗವಹಿಸುವ ಅವಕಾಶ
ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Santro Ravi, case, investigation, CM Bommai,

Articles You Might Like

Share This Article