ವಿವಾಹವಾಗುವುದೇ ಸ್ಯಾಂಟ್ರೊ ರವಿ ಚಾಳಿ

Social Share

ಮೈಸೂರು, ಜ.11- ಸ್ಯಾಂಟ್ರೊ ರವಿಗೆ ಮದುವೆ ಅಂದರೆ ಲೆಕ್ಕವೆ ಇಲ್ಲ. ವಿವಾಹ ಆಗುವುದೇ ಇವನ ವೃತ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಯುವತಿಯರನ್ನು ನಂಬಿಸುವುದು, ಮದುವೆ ಆಗುವುದು ಇವನ ಚಾಳಿಯಾಗಿದೆ. ವಿವಾಹವಾದ ಒಂದಷ್ಟು ದಿನ ಆಕೆಯೊಂದಿಗೆ ಸಂಸಾರ ಮಾಡಿ ನಂತರ ಆಕೆಯನ್ನು ಬೇರೊಬ್ಬರೊಟ್ಟಿಗೆ ಕಳುಹಿಸುತ್ತಿದ್ದ. ಇದೇ ಸ್ಯಾಂಟ್ರೊ ರವಿ ಮೂಲ ವೃತ್ತಿ ಆಗಿತ್ತು.

ರವಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಯುವತಿಯರಿಗೆ ತಾಳಿ ಕಟ್ಟಿ ವಿವಾಹವಾಗುತ್ತಿದ್ದ. ಮದುವೆಗೆ ಸಾಕ್ಷಿ ಸಿಗದಂತೆ ನೋಡಿಕೊಳ್ಳುತ್ತಿದ್ದ. ಮಂಡ್ಯದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ನಂಬಿಸಿ ಸ್ಯಾಂಟ್ರೊ ರವಿ ಮದುವೆ ಆಗಿದ್ದನು. ಸ್ಯಾಂಟ್ರೊ ರವಿಗೆ ಅದೇ ಮೊದಲ ಮದುವೆ. ಆದರೆ ಈ ತನಕ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದಾಳೆ.

ಆಕೆಯ ಬಗ್ಗೆ ಸುಳಿವೇ ಸಿಕ್ಕಿಲ್ಲ. ಆನಂತರ ಸ್ಯಾಂಟ್ರೊ ರವಿ ಆದ ಮದುವೆಗಳಿಗೆ ಲೆಕ್ಕವಿಲ್ಲ ಎನ್ನಲಾಗಿದೆ.
ಈಗ ಸ್ಯಾಂಟ್ರೊ ರವಿಯ ಮೂರನೆ ಹೆಂಡತಿ ಇದ್ದು, 3ನೇ ಹೆಂಡತಿಯ ಒಬ್ಬ ಮಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬ ಮಗನಿಗೆ 16 ವರ್ಷವಾಗಿದೆ.

ಜ.31ಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಸ್ಯಾಂಟ್ರೊ ರವಿಯ ಎಲ್ಲಾ ವ್ಯವಹಾರಕ್ಕೆ ಮೂರನೇ ಹೆಂಡತಿ ಸಾಥ್ ನೀಡುತ್ತಿದ್ದು, ಆಕೆಯ ಜೊತೆ ಸ್ಯಾಂಟ್ರೊ ರವಿ ಸಂಸಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಪೆÇಲೀಸ್ ಅಕಾರಿಗಳ ಪ್ರಭಾವ ಇರುವ ಕಾರಣ ಯಾವ ಯುವತಿ ಸ್ಯಾಂಟ್ರೊ ರವಿ ವಿರುದ್ಧ ದೂರು ಕೊಟ್ಟರೂ ಕಂಪ್ಲೆಂಟ್ ತೆಗೆದುಕೊಳ್ಳದ ಪೆÇಲೀಲಿಸರು ಆ ಯುವತಿಯರಿಗೆ ಹೆದರಿಸಿ ಕಳುಹಿಸುತ್ತಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ಸ್ಯಾಂಟ್ರೊ ರವಿ ಈತನಕ ಸೇಫ್ ಆಗಿ ತನ್ನ ದಂಧೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

Santro Ravi, marriage,

Articles You Might Like

Share This Article