ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ

Social Share

ಬೆಳಗಾವಿ,ಡಿ.20- ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ/ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡುವ ಕಾಯ್ದೆ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಲುವಳಿ ಸೂಚನೆ ಕುರಿತು ಪ್ರಸ್ತಾಪಿಸಿ, ಇದೊಂದು ಮಹತ್ವದ ವಿಷಯವಾಗಿರುವುದರಿಂದ ಸದನದಲ್ಲಿ ಅನೇಕ ಸದಸ್ಯರು ಮಾತನಾಡಬೇಕಿದೆ. ಕೇವಲ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಚರ್ಚೆ ನಡೆಸಿದರೆ ಸಾಲದು, ಸದನದಲ್ಲಿ ಸುದೀರ್ಘವಾದ ಚರ್ಚೆ ಆಗಬೇಕೆಂದು ಅಭಿಪ್ರಾಯಪಟ್ಟರು.

ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕಾಯ್ದೆಯನ್ನು ನಾವು ಸುಗ್ರಿವಾಜ್ಞೆ ಮೂಲಕ ಅಂಗೀಕರಿಸಿದ್ದೇವೆ. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ. ಸದನದಲ್ಲಿ ಎಲ್ಲ ಸದಸ್ಯರು ಚರ್ಚೆ ಮಾಡಬೇಕೆಂಬ ಕಾರಣಕ್ಕಾಗಿಯೇ ಪುನಃ ಇದನ್ನು ಮಂಡಿಸಿದ್ದೇವೆ. ಅನೇಕ ಸದಸ್ಯರು ಇದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಬೆಳಕು ಚೆಲ್ಲಬೇಕು. ಸರ್ಕಾರ ಚರ್ಚಿಸಲು ಮುಕ್ತವಾಗಿದೆ ಎಂದರು.

ಬಾಂಗ್ಲಾದೇಶಿಗಳಿಗೆ ನಕಲಿ ದಾಖಲಾತಿ ಸೃಷ್ಟಿಗೆ ನೆರವು ನೀಡಿದ ಶಾಸಕರ ವಿರುದ್ಧ ಕೇಸ್

ಆಗ ಸಚಿವ ಜೆ.ಸಿ.ಮಾಧು ಸ್ವಾಮಿ ಅವರು, ಇದನ್ನು ಪ್ರತ್ಯೇಕವಾಗಿ ಚರ್ಚೆ ಮಾಡುವ ಬದಲು ಕೆಲವು ಕಾಯ್ದೆಗಳು ಮಂಡನೆಯಾಗ ಬೇಕು. ಅದರ ಜೊತೆಗೆ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಯು.ಟಿ.ಖಾದರ್, ಆರ್.ವಿ.ದೇಶಪಾಂಡೆ, ಕೃಷ್ಣಭೈರೇಗೌಡ ಮತ್ತಿತರರು, ಸಭಾಧ್ಯಕ್ಷರೇ ಪ್ರತ್ಯೇಕ ಚರ್ಚೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಸಭಾನಾಯಕರು ಕೂಡ ಒಪ್ಪಿದ್ದಾರೆ. ಆದರೆ ನಿವೇಕೆ ಆಕ್ಷೇಪಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಾಧುಸ್ವಾಮಿ, ಚರ್ಚೆಗೆ ನಾವು ಬೇಡ ಎಂದು ಹೇಳುತ್ತಿಲ್ಲ. ಸದನವು ನಿಯಮಗಳ ಪ್ರಕಾರ ನಡೆಯಬೇಕು. ಮೊದಲು ಕಾಯ್ದೆಗಳು ಮಂಡನೆಯಾಗಲಿ, ನಂತರ ಚರ್ಚೆಯಾಗಲಿ ಸರ್ಕಾರ ಉತ್ತರ ಕೊಡಲು ಸಿದ್ದವಿದೆ ಎಂದರು.

ಈ ಹಂತದಲ್ಲಿ ಸಚಿವ ಗೋವಿಂದ ಕಾರಜೋಳ ಅವರು, ನಾವು ಚರ್ಚೆಗೆ ವಿರೋಧಿಸುತ್ತಿಲ್ಲ. ಕಾಂಗ್ರೆಸ್‍ನವರು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವು ಮಾಡದೇ ಇರುವುದನ್ನು ಬಿಜೆಪಿಯವರು ಮಾಡಿದ್ದಾರೆಂದು ಹೊಟ್ಟೆ ಉರಿ ಇದೆ ಎಂದು ಪ್ರತಿಪಕ್ಷದವರ ಕಾಲೆಳೆದರು.

ಜನವರಿ ಮೊದಲ ವಾರದಲ್ಲಿ ಕೆಪಿಟಿಸಿಎಲ್ ಎಇ,ಜೆಇ ನೇಮಕಾತಿ ಪರೀಕ್ಷೆ ಫಲಿತಾಂಶ

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾವು ಕಾಯ್ದೆಗೆ ಎಲ್ಲೂ ವಿರೋಧಿಸುತ್ತಿಲ್ಲ. ಸರ್ವಪಕ್ಷಗಳ ಸಭೆಯಲ್ಲಿ ನಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದೇವೆ. ಅಲ್ಲದೆ ಇದಕ್ಕೆ ಬೇಕಾದ ಸಲಹೆಯನ್ನು ಕೂಡ ಕೊಟ್ಟಿದ್ದೇವೆ.

ಮೀಸಲಾತಿ ವಿರೋಧಿಗಳು ಯಾರು ಎಂಬುದು ಜಗತ್ತಿಗೆ ಗೊತ್ತು. ಮಂಡಲ್ ಆಯೋಗ ಜಾರಿ ಮಾಡಲು ಹೊರಟಾಗ ಅದನ್ನು ವಿರೋಧಿಸಿದವರು ಯಾರು? ರಾಮಜೋಯಿಸ್ ಎಂಬುವರು ಯಾವ ಪಕ್ಷಕ್ಕೆ ಸೇರಿದ್ದರು? ಸುಪ್ರೀಂಕೋರ್ಟ್‍ಗೆ ಹೋದವರು ಯಾರು? ನಿಜವಾದ ಮೀಸಲಾತಿ ವಿರೋಧಿಗಳೆಂದರೆ ಅದು ಬಿಜೆಪಿಯವರು ಎಂದು ತಿರುಗೇಟು ನೀಡಿದರು.

SC-ST, reservation, increase, discussion, Assembly, Kageri,

Articles You Might Like

Share This Article