ಬೆಂಗಳೂರು,ಜ.11- ರೌಡಿಶೀಟರ್ ಹಿನ್ನಲೆಯ ಸ್ಯಾಂಟ್ರೊ ರವಿ ಜೊತೆ ಪೊಲೀಸ್ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ಕಂಡುಬಂದರೆ ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೊ ರವಿ ಜೊತೆ ನಮ್ಮ ಇಲಾಖೆಯ ಯಾವುದೇ ಅಧಿಕಾರಿಗಳು ಕಾನೂನು ಬಾಹಿರವಾಗಿ ಅಪರಾಧ ಚಟುವಟಿಕೆಗಳನ್ನು ನಡೆಸಲು ಕುಮ್ಮಕ್ಕು ಕೊಟ್ಟಿದ್ದರೆ ಕಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ಕೂಡ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈಗಾಗಲೇ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತುಪಡಿಸಲಾಗಿದೆ. ಸ್ಯಾಂಟ್ರೊ ರವಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಕಾರಣ ಪತ್ತೆಹಚ್ಚಲು ವಿಳಂಬವಾಗುತ್ತಿದೆ. ಆದರೂ ನಮ್ಮ ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇಣು ಬಿಗಿದುಕೊಂಡು ಬಾಡಿ ಬಿಲ್ಡರ್ ಆತ್ಮಹತ್ಯೆ
ಆತ ಎಲ್ಲೆ ಇದ್ದರೂ ಬಿಡುವುದಿಲ್ಲ. ಸ್ಯಾಂಟ್ರೊ ರವಿ ಬಂಧನಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈಗಾಗಲೇ ಅವನ ಬಗ್ಗೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ಎಲ್ಲಿ ಉಳಿದಿದ್ದ, ಎಲ್ಲಿ ತಿರುಗಾಡುತ್ತಿದ್ದಾನೆ ಸೇರಿದಂತೆ ಪ್ರತಿಯೊಂದು ಚಲನವಲನಗಳ ಬಗ್ಗೆ ನಮ್ಮ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ ಎಂದರು.
ಪೊಲೀಸರಿಗೆ ಬಹಳಷ್ಟು ದಿನ ತಲೆಮರೆಸಿಕೊಂಡು ಇರಲು ಸಾಧ್ಯವೇ ಇಲ್ಲ. ಎಲ್ಲೇ ಇದ್ದರೂ ಕೂಡ ಎಳೆದುಕೊಂಡು ಬಂದೇ ಬರುತ್ತಾರೆ. ಮೈಸೂರಿನ ಲಾಡ್ಜ್ವೊಂದರಲ್ಲಿ ತಂಗಿದ್ದ ಎಂದು ಅಲ್ಲೂ ಕೂಡ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾಲದಲ್ಲೇ ಸ್ಯಾಂಟ್ರೊ ರವಿ ಹೆಚ್ಚು ಅಪರಾಧ ಚಟುವಟಿಕೆಗಳನ್ನು ನಡೆಸಿದ್ದಾನೆ. ಆತ ಈಗ ಏಕಾಏಕಿ ಈ ಚಟುವಟಿಕೆ ನಡೆಸುತ್ತಿಲ್ಲ. 20 ವರ್ಷಗಳಿಂದಲೂ ಸಕ್ರಿಯನಾಗಿದ್ದಾನೆ. ಇದರ ಬಗ್ಗೆ ಎಲ್ಲ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನುವ ಪ್ರಶ್ನೆಯಲ್ಲ. ಎಲ್ಲವೂ ತನಿಖೆಯಿಂದ ಹೊರಬೀಳಲಿದೆ ಎಂದು ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ನವರು ಏನೇ ಆರೋಪ ಮಾಡಲು ಸರ್ವ ಸ್ವತಂತ್ರರು. ಅವರ ಆರೋಪಗಳ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡಲಾರೆ. ಆದರೆ ಒಂದಂತೂ ಸತ್ಯ. ಸ್ಯಾಂಟ್ರೊ ರವಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಕಾರಣ ಎಂದು ಮರೆಯಬಾರದು ಎಂದು ತಿರುಗೇಟು ನೀಡಿದರು.
ಈಗ ನಮ್ಮ ಸರ್ಕಾರ ಸ್ಯಾಂಟ್ರೊ ರವಿಯನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದ್ದೇವೆ. ಯಾರೇ ಆದರೂ ನಾವು ಬಿಡುವುದಿಲ್ಲ. ನಮಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ ಆತನನ್ನು ಬಂಧಿಸುತ್ತೇವೆ. ಜನಪ್ರತಿನಿಧಿಗಳ ಜೊತೆ ಹಲವಾರು ಮಂದಿ ಭೇಟಿ ಮಾಡಲು ಬರುತ್ತಾರೆ. ನನ್ನನ್ನು ಕೂಡ ಅದೇ ರೀತಿ ಭೇಟಿ ಮಾಡುತ್ತಾರೆ. ಬರುವಾಗ ಯಾರಿಗೂ ಕೂಡ ಸರ್ಟಿಫಿಕೇಟ್ ತೆಗೆದುಕೊಂಡು ಬಾ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನನ್ನ ಜೊತೆಯೂ ಅನೇಕ ಮೊಬೈಲ್ನಲ್ಲಿ ಫೋಟೊ ತೆಗೆದುಕೊಳ್ಳುತ್ತಾರೆ. ನಾನು ಪ್ರತಿಯೊಬ್ಬರ ವಿವರವನ್ನು ಕಲೆ ಹಾಕುವುದಿಲ್ಲ. ಸ್ಯಾಂಟ್ರೊ ರವಿ ವಿರುದ್ಧ ಈಗ ದೂರು ದಾಖಲಾಗಿದೆ. ಆತನ ಬಂಧನದ ನಂತರ ಹಲವಾರು ವಿಚಾರಗಳು ಹೊರಬರಲಿವೆ ಎಂದು ತಿಳಿಸಿದರು.
ಮೆಟ್ರೋ ಪಿಲ್ಲರ್ ದುರಂತ : NCC ಕಂಪೆನಿ, 7 ಮಂದಿ ವಿರುದ್ಧ FIR
ಅಮಾನತು: ಮೆಟ್ರೊ ಪಿಲ್ಲರ್ ಕುಸಿದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಾಗಾರ್ಜುನ ಕನ್ಸ್ಟ್ರಕನ್ ಕಂಪನಿಯ ನಿರ್ಲಕ್ಷ್ಯ ಕಂಡುಬಂದಿದೆ. ಕಳೆದ ರಾತ್ರಿ ಎಫ್ಐಆರ್ನಲ್ಲಿ ಯಾರೊಬ್ಬರ ಹೆಸರಿರಲಿಲ್ಲ. ಇದೀಗ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಿರ್ಲಕ್ಷ್ಯದಿಂದ ಹಾನಿಯಾಗಿದೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಎಂಆರ್ಸಿಎಲ್ನ ಮುಖ್ಯ ಎಂಜಿನಿಯರ್ ಸೇರಿದಂತೆ ಮತ್ತಿತರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಗುಜರಾತ್ನ ಅಹಮದಾಬಾದ್ ಎಸ್ಎಫ್ಎಲ್ ವಿವಿಜ್ಞಾನದ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಅಲ್ಲಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜೊತೆ ಚರ್ಚೆ ನಡೆಸಲಾಗುವುದು. ನಾನು, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ಹಿರಿಯ ಅಕಾರಿ ಹಿತೇಂದ್ರ ತೆರಳುತ್ತಿದ್ದೇವೆ.
ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ಪ್ರಾರಂಭವಾಗಲಿದೆ. ಬೇರೆ ದೇಶದವರು ಕೂಡ ಇಲ್ಲಿ ಬಂದು ಕಲಿಯಬಹುದು ಎಂದು ಜ್ಞಾನೇಂದ್ರ ಹೇಳಿದರು.
Santro Ravi, police investigation, home minister, araga jnanendra,