SC/STಮೀಸಲಾತಿ ಹೆಚ್ಚಳ ಪ್ರಸ್ತಾಪ ಕೇಂದ್ರಕ್ಕೆ ರವಾನೆ

Social Share

ಬೆಂಗಳೂರು,ಫೆ.9-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸುವ ಸಂವಿಧಾನದ 9ನೇ ಷೆಡ್ಯೂಲ್‍ಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಿಂದ 17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.3ರಿಂದ 7 ಸೇರಿದಂತೆ ಉದ್ಯೋಗ ಹಾಗು ಶಿಕ್ಷಣದಲ್ಲಿ ಎಸ್ಸಿ-ಎಸ್ಟಿ ಶೇ.24ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ಸಂಸತ್‍ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ 9ನೇ ಷೆಡ್ಯೂಲ್‍ಗೆ ತಿದ್ದುಪಡಿ ಮಾಡಿದ ಬಳಿಕ ಕಾಯ್ದೆ ಅಂಗೀಕಾರ ಪಡೆಯಲಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಿದೆ. ಅಧಿವೇಶನದಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗುವುದು ಎಂದಷ್ಟೇ ಹೇಳಿದರು.

ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ

ರಾಜ್ಯದ ಒಟ್ಟು 30 ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಟಾಟಾ ಟೆಕ್ನಾಲಜಿ ಸಹಯೋಗದಲ್ಲಿ ಈ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ 927 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದ್ದು, ಇದರಲ್ಲಿ ಟಾಟಾ ಸಂಸ್ಥೆಯವರು 816 ಕೋಟಿ ಹಾಗೂ ರಾಜ್ಯ ಸರ್ಕಾರ 131 ಕೋಟಿ ನೀಡಲಿದೆ.

ಪ್ರತಿ ಐಟಿಐ ಕಾಲೇಜಿಗೆ 27.20 ಕೋಟಿ ರೂ. ಅನುದಾನವನ್ನು ನೀಡಲಾಗುವುದು. ಇದರಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಹೇಳಿದರು. ರಾಜ್ಯದ ಎಸ್ಕಾಂ ಕಂಪನಿಗಳಿಗೆ ಒಟ್ಟು 13,708.38 ಕೋಟಿ ಸಾಲ ಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಚೆಸ್ಕಾಂ, ಬೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂ ಕಂಪನಿಗಳಿಗೆ ಸಾಲ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ನವೀಕರಣ ಮಾಡಬಹುದಾದ ಇಂಧನ ಮಾಡಬಹುದಾದ ಇಂಧನ ನೀತಿ 2022-27ನ್ನು ಸಚಿವ ಸಂಪುಟ ಸಭೆ ತಿದ್ದುಪಡಿ ಮಾಡಿದೆ. ಈ ಪ್ರಕಾರವಾಗಿ ಸೋಲಾರ್ ಘಟಕಕ್ಕೆ 3.5 ಎಕರೆಯಿಂದ 4 ಎಕರೆಗೆ ಏರಿಕೆ ಹಾಗು ಪವನ ವಿದ್ಯುತ್ ಘಟಕ ಉತ್ಪಾದನೆಯನ್ನು ಈ ಮೊದಲು ಮೂರು ವರ್ಷದ ಅವಗೆ ನೀಡಲಾಗಿತ್ತು. ಇದೀಗ ಇದನ್ನು ಕಾರ್ಯ ಆರಂಭಿಸಿದ ಎರಡು ವರ್ಷದ ಅವಗೆ ಗುರಿ ನೀಡಲಾಗಿದೆ ಎಂದು ವಿವರಿಸಿದರು.

ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಮೂಲ ಸೌಕರ್ಯ ಅಭಿವೃದ್ಧಿ 25 ಕೋಟಿ ಅನುಮೋದನೆ ನೀಡಲಾಗಿದೆ. ಹಗಲೂರು, ಮಾಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರ್ವಜ್ಞ ಭವನ ನಿರ್ಮಾಣ, ತಡೆಗೋಡೆ, ಪ್ರವೇಶದ್ವಾರ, ಕಮಾನು ಸಮುದಾಯ ಭವನ, ಗ್ರಂಥಾಲಯ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುತ್ತದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100ರಿಂದ 250 ಹಾಸಿಗೆ ಮೇಲ್ದರ್ಜೆಗೇರಿಸಲು 23.50 ಕೋಟಿ ಅನುಮೋದನೆ ನೀಡಲಾಗಿದೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ನೂತನ ಪಶು ಸಂಶೋಧನಾ ಕಾಲೇಜು ಸ್ಥಾಪನೆಗೆ 25 ಕೋಟಿ ಅನುದಾನವನ್ನು ನೀಡಲಾಗಿದ್ದು, ಈ ಮೊತ್ತವನ್ನು ಡಿಎಂಎಫ್‍ನಿಂದ ಬಳಸಲಾಗುವುದು ಎಂದು ವಿವರಿಸಿದರು.
ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಜ್ಯುಲೆಷನ್ ಉಪಗ್ರಹ ದತ್ತಾಂಶ ಖರೀದಿಗೆ 18 ಕೋಟಿ ಬಳಕೆ ಮಾಡಲು ಸಚಿವ ಸಂಪುಟ ಸಭೆ ಅನುಮತಿಸಿದೆ ಎಂದು ಹೇಳಿದರು.

ಗೋವಿಂದರಾಜನಗರ ವಿದಾನಸಭಾ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಲ್ ಆಸ್ಪತ್ರೆ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ 25 ಕೋಟಿ ನೀಡಲಾಗಿದೆ. ಸಿಲ್ಕ್ ಬೋರ್ಡ್ ಬಳಿಯ ಟೋಲ್ ತೆರವುಗೊಳಿಸಿದ್ದವರ ವಿರುದ್ಧ ವಿಚಾರಣೆ ನಡೆಸಲು ಸಚಿವ ಸಂಪುಟ ಸಭೆ ಆದೇಶ ನೀಡಿದೆ.

ಇದನ್ನು ಸುಪ್ರೀಂಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇದಕ್ಕಾಗಿ 55.59 ಕೋಟಿ ಠೇವಣಿ ಇಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ಖಾಸಗಿ ವ್ಯಕ್ತಿಯೊಬ್ಬರು ಈ ಟೋಲ್‍ನ್ನು ತೆರವು ಮಾಡಿದ್ದರೆಂಬ ಹಿನ್ನಲೆಯಲ್ಲಿ ವಿಚಾರಣೆ ನಡೆಸಲು ಒಪ್ಪಿಗೆ ಪಡೆಯಲಾಗಿದೆ.

ರಾಜ್ಯದಲ್ಲಿ ಏ.1ರಿಂದ ಗುಜರಿ ನೀತಿ ಜಾರಿ

ಚಿಕ್ಕಬಳ್ಳಾಪುರ, ನೆಲಮಂಗಲ ರಸ್ತೆ ಅಭಿವೃದ್ಧಿಗೆ 10.13 ಕೋಟಿ ರೂ. ಅನುಮೋದಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸಂಕೀರ್ಣದೊಳಗೆ ಪ್ರಾರಂಭ ಮಾಡಲು ಅನುಕೂಲವಾಗುವಂತೆ ಸುಮಾರು 18 ಎಕರೆ ಜಾಗದಲ್ಲಿ ವಿಸ್ತಾರಸೌಧ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 49.6 ಕೋಟಿ ಅನುಮೋದನೆ ನೀಡಲಾಗಿದೆ.

ಕಂದಾಯ, ನೀರಾವರಿ, ಲೋಕೋಪಯೋಗಿ ಸೇರಿದಂತೆ ಪ್ರತಿಯೊಂದು ಇಲಾಖೆಗಳು ಒಂದೇ ಸೂರಿನಡಿ ಕಾರ್ಯಾರಂಭ ಮಾಡಲಿವೆ. ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ಗ್ರಾಮದಲ್ಲಿ ವಿದ್ಯಾರ್ಥಿ ನಿಲಯಕ್ಕೆ ವನವಾಸಿ ಕಲ್ಯಾಣ ಸಂಸ್ಥೆಗೆ ಒಂದು ಎಕರೆ, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಜಲಜೀವನ್ ಮಿಷನ್‍ನಡಿ ಯೋಜನೆಗೆ 26 ಕೋಟಿ, ಸಿಗ್ಗಾವ್‍ನ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ, ತರಬೇತಿ ಕೇಂದ್ರಕ್ಕೆ 73.75 ಕೋಟಿ, ಹಾವೇರಿಯ ಯಲ್ಲಗೋಡು ಗ್ರಾಮದಲ್ಲಿ ಬಹುಕೌಶಲ್ಯ ತರಬೇತಿ ಕೇಂದ್ರ, ಬಾಲಕರ ವಿದ್ಯಾರ್ಥಿ ನಿಲಯಕ್ಕೆ 35.55 ಕೋಟಿ ನೀಡಲಾಗಿದೆ.

ಇದೇ ರೀತಿ ಮೈಸೂರು ನಗರ ಸೇರಿ ಸುತ್ತಮುತ್ತಲಿನ 92 ಗ್ರಾಮಗಳ ಕುಡಿಯುವ ನೀರಿಗೆ 592 ಕೋಟಿ, ಮಡಿಕೇರಿಯಲ್ಲಿ ಹೊಸ ಎಸ್ಪಿ ಕಚೇರಿ ತೆರೆಯಲು 12 ಕೋಟಿ, ಹೊಸದುರ್ಗ ತಾಲ್ಲೂಕಿನ 366 ಗ್ರಾಮ ಹಾಗೂ ತರೀಕೆರೆಯ 117 ಜನವಸತಿ ಕುಡಿಯುವ ನೀರಿಗೆ 350 ಕೋಟಿ ಒದಗಿಸಲಾಗಿದೆ ಎಂದು ತಿಳಿಸಿದರು.

ಬಾನಂಗಳದಲ್ಲಿ ಲೋಹದ ಹಕ್ಕಿಗಳ ರೋಚಕ ತಾಲೀಮು

ಕಲ್ಯಾಣ ಕರ್ನಾಟಕ ಸಾರಿಗೆಯಡಿ ಕಲಬುರಗಿಯಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣಕ್ಕೆ 26 ಕೋಟಿ, ನರಗುಂದ ಬಳಿ ಕಿತ್ತೂರುರಾಣಿ ಸಮುದಾಯ ಭವನ ಕಟ್ಟಲು 2 ಎಕರೆ ಹಾಗೂ ಖಾಲಿ ಇರುವ ಲೋಕಸೇವಾ ಆಯೋಗದ ಒಂದು ಸದಸ್ಯರ ಹುದ್ದೆಯನ್ನು ಭರ್ತಿ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ಸಚಿವ ಸಂಪುಟ ಸಭೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

SC, ST, reservation, Cabinet, meeting, Center Govt.

Articles You Might Like

Share This Article