ಸೌದಿ ದೊರೆ ಸಲ್ಮಾನ್ ಆರೋಗ್ಯದಲ್ಲಿ ಚೇತರಿಕೆ

ರಿಯಾದ್, ಮೇ 16- ಕೊಲೊನೋಸ್ಕೋಪಿ ಚಿಕಿತ್ಸೆಗೆ ಚಿಕಿತ್ಸೆಗೆ ಒಳಗಾಗಿದ್ದ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಬೆತ್ತದ ಸಹಾಯದಿಂದ ನಿಧಾನವಾಗಿ ನಡೆದಾಡಿದ್ದಾರೆ ಎಂದು ರಾಯಲ್ ಕೋರ್ಟ್ ಬಿಡುಗಡೆ ಮಾಡಿದ ವೀಡಿಯೊ ತಿಳಿಸಿದೆ.

ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ದೇಶದಲ್ಲಿ ಒಂದಾಗಿರುವ ಸೌದಿ ಅರೇಬಿಯಾದ ಸಂಪೂರ್ಣ ಅಧಿಕಾರವನ್ನು ಹೊಂದಿರುವುದರಿಂದ 86 ವರ್ಷದ ಸನ್ಮಾನ್ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ 36 ವರ್ಷ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ದೈನಂದಿನ ಆಡಳಿತವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಜಿಡ್ಡಾ ನಗರದ ಕಿಂಗ್ ಫೈಸಲ್ ಸ್ಪೆಷಲಿಸ್ಟ್ ಆಸ್ಪತ್ರೆಯಿಂದ ಕ್ರೌನ್ ಪ್ರಿನ್ಸ್ ಮತ್ತು ಆ ಪ್ರದೇಶದ ಗವರ್ನರ್ ಹಾಗೂ ಪ್ರಿನ್ಸ್ ಖಾಲಿದ್ ಬಿನ್ ಫೈಸಲ್ ಸೇರಿದಂತೆ ಅಧಿಕಾರಿಗಳ ಪರಿವಾರದೊಂದಿಗೆ ಸಲ್ಮಾನ್ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.

ಮೇ 8 ರಂದು ಆಸ್ಪತ್ರೆಗೆ ದಾಖಲಾಗಿದ್ದ ಸಲ್ಮಾನ್ ಅವರಿಗೆ ಆಸ್ಪತ್ರೆಯಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ವಾರಗಳ ಹಿಂದೆ ದೊರೆಯ ಪೇಸ್‍ಮೇಕರ್‍ನ ಬ್ಯಾಟರಿಯನ್ನು ಬದಲಾಯಿಸಲಾಗಿತ್ತು. 2020 ರಲ್ಲಿ ಪಿತ್ತಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ್ದರು.
2015 ರ ಜನವರಿಯಲ್ಲಿ ತನ್ನ ಮಲಸಹೋದರ ದೊರೆ ಅಬ್ದುಲ್ಲಾ ಮರಣದ ನಂತರ ಸಲ್ಮಾನ್ ಸಿಂಹಾಸನಕ್ಕೆ ಏರಿದರು.