ISSF World Cup : 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಭಾರತಕ್ಕೆ ಚಿನ್ನ

Social Share

ಕೈರೋ,ಮಾ.3- ಐಎಸ್‍ಎಸ್‍ಎಫ್ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾರತದ ವನಿತೆಯರು 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಂಭ್ರಮಿಸಿದೆ. 10 ಮೀಟರ್ ಏರ್ ಪಿಸ್ತೂಲ್‍ನ ಪ್ರಶಸ್ತಿ ಸುತ್ತಿನಲ್ಲಿ ಭಾರತದ ರೈಫಲ್ಸ್‍ಗಳಾದ ಶ್ರೀ ನಿವೇತಾ, ಇಶಾ ಸಿಂಗ್ ಹಾಗೂ ರುಚಿತಾ ವಿನೇರ್‍ಕರ್ ಅವರು 574 ಅಂಕಗಳನ್ನು ಕಲೆ ಹಾಕುವ ಮೂಲಕ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ.
ಈ ಸುತ್ತಿನಲ್ಲಿ ಭಾರತದ ಶೂಟರ್‍ಗಳಿಗೆ ಪ್ರಬಲ ಪೈಪೋಟಿ ನೀಡಿದ ಜರ್ಮನಿಯ ಆಂಡ್ರಿಯಾ ಕತ್ರಿನಾ ಹೆಕ್‍ನೆರ್, ಸಂದ್ರಾ ರಿಟಿಜ್ ಮತ್ತು ಕರೀನಾ ವಿಮ್ಮರ್ ಅವರು ತಮ್ಮ ತೀಕ್ಷ್ಣ ಗುರಿಯಿಂದಾಗಿ ಆರಂಭದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಭರವಸೆ ಮೂಡಿಸಿದ್ದರಾದರೂ ಕೊನೆಯ ಸುತ್ತಿನಲ್ಲಿ ಭಾರತೀಯ ಶೂಟರ್‍ಗಳ ಎದುರು ಮಂಕಾದ ಜರ್ಮನಿ ಮಹಿಳಾ ಶೂಟರ್‍ಗಳು 571 ಪಾಯಿಂಟ್ಸ್‍ಗಳನ್ನು ಕಲೆ ಕೇವಲ 3 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಈ ಬಾರಿಯ ವಿಶ್ವಕಪ್‍ನಲ್ಲಿ ಭಾರತದ ಶೂಟರ್‍ಗಳು ಉತ್ತಮ ಪ್ರದರ್ಶನ ತೋರುತ್ತಿದ್ದು ಒಲಿಂಪಿಕ್ಸ್‍ನಲ್ಲಿ ಶೂಟ್ 16 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದುವರೆಗೂ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದುಕೊಂಡಿದೆ.

Articles You Might Like

Share This Article