ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ ಹೆಚ್ಚಿಸಿಕೊಂಡ ಸತ್ಯೇಂದ್ರ ಜೈನ್

Social Share

ನವದೆಹಲಿ, ನ.23- ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ದೇಹ ತೂಕ ಕಳೆದುಕೊಂಡಿಲ್ಲ, ಬದಲಾಗಿ ಎಂಟು ಕೆಜಿಯಷ್ಟು ಹೆಚ್ಚಾಗಿದ್ದಾರೆ ಎಂದು ಬಂಧಿಖಾನೆ ಇಲಾಖೆಯ ಮೂಲಗಳು ತಿಳಿಸಿವೆ.

ಜೈಲಿನಲ್ಲಿ ಸತ್ಯೇಂದ್ರ ಜೈನ್ ಶಿಕ್ಷೆ ಅನುಭವಿಸುತ್ತಿಲ್ಲ, ಮಜಾ ಮಾಡುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. ನಿನ್ನೆ ಬಿಜೆಪಿ ವಕ್ತಾರರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಸತ್ಯೇಂದ್ರ ಜೈನ್ ಅದ್ಧೂರಿ ಹಾಗೂ ಐಶರಾಮಿ ಆಹಾರ ಸೇವಿಸುತ್ತಿರುವುದು ಕಂಡು ಬಂದಿತ್ತು.

ಜೈಲಿನಲ್ಲಿರುವ ಖೈದಿಯೊಬ್ಬರು ಸತ್ಯೇಂದ್ರ ಜೈನ್‍ಗೆ ಮೊದಲು ಆಹಾರ ತಂದು ಕೊಡುವುದು, ತಾಜ್ಯವನ್ನು ಎಸೆಯಲು ಕಸದ ಬುಟ್ಟಿಯನ್ನು ಹತ್ತಿರಕ್ಕೆ ತಂದಿಡುವುದು, ಪ್ಯಾಕೇಜಿಂಗ್ ನೀರಿನ ಬಾಟಲ್ ಪೂರೈಕೆ ಸೇರಿದಂತೆ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬರುತ್ತದೆ.

ಡ್ರಗ್ ನಶೆಯಲ್ಲಿ ಇಡೀ ಕುಟುಂಬವನ್ನೇ ಕೊಂದು ಹಾಕಿದ ಪಾಪಿ

ಕತ್ತಿರಿಸಿದ ತಾಜಾ ಹಣ್ಣು ತರಕಾರಿ, ಪೌಷ್ಟಿಕ ಆಹಾರವನ್ನು ಸತ್ಯೇಂದ್ರ ಜೈನ್ ಆರಾಮಾಗಿ ಸೇವಿಸುತ್ತಿದ್ದಾರೆ. ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ನ್ಯಾಯಾಲಯ ಜೈಲಿನ ಅಧಿಕಾರಿಗಳಿಂದು ವಿವರಣೆ ಕೇಳಿದೆ.

ಸತ್ಯೇಂದ್ರ ಜೈನ್ ಪರ ವಕೀಲರು ಜಾಮೀನು ಅರ್ಜಿಯ ವಿಚಾರಣೆ ವೇಳೆ ತಮ್ಮ ಕಕ್ಷಿಧಾರರಿಗೆ ಜೈನ್ ಪದ್ಧತಿಯಂತೆ ಒಳ್ಳೆಯ ಆಹಾರ ಸಿಗುತ್ತಿಲ್ಲ. ಸರಿಯಾದ ಆಹಾರ ಇಲ್ಲದೆ 28 ಕೆಜಿ ತೂಕ ಕಳೆದುಕೊಂಡಿದ್ದಾರೆ. ಧಾರ್ಮಿಕ ಪೂಜಾ ಕಾರ್ಯಗಳಿಗೂ ತೊಂದರೆಯಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಈ ಕುರಿತು ಮಾಹಿತಿ ನೀಡಿರುವ ಜೈಲಿನ ಅಧಿಕಾರಿಗಳು ಸತ್ಯೇಂದ್ರ ಜೈನ್‍ಗೆ ಉತ್ತಮ ಆಹಾರ ಪೂರೈಕೆಯಾಗುತ್ತಿದೆ. ಅವರು ತೂಕ ಕಳೆದುಕೊಂಡಿಲ್ಲ. ಬದಲಾಗಿ ಜೈಲಿನಲ್ಲಿ ಎಂಟು ಕೆಜೆಯಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಬಿಜೆಪಿ ಸತ್ಯೇಂದ್ರ ಜೈನ್ ಅವರ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜೈನ್ ಉಳಿದುಕೊಂಡಿರುವ ತಿಹಾರ್ ಜೈಲು ದೆಹಲಿ ಸರ್ಕಾರದ ಬಂಧಿಖಾನೆ ಇಲಾಖೆಯ ಅೀಧಿನದಲ್ಲಿದೆ. ಅಲ್ಲಿ ಸಚಿವ ಸತ್ಯೇಂದ್ರ ಜೈನ್‍ರಿಗೆ ಎಲ್ಲಾ ರೀತಿಯ ಐಶರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಆರೋಪಿಸಿದೆ.

ಶೇಷನ್ ಅವರಂತಹ ಚುನಾವಣಾ ಆಯುಕ್ತರ ಅವಶ್ಯಕತೆಯಿದೆ : ಸುಪ್ರೀಂ

ಜೈಲಿನಲ್ಲಿರುವ ಎಲ್ಲರಿಗೂ ಸಮಾನ ಪರಿಗಣನೆ ಇರಬೇಕು. ಆದರೆ ಸತ್ಯೇಂದ್ರ ಜೈನ್ ವಿವಿಐಪಿ ಸೌಲಭ್ಯ ಪಡೆಯುತ್ತಿದ್ದಾರೆ, ಜೈಲಿನ ಅಧಿಕ್ಷಕರನ್ನು ಪ್ರತಿ ದಿನ ನಿರಾತಂಕವಾಗಿ ಭೇಟಿಯಾಗುತ್ತಿದ್ದಾರೆ. ತಮ್ಮ ಸಹ ಆರೋಪಿಗಳ ಜೊತೆಯೂ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ ಎಂದು ದೂಷಿಸಿದೆ.

ಕಳೆದೆರಡು ದಿನಗಳ ಹಿಂದೆ ಸತ್ಯೇಂದ್ರ ಜೈನ್ ಪಾದಗಳಿಗೆ ಮಸಾಜ್ ಮಾಡುತ್ತಿರುವ ವಿಡಿಯೋವೊಂದು ಬಿಡುಗಡೆಯಾಗಿತ್ತು. ಅದು ಮಸಾಜ್ ಅಲ್ಲ ವೈದ್ಯರ ಸಲಹೆ ಮೇರೆ ತಜ್ಞರು ಫಿಜಿಯೋಥೆರಪಿ ಮಾಡಲಾಗುತ್ತಿದೆ ಎಂದು ಅಮ್ ಆದ್ಮಿ ಪಕ್ಷ ತನ್ನ ನಾಯಕನನ್ನು ಸಮರ್ಥಿಸಿಕೊಂಡಿತ್ತು.

ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಶಕ್ಕೆ ಪಡೆದ ಎನ್‍ಐಎ

ಮಾರನೇಯ ದಿನವೇ ಬಿಜೆಪಿ ಹೇಳಿಕೆ ನೀಡಿ, ಮಸಾಜ್ ಮಾಡುತ್ತಿರುವವರು ಫಿಜಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್, ಚಿಕ್ಕಮಗುವಿನ ಮೇಲೆ ಅತ್ಯಾಚಾರ ಮಾಡಿ ಪೋಸ್ಕೋ ಕಾಯ್ದೆಯಡಿ ಜೈಲಿನಲ್ಲಿರುವ ಆರೋಪಿ ಎಂದಿತ್ತು. ಭ್ರಷ್ಟಚಾರದ ಆರೋಪದಡಿ ಜೈಲು ಸೇರಿರುವ ಸತ್ಯೇಂದ್ರ ಜೈನ್‍ಗೆ ರೆಪಿಸ್ಟ್ ಆರೋಪಿ ಮಸಾಜ್ ಮಾಡಿದ್ದಾರೆ ಎಂದು ಟೀಕಿಸಿತ್ತು.

ಈ ಘಟನೆಯ ಬಳಿಕ ಸತ್ಯೇಂದ್ರ ಜೈನ್‍ರನ್ನು ಉಗ್ರ ಅಜ್ಮಲ್ ಕಸಬ್ ತಂಗಿದ್ದ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಜೈಲು ಅೀಧಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ಮಸಾಜ್ ಮಾಡುತ್ತಿರುವ ವಿಡಿಯೋ ಹಳೆಯದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಆಧರಿಸಿ ಈಗಾಗಲೇ ಬಂಧಿಖಾನೆ ಇಲಾಖೆ ಕ್ರಮ ಜರುಗಿಸಿದೆ ಎಂದು ಜೈಲಿನ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

Satyendar Jain, luxury, Food, Video, Tihar jail,

Articles You Might Like

Share This Article