ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತಷ್ಟು ಶ್ರೀಮಂತವಾಗಲಿ : ಸಿಎಂ ಬೊಮ್ಮಾಯಿ

Spread the love

ಬೆಂಗಳೂರು,ನ.27- ಕನ್ನಡ ನಾಡು ಆರ್ಥಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಹಿತ್ಯೀಕವಾಗಿ ಇನ್ನಷ್ಟು ಬೆಳೆಯಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸಪ್ನ ಬುಕ್ ಹೌಸ್ 66ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಗಾಂಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಪುಸ್ತಕಗಳನ್ನು 66 ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇಂದು ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಹಾರತುರಾಯಿ, ಶಾಲು ಕೊಡುವ ಬದಲು ಕನ್ನಡದ ಸಾಹಿತಿಗಳ ಪುಸ್ತಕಗಳನ್ನು ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದಲಾದರೂ ಪುಸ್ತಕ ಖರೀದಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಇತ್ತೀಚೆಗೆ ನಾನು ಸ್ವಪ್ನ ಬುಕ್‍ಹೌಸ್‍ನವರು ನನ್ನನ್ನು ಭೇಟಿ ಮಾಡಲು ಬಂದಾಗ, ನೀವು ಬಂದ ಮೇಲೆ ಪುಸ್ತಕಗಳ ಮಾರಾಟ ಹೆಚ್ಚಾಗಿದೆ ಎಂದು ಹೇಳಿದರು. ಇದನ್ನು ಕೇಳಿ ನನಗೆ ಅತ್ಯಂತ ಸಂತೋಷವಾಯಿತು ಎಂದರು.

ನೀವು ಹೂವು ತೆಗೆದುಕೊಳ್ಳುವ ಬದಲು ಪುಸ್ತಕ ತೆಗೆದುಕೊಳ್ಳುತ್ತೀರಾ ಎಂದು ನನ್ನನ್ನು ಸ್ವಪ್ನ ಬುಕ್ ಹೌಸ್‍ನವರು ಪ್ರಶ್ನಿಸಿದರು. ನಾನು ಅತ್ಯಂತ ಪ್ರೀತಿಯಿಂದ ಅವರು ನೀಡಿದ ಪುಸ್ತಕಗಳನ್ನು ತೆಗೆದುಕೊಂಡೆ. ಇಂದು ಪುಸ್ತಕ ಮಾರಾಟ ಹೆಚ್ಚಳವಾಗಿರುವುದು ಕನ್ನಡ ಸಾಹಿತ್ಯ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಕೆಲಸ ಎಂದು ಪ್ರಶಂಸಿಸಿದರು.

ಕನ್ನಡದ ಖಾಸಗಿ ವಲಯದಲ್ಲಿ ಅತೀ ಶ್ರೇಷ್ಠ ಕೊಡಗೆ ಕೊಟ್ಟಿರುವುದು ಸ್ವಪ್ನ ಬುಕ್ ಹೌಸ್‍ನವರು. ಅವರಿಗೆ ದೊಡ್ಡ ಲಾಭವೇನೂ ಬರುವುದಿಲ್ಲ. ಆದರೂ ಅವರಿಗೆ ಬಂದಿರುವ ಗುಡ್ ವಿಲ್‍ಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದರು. ಮನುಷ್ಯ ಸದಾ ಹಣಗಳಿಸಲು ಪ್ರಯತ್ನ ಮಾಡುತ್ತಾನೆ. ನಂತರ ಹೆಸರುಳಿಸಲು ಪ್ರಯತ್ನ ಮಾಡುತ್ತಾನೆ. ಸ್ವಪ್ನ ಬುಕ್ ಹೌಸ್ ಮೊದಲಿನಿಂದಲೂ ನಗುನಗುತ್ತಾ ಕೊಟ್ಟಿರುವ ಕೊಡುಗೆ ಅಪಾರ.

ಜಗತ್ತನ್ನು ಸೃಷ್ಟಿ ಮಾಡಿರುವ ಸೃಷ್ಟಿಕರ್ತ ಹಲವು ಜೀವರಾಶಿಗಳನ್ನ ಸೃಷ್ಟಿ ಮಾಡಿದ್ದಾನೆ. ಮಾತನಾಡುವ ಶಕ್ತಿ ಹಲವು ಜೀವರಾಶಿಗೆ ಕೊಟ್ಟಿಲ್ಲ. ನಮಗಿಂತ ಹೆಚ್ಚಾಗಿ ವಿಚಾರ ಮಾಡುವ ಶಕ್ತಿಯನ್ನ ಹಲವು ಜೀವಿಗಳಿಗೆ ಅತೀ ಶಕ್ತಿ ಶಾಲಿ, ವಿಚಾರ ಮಾಡುವುದನ್ನು ಕೊಟ್ಟಿದ್ದಾನೆ ಸ್ಮರಿಸಿದರು. ಆದರೆ ಅವೆಲ್ಲಾ ನಶಿಸಿ ಹೋಗುತ್ತಿವೆ. ಮನುಷ್ಯ ಕುಲ ಮೈನಸ್ 0 ದಲ್ಲೂ ಬದುಕುತ್ತಾನೆ. ಇದೆಲ್ಲಾ ಅವನ ಚಿಂತನೆಯಿಂದ ಬಂದದ್ದು. ಪರಿಸ್ಥಿತಿಗೆ ತಕ್ಕಂತೆ ಬದುಕುವುದು ಮನುಷ್ಯ ಸ್ವಭಾವ ಎಂದು ಹೇಳಿದರು.

ವಿಚಾರಗಳು ಶಬ್ಧಗಳಾಗಿ ಪರಿವರ್ತನೆಯಾಯಿತು. ಅಕ್ಷರ ಜೋಡಣೆಯಿಂದ ಶಬ್ದಗಳು, ಶಬ್ದಗಳಿಂದ ವಾಕ್ಯ, ವಾಕ್ಯದಿಂದ ಬರಹ ಬಂದವು. ಭಾಷೆ ರಹಿತವಾದ ಸಂಪರ್ಕ ಬಂದಿದ್ದು ಕೂಡ ಎಲ್ಲಾವೂ ಮಾನವ ನಿರ್ಮಿತವಾದದ್ದು. ಭಗವಂತ ಎಷ್ಟು ಕ್ರಿಯಾಶಾಲಿ ಇರಬಹುದು ಎಂದು ಚಿಂತನೆ ನಡೆಸಬೇಕು ಎಂದರು.

ಭಾಷೆ, ಸಾಹಿತ್ಯಕ್ಕೆ ಜÁತಿಧರ್ಮ ಇಲ್ಲ. ಸ್ವಚ್ಚ ಚಿಂತನೆಯಿಂದ ಸಾಹಿತ್ಯ ಬಂದಿರುವುದು. ಸತ್ಯಕ್ಕೆ ಯಾವುದೇ ರೀತಿಯ ಪ್ರಭಾವ ಇರಲ್ಲ. ವಿಚಾರ, ವ್ಯಕ್ತಿಗಳು,ರಾಜಕೀಯ ಪ್ರಭಾವದಿಂದ ನಾವು ಬೆಳೆದಿರುವುದು ಆದರೆ ಸಾಹಿತಿಗಳು ಯಾವ ಪ್ರಭಾವಕ್ಕೂ ಒಳಗಾಗಿಲ್ಲ. ಕನ್ನಡದಲ್ಲಿ ಅಂತಹ ಶ್ರೇಷ್ಠ ಸಾಹಿತಿಗಳ ಸರ ಮಾಲೆಯೇ ಇದೆ ಎಂದು ಪ್ರಶಂಸಿಸಿದರು.

66 ಸಾಹಿತಿಗಳನ್ನ ಒಂದುಕಡೆ ನೋಡುವ ಭಾಗ್ಯ ಸ್ವಪ್ನ ಬುಕ್ ಹೌಸ್ ಮಾಡಿಕೊಟ್ಟಿದೆ. ಶ್ರೇಷ್ಠ ರು ಒಂದು ಕಡೆ ಸೇರಲ್ಲ, ಅಲ್ಪರು ಬಹಳ ಕಡೆ ಸೇರುತ್ತಾರೆ. ಅದನ್ನ ವಿಶೇಷಣೆ ಮಾಡುವುದು ಸರಿಯಲ್ಲ ಎಂದರು.ಇನ್ನು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು, ಕೆಲವು ದಿನಗಳ ಹಿಂದೆ ನಿಧನರಾದ ಮಾಜಿ ಸಚಿವ ಸಿ.ಎಂ.ಉದಾಸಿ ಅವರನ್ನು ಸ್ಮರಿಸಿದರು.

ಅವರನ್ನು ಭೇಟಿಯಾಗಿದ್ದಾಗ, ನಿಮ್ಮ ಮೇಲೆ ಪೀತಿ ಎಂದು ಹೇಳಿದಾಗ ಅವರು ಹೌದು ಬಿಡಲ್ಲ ಪ್ರೀತಿ ಜಾಸ್ತಿ, ವಿಶ್ವಾಸ ಕಮ್ಮಿ ಎನ್ನುತ್ತಿದ್ದರು. ನಿಮ್ಮ ಬಗ್ಗೆ ಇರುವ ಗೌರವ, ನಿಮ್ಮ ಸಾಹಿತಿ ಇರುವ ಗೌರವ ಹೆಚ್ಚಾಗಬೇಕು ಹೇಳುತ್ತಿದ್ದರು ಎಂದು ಹಿಂದಿನ ನೆನಪನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾ ಹಂಪನಾ, ಹಿರಿಯ ಕವಿಗಳಾದ ಎಚ್ ಎಸ್ ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ಸಪ್ನ ಬುಕ್ ಹೌಸ್ ಮುಖಸ್ಥ ನಿತಿನ್ ಷಾ, ಪತ್ರಕರ್ತ ರವಿ ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments