ಮೈಸೂರು, ಜ. 10- ತಾಳಿ ಕಟ್ಟಿದ ಪತ್ನಿಯನ್ನೇ ಕಾಮಾಂಧ ಸ್ಯಾಂಟ್ರೊ ರವಿ ಕೊಲೆ ಮಾಡಿರುವ ಘಟನೆ ಈಗ ಬಯಲಾಗಿದೆ. ಹಣಕ್ಕಾಗಿ ಸ್ಯಾಂಟ್ರೊ ರವಿ ತನ್ನ ಪತ್ನಿ ಚಂದ್ರಿಕಾ ಎಂಬಾಕೆಯನ್ನು ಕೊಲೆ ಮಾಡಿದ್ದನು ಎಂದು ಹೇಳಲಾಗಿದೆ.
ಚಂದ್ರಿಕಾ ಎಂಬಾಕೆ ಸ್ಯಾಂಟ್ರೊ ರವಿಯ ಮೊದಲ ಪತ್ನಿ. ರವಿ ತಾನು ಸಂಪಾದಿಸಿದ 22 ಲಕ್ಷ ಹಣವನ್ನು ಹೆಂಡತಿ ಖಾತೆಗೆ ಹಾಕಿದ್ದನು. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರವಿ, ಜೈಲಿನಿಂದ ಹೊರ ಬಂದ ನಂತರ ಪತ್ನಿ ಖಾತೆಯಲ್ಲಿದ್ದ ಹಣದ ಲೆಕ್ಕ ಕೊಡುವಂತೆ ಒತ್ತಡ ಹಾಕಿದ್ದನು.
22 ಲಕ್ಷ ಹಣದ ಲೆಕ್ಕ ಕೊಡದ ಹಿನ್ನೆಲೆಯಲ್ಲಿ ಪತ್ನಿ ಚಂದ್ರಿಕಾಳನ್ನು ಕೊಲೆ ಮಾಡಲು ಸಂಚು ರೂಪಿಸಿ ಆಕೆಯ ಮುಖ, ತಲೆಗೆ ಆಸಿಡ್ ಹಾಕಿ ಸುಟ್ಟು, ಅರ್ಧ ದೇಹ ಸೀಳಿ ಹತ್ಯೆ ಮಾಡಿ ನಾಲೆಗೆ ಎಸೆದಿದ್ದುದ್ದು ಇದೀಗ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಬಾಂಗ್ಲಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಬಡಿದಾಡಿಕೊಂಡ ಪ್ರಯಾಣಿಕರು
2006ರ ನವೆಂಬರ್ 3ರಂದು ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಸ್ವತಃ ಸ್ಯಾಂಟ್ರೊ ರವಿಯೆ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ದೂರು ಕೊಟ್ಟು, ಪತ್ರಿಕೆಗಳಲ್ಲಿ ಜಜಾಹೀರಾತು ಕೂಡ ಹಾಕಿಸಿದ್ದನು.
ಆದರೆ ಸ್ಯಾಂಟ್ರೊ ರವಿ ಪತ್ನಿ ಶವ ನ. 9ರಂದು ಪಾಂಡವಪುರ ಸಮೀಪದ ವಿಶ್ವೇಶ್ವರಯ್ಯ ನಾಲೆಯಲ್ಲಿ ಪತ್ತೆಯಾಗಿತ್ತು. ಶವದ ಬಗ್ಗೆ ಅಂದು ತನಿಖೆ ಮಾಡದೆ ಪೊಲೀಸರು ಮೌಕ್ಕೆ ಶರಣಾಗಿದ್ದರು. ಪತ್ನಿ ಶವ ಕಂಡು ಗೊತ್ತಿಲ್ಲದಂತೆ ನಟನೆ ಮಾಡಿದ್ದನು ಅಂದು ಚಂದ್ರಿಕಾಳ ಶವವನ್ನು ಆಕೆಯ ತಾಯಿ, ತಂಗಿ ಗುರುತಿಸಿದ್ದರು.
ಚಳಿಯಲ್ಲೂ ರಾಹುಲ್ ಟೀ ಶರ್ಟ್ ಧರಿಸೋದೇಕೆ..? ಇದರ ಹಿಂದಿದೆ ಮನಕಲಕುವ ಕಥೆ
ಆತನಿಗೆ ಮಂಜುನಾಥ, ಕಿರಣ್, ಸ್ಯಾಂಟ್ರೊ ರವಿ ಎಂಬ ಮೂರು ಹೆಸರುಗಳಿತ್ತು. ವ್ಯವಹಾರವೆಲ್ಲಾ ಸ್ಯಾಂಟ್ರೊ ರವಿ ಹೆಸರಲ್ಲಿ ನಡೆಸುತ್ತಿದ್ದನು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
santro ravi, kill, first, wife, Mysore,