ನವದೆಹಲಿ,ಫೆ.14- ತಮಿಳು ನಾಡಿನಲ್ಲಿ 17 ವರ್ಷ ವಯಸ್ಸಿನ ಶಾಲಾ ಬಾಲಕಿಯ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆಯ ವಿರುದ್ಧ ಸಲ್ಲಿಸಿದ ಪೊಲೀಸರ ಮನವಿಯ ವಿಚಾರಣೆ ನಡೆಸಲು ಸುಪ್ರೀಂಕೋಟ್ ್ ಸಮ್ಮತಿಸಿದೆ. ಆದರೆ ಈ ವಿದ್ಯಾರ್ಥಿನಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಲು ಬಲವಂತ ಮಾಡಲಾಗಿತ್ತು ಎಂಬ ಆರೋಪದ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರೆಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಹರಿಹರೆಯದ ಬಾಲಕಿ ಜನವರಿ 9ರಂದು ತಾಂಜಾವೂರಿನ ತನ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಮತ್ತು 10 ದಿನಗಳ ಬಳಿಕ ಮೃತಪಟ್ಟಳು. ತನ್ನ ಹಾಸ್ಟೆಲ್ ವಾರ್ಡನ್ ಹಾಸ್ಟೆಲ್ ಶುಚಿಗೊಳಿಸಲು ಮತ್ತು ನಿರ್ವಹಣಾ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಿದ್ದುದಾಗಿ ಈ ಬಾಲಕಿ ವಿಡಿಯೋ ಒಂದರಲ್ಲಿ ಆರೋಪಿಸಿದ್ದಳು.
ಹದಿಹರಿಯದವರ ಕಾಯ್ದೆಯಡಿ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಹಾಸ್ಟೆಲ್ ವಾರ್ಡನ್‍ರನ್ನು ಬಂಸಲಾಗಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇ¯ ಎಂ.ತ್ರಿವೇದಿ ಅವರನ್ನು ಒಳಗೊಂಡ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ ಮನವಿಯ ಮೇರೆಗೆ ನೋಟಿಸ್ ಜಾರಿ ಮಾಡಿತು.
