ನೀಟ್-ಪಿಜಿ ಪ್ರವೇಶಾತಿಗೆ ಸುಪ್ರೀಂ ಅನುಮತಿ

Social Share

ನವದೆಹಲಿ, ಜ.7- ಸುಪ್ರೀಂಕೋರ್ಟ್ ಇಂದು 2021-22ನೆ ಸಾಲಿಗಾಗಿ ನೀಟ್-ಪಿಜಿ ಪ್ರವೇಶಾತಿಯ ವೈದ್ಯಕೀಯ ಕೌನ್ಸೆಲಿಂಗ್ ಪುನರಾರಂಭಿಸಲು ಮಧ್ಯಂತರ ಆದೇಶದಲ್ಲಿ ಅನುಮತಿ ನೀಡಿದೆ. ಶೇ.27ರ ಒಬಿಸಿ ಮೀಸಲಾತಿ ಮತ್ತು ಶೇ.10ರಷ್ಟು ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್‍ಗಳ) ಕೋಟಾಗಳನ್ನು ಎತ್ತಿ ಹಿಡಿದಿದೆ.
ಮಧ್ಯಂತರ ಆದೇಶ ನೀಡಲು ಕಾರಣಗಳನ್ನು ಆನಂತರ ತಿಳಿಸಲಾಗುವುದು ಮತ್ತು 23021-22ರ ಶೈಕ್ಷಣಿಕ ವರ್ಷಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಪಿಜಿ) ಕೌನ್ಸೆಲಿಂಗ್ ಈಗಾಗಲೇ ಅಸೂಚಿತ ಮಾನದಂಡಗಳ ಅನ್ವಯ ಮುಂದುವರಿಯುವುದು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಮುಂದಿನ ವರ್ಷಗಳಲ್ಲಿ ಇಡಬ್ಲ್ಯೂಎಸ್‍ಗಳಿಗೆ 8 ಲಕ್ಷ ರೂ.ಗಳ ಮಾನದಂಡದ ಸಿಂಧುತ್ವ ನಿರ್ಧರಣವು ನ್ಯಾಯಪೀಠದ ಅಂತಿಮ ತೀರ್ಪಿನ ಪ್ರಕಾರ ಇರಲಿದೆ ಎಂದು ಹೇಳಿದ ನ್ಯಾಯಪೀಠವು ಪ್ರಕರಣದ ಅಂತಿಮ ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.

Articles You Might Like

Share This Article