ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ದೂರು ದಾಖಲು

Social Share

ಮೈಸೂರು, ಜ.17- ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ದೂರನ್ನು ಆತನ ಪತ್ನಿ ನೀಡಿದ್ದು ಇನ್ನೊಂದು ಕೇಸು ದಾಖಲಾಗಿದೆ. ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಸಂತ್ರಸ್ತ ಪತ್ನಿ ಪೋಲಿಸರಿಗೆ ದೂರು ನೀಡಿದ್ದಾರೆ.

2022ರ ಸೆಪ್ಟೆಂಬರ್ 22 ರಂದು ನಾನು ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋಗಿದ್ದೆ. ಆಗ ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ, ಸ್ಯಾಂಟ್ರೊ ರವಿ ಮತ್ತು ಪ್ರಕಾಶ್ ಸ್ಕೂಟರ್ ಡಿಕ್ಕಿ ಹೊಡೆದು ಚೆಕ್ ಬುಕ್ ಕಳುವು ಮಾಡಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ನನ್ನ ಚೆಕ್ ಬುಕ್ ದುರುಪಯೋಗ ಮಾಡಿಕೊಂಡಿದ್ದಾರೆ, ನಾನು ಸೈನ್ ಮಾಡಿರುವ ಎರಡು ಚೆಕ್ ಅನ್ನು ಕೆನರಾ ಬ್ಯಾಂಕ್ ಗೆ ಸಲ್ಲಿಸಿದ್ದಾರೆ. ಇನ್ನೆರಡು ಚೆಕ್ ಗಳನ್ನು ಹಾಗೆ ಇಟ್ಟುಕೊಂಡಿದ್ದಾರೆ,ಈ ಸಂಬಂಧ ದೇವರಾಜ ಪೋಲಿಸ್ ಠಾಣೆಯಲ್ಲಿ ಸೆಪ್ಟೆಂಬರ್ 24 ರಂದು ದೂರು ನೀಡಿದ್ದೆ ಎಂದು ಸ್ಯಾಂಟ್ರೋ ರವಿಯ ಪತ್ನಿ ತಿಳಿಸಿದ್ದಾರೆ.

4 ದಿಕ್ಕುಗಳಿಂದಲೂ ರಥಯಾತ್ರೆಗೆ ಬಿಜೆಪಿ ಸಿದ್ಧತೆ

ಈ ಸಂಬಂಧ ಸ್ಯಾಂಟ್ರೊ ರವಿ ವಿರುದ್ಧ ಹೊಸ ಕೇಸು ದಾಖಲಿಸಲಾಗಿದೆ.ಹಾಗಾಗಿ ರವಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ಯಾಂಟ್ರೊ ರವಿ ಕೇಸ್ ಸಿಐಡಿಗೆ ವರ್ಗಾವಣೆ ಹಿನ್ನೆಲೆ ಮೈಸೂರಿನಲ್ಲಿ ಸಿಐಡಿ ಡಿವೈಎಸ್ಪಿ ನೇತೃತ್ವದ ನಾಲ್ವರು ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ತನಿಖಾಧಿಕಾರಿ ಎಸಿಪಿಯಿಂದ ದಾಖಲಾತಿ ವಶಕ್ಕೆ ಪಡೆದಿದ್ದಾರೆ.

ಸ್ಯಾಂಟ್ರೊ ರವಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಂದು ಮೈಸೂರು ಕೋರ್ಟ್ ಗೆ ಸಿಐಡಿ ಅಧಿಕಾರಿಗಳು ಮನವಿ ಸಲ್ಲಿಸಲಿದ್ದಾರೆ.

Santro Ravi, wife, Another, complaint, Mysore,

Articles You Might Like

Share This Article