ಶೀಘ್ರದಲ್ಲೇ ಸರ್ವರ್ ಗಳ ರಿಪೇರಿ ಮಾಡಲು ಸೂಚನೆ

Social Share

ಬೆಂಗಳೂರು,ಫೆ.21-ಚಿಕ್ಕಮಗಳೂರು ಜಿಲ್ಲೆ ಮೂಡಗೆರೆ ತಾಲ್ಲೂಕಿನಲ್ಲಿ ದುರಸ್ತಿಯಲ್ಲಿರುವ ಸರ್ವರ್ಗಳನ್ನು ಶೀಘ್ರದಲ್ಲೇ ರಿಪೇರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಆರ್ ಅಶೋಕ್ ವಿಧಾನಸಭೆಗೆ ತಿಳಿಸಿದರು.
ಶಾಸಕ ಕುಮಾರಸ್ವಾಮಿ.ಎಂ.ಪಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ತಾಂತ್ರಿಕ ಕಾರಣಗಳಿಂದ ಮೂಡಿಗೆರೆಯಲ್ಲಿ ಸರ್ವರ್ಗಳು ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಶೀಘ್ರದಲ್ಲೇ ಇದನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಡಲು ಸಂಬಂಧಪಟ್ಟ ಅಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು.
ಕಳೆದ ಜುಲೈನಿಂದ ನವೆಂಬರ್ 21ರ ಅವಯಲ್ಲಿ ಚಿಕ್ಕಮಗಳೂರು ಮೂಡಗೆರೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರ ಅಗತ್ಯವಾದ ಪರಿಹಾರವನ್ನು ನೀಡಿದೆ. ಜಿಲ್ಲೆಯಲ್ಲಿ 67,688 ಹೆಕ್ಟೇರ್ ಬೆಳೆ ಹಾನಿಯಾಗಿತ್ತು.
ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಬೆಳೆಗೆ 6800 ಬದಲಿಗೆ 13,600 ರೂ. ನೀರಾವರಿಯ ಪ್ರತಿ ಹೆಕ್ಟೇರ್ ಬೆಳೆಗೆ 25 ಸಾವಿರ, ಬಹುವಾರ್ಷಿಕ ಬೆಳೆಯ ಒಂದು ಹೆಕ್ಟೇರ್ಗೆ 28 ಸಾವಿರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗೆ 1100ಕೋಟಿ ಪರಿಹಾರವನ್ನು ನೀಡಿದ್ದೇವೆ ಎಂದರು.

Articles You Might Like

Share This Article