ಬೆಂಗಳೂರು,ಜ.9- ಸ್ಯಾಂಟ್ರೋ ರವಿ ಎರಡನೆ ಪತ್ನಿಯ ಬಳಿ ಇರುವ ಲ್ಯಾಪ್ಟಾಪ್ನಲ್ಲಿ ಸ್ಪೋಟಕ ಮಾಹಿತಿಗಳು ಮತ್ತು ದಾಖಲೆಗಳಿವೆ ಎಂದು ಹೇಳಲಾಗಿದ್ದು ಅದನ್ನು ಪಡೆದುಕೊಳ್ಳಲು ಸ್ಯಾಂಟ್ರೋ ರವಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾನೆ.
ಕಳೆದ ನವೆಂಬರ್ 23ರಂದು ಬೆಂಗಳೂರಿನ ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವೊಂದು ಈಗ ಸ್ಯಾಂಟ್ರೋ ರವಿ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. ಲಭ್ಯ ಇರುವ ದಾಖಲೆಗಳ ಪ್ರಕಾರ ಸ್ಯಾಂಟ್ರೋ ರವಿಯ ಸ್ನೇಹಿತ ಎಂದು ಹೇಳಲಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು,
ನವೆಂಬರ್ 23ರ ಸಂಜೆ ಆರು ಗಂಟೆ ಸುಮಾರಿಗೆ ಸ್ಯಾಂಟ್ರೋ ರವಿಯ ಎರಡನೇ ಪತ್ನಿ, ಆಕೆಯ ಸಹೋದರಿ ಮತ್ತೊಬ್ಬ ವ್ಯಕ್ತಿ ತಮ್ಮ ಮೇಲೆ ಹಲ್ಲೆ ನಡೆಸಿ ಕತ್ತಿನಲ್ಲಿದ್ದ 13 ಗ್ರಾಂ ಚಿನ್ನದ ಸರ, ಜೇಬಿನಲ್ಲಿದ್ದ 9 ಸಾವಿರ ರೂಪಾಯಿಯನ್ನು ಕಸಿದುಕೊಂಡು, ರಕ್ತಗಾಯಗೊಳಿಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೆ ಮೊದಲು ಸ್ಯಾಂಟ್ರೋ ರವಿಯ ಸ್ನೇಹಿತ ಮತ್ತು ಆತನ ಎರಡನೇ ಪತ್ನಿ ಸಂಬಂಧಿಕರಾಗಿದ್ದು, ಹಣಕಾಸು ವ್ಯವಹಾರ ಮಾಡಿಕೊಂಡಿದ್ದರು. ಹಣ ವಾಪಾಸ್ ಕೇಳಿದಾಗ ಆಕೆ ಹಲ್ಲೆ ಮಾಡಿದ್ದರು ಎಂದು ದೂರು ದಾಖಲಾಗಿದೆ.
ಇದಕ್ಕೆ ಪೂರಕವಾಗಿ ಸ್ಯಾಂಟ್ರೋ ರವಿಯ ಸ್ನೇಹಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಲ್ಲಿಯೇ ವೈದ್ಯರ ಮುಂದೆ ಹೇಳಿಕೆ ನೀಡಿದ್ದ. ದೂರು ಆಧರಿಸಿ ಪೊಲೀಸರು ರವಿ ಎರಡನೇ ಪತ್ನಿ, ಆಕೆಯ ಸಹೋದರಿ ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದರು.
‘ಸಿದ್ದು ನಿಜ ಕನಸುಗಳು’ ವಿವಾದಿತ ಪುಸ್ತಕ ಬಿಡುಗಡೆಗೆ ಕಾಂಗ್ರೆಸ್ ಆಕ್ರೋಶ
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಎರಡನೇ ಪತ್ನಿ ಮೈಸೂರಿನಲ್ಲಿ ರವಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ರವಿ ತನ್ನ ಎರಡನೇ ಪತ್ನಿಯ ವಿರುದ್ಧವೇ ದೂರು ನೀಡಲು ಆ ಒಂದು ಲ್ಯಾಪ್ಟಾಪ್ ಕಾರಣ ಎಂದು ಹೇಳಲಾಗಿದೆ. ಅದರಲ್ಲಿ ಹಲವು ವಿಡಿಯೋಗಳಿದ್ದು ಅವು ಬಹಿರಂಗವಾದರೆ ಅಲ್ಲೊಲ್ಲಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಕೆಲವರೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆಗಳು ಲ್ಯಾಪ್ಟಾಪ್ನಲ್ಲಿ ಸಂಗ್ರಹವಾಗಿವೆ. ಜೊತೆ ರವಿಯ ಸಂಪರ್ಕಗಳು, ದಂಧೆಗಳ ಬಗ್ಗೆ ಕುರಿತು ಮಾಹಿತಿ ಇವೆ ಎನ್ನಲಾಗಿದೆ.
ಅದು ಎರಡನೇ ಪತ್ನಿಯ ಬಳಿ ಇದ್ದು, ಅದನ್ನು ಪಡೆದುಕೊಳ್ಳಲು ಸ್ನೇಹಿತನ ಮೂಲಕವೇ ದೂರು ಕೊಡಿಸಿದ್ದ ಎನ್ನಲಾಗಿದೆ. ಆಕೆ ಜಾಮೀನಿನ ಮೇಲೆ ಹೊರ ಬಂದ ಬಳಿಕ ನೀಡಿದ ಮಾಹಿತಿ ಆಧರಿಸಿ ದೂರಿನ ಸತ್ಯಾಂಶದ ಬಗ್ಗೆ ಅನುಮಾನ ಹುಟ್ಟಿದ್ದು, ಪೊಲೀಸರು ಸತ್ಯಾಸತ್ಯತೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Santro Ravi, Sexual, assault, case, wife, secret laptop,