ಮೈಸೂರು, ಜ. 9- ಕಳೆದ ಏಳು ದಿನಗಳಿಂದ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿ ಬಂಧನಕ್ಕೆ ಶೋಧ ಕೈಗೊಂಡಿರುವ ಪೊಲೀಸರು ರವಿ ಆಪ್ತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಯಾಂಟ್ರೋ ರವಿ ಆಪ್ತನೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ರವಿ ವಿವಾಹ ವಕೀಲರೊಬ್ಬರ ಕಚೇರಿಯಲ್ಲಿ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಗೆ ಮದುವೆ ಮಾಡಿಸಿದ್ದ ಪುರೋಹಿತರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿ ಆತನ ಪರಿಚಯದ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದಾರೆ.
ಮಹಿಳೆಗೆ ವಂಚಿಸಿದ ಆರೋಪ ಹೊತ್ತಿರುವ ರವಿ ಬಗ್ಗೆ ಮೈಸೂರು ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಹಿಳೆಗೆ ಮತ್ತುಬರಿಸುವ ಔಷಧಿ ಬೆರೆಸಿ ಪಾನಿಯ ಕುಡಿಸಿದ್ದ ಆರೋಪ ರವಿ ಮೇಲೆ ಕೇಳಿಬಂದಿದ್ದು, ಈ ಬಗ್ಗೆ ದೂರುದಾರ ಮಹಿಳೆ ರವಿ ವಿರುದ್ಧ ಆರೋಪಿಸಿದ್ದಾರೆ.
ರೇಸ್ ವೇಳೆ ಅಪಘಾತವಾಗಿ ಖ್ಯಾತ ರೇಸರ್ ಕುಮಾರ್ ದುರ್ಮರಣ
ಸ್ಯಾಂಟ್ರೋ ರವಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ತನಿಖಾ ಹಂತದಲ್ಲಿ ಸ್ಯಾಂಟ್ರೋ ರವಿ ಸಂಪರ್ಕದಲ್ಲಿದ್ದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಸ್ಯಾಂಟ್ರೋ ರವಿ ಬಳಿ ಕೆಲಸ ಮಾಡುತ್ತಿದ್ದ ಕೆಲ ವ್ಯಕ್ತಿಗಳನ್ನು ಪೊಲೀಸರು ಪತ್ತೆ ಹಚ್ಚಿ ಅವರನ್ನೂ ಸಹ ವಿಚಾರಣೆಗೊಳಪಡಿಸಿದ್ದಾರೆ.
ಎರಡನೇ ಪತ್ನಿ ಎನ್ನಲಾದ ಸಂತ್ರಸ್ತೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ರವಿ ವಿರುದ್ಧ ದುರು ದಾಖಲಿಸಿದ್ದು, ಆಕೆ ಹೇಳಿಕೆಯನ್ನು ಪಡೆದಿರುವ ಪೊಲೀಸರು ಇದಿಗ ರವಿ ಬಂಧನಕ್ಕೆ ಜಾಲ ಬೀಸಿದ್ದಾರೆ.
ಕಳೆದ 7 ದಿನಗಳಿಂದ ನಾಪತ್ತೆ ಆಗಿರುವ ರವಿ ಬಂಧನ ಶೀಘ್ರದಲ್ಲಿಯೇ ಆಗಲಿದೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ವೈದ್ಯರ ಜೊತೆಯೂ ಸ್ಯಾಂಟ್ರೋ ರವಿ ಒಡನಾಟ:
ಖತರ್ನಾಕ್ ಐಡಿಯ ಮಾಡುತ್ತಿದ್ದ ರವಿ ತನ್ನ ದುಷ್ಕøತ್ಯಗಳಿಗೆ ವೈದ್ಯರನ್ನು ಬಳಿಸಿ ಕೊಂಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಮುಂಜಾಗ್ರತ ಕ್ರಮ ತೆಗೆದುಕೊಳ್ಳುದೆ ಗರ್ಭೀಣಿಯಾದ ಯುವತಿಯರಿಗೆ ಸ್ಯಾಂಟ್ರೋ ರವಿ ಗರ್ಭಪಾತ ಮಾಡಿಸಲು ವೈದ್ಯರು ಕೇಳಿದಷ್ಟು ಹಣ ನೀಡುತ್ತಿದ್ದ ಎನ್ನಲಾಗಿದೆ.
ಒಂದು ಬಾರಿ ಪರಿಚಯವಾದ ವೈದ್ಯರಿಂದ ಕನಿಷ್ಟ 5 ಮಂದಿಗೆ ಗರ್ಭಪಾತ ಮಾಡಿಸಿ ನಂತರ ಬೇರೊಬ್ಬರ ವೈದ್ಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಖದೀಮ ಸ್ಯಾಂಟ್ರೋ ರವಿ. ಹಣದ ಆಸೆ ತೋರಿಸಿ ವೈದ್ಯರಿಗೆ ವಂಚನೆ ಮಾಡುತ್ತಿದ್ದನಾ ಎಂಬ ಶಂಕೆ ಮೂಡಿದೆ.
ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಸೆರೆ
ಸ್ಯಾಂಟ್ರೋ ರವಿ ಹಲವು ಯುವತಿಯರಿಗೆ ಗರ್ಭಪಾತ ಮಾಡಿಸಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರೆತಿದೆ.
ವೈದ್ಯರ ಫೋಟೋವನ್ನು ಸ್ಟೇಟಸ್ಗೆ ಹಾಕಿಕೊಳ್ಳುತ್ತಿದ್ದ ರವಿ, ಈ ಮೂಲಕ ನನಗೆ ವೈದ್ಯರು ಕೂಡ ಸಂಪರ್ಕದಲ್ಲಿದ್ದಾರೆಂದು ಯುವತಿಯರಿಗೆ ನಂಬಿಸುತ್ತಿದ್ದನು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.