ನವದೆಹಲಿ,ಫೆ. : ಕಳೆದ ವರ್ಷ ಕರ್ನಾಟಕದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಹಿಜಾಬ್ ಪ್ರಕರಣ. ಇದೀಗ ಮತ್ತೇ ಮುನ್ನಲೆಗೆ ಬಂದಿದ್ದು, ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಶೀಘ್ರ ತೀರ್ಪು ನೀಡುವಂತೆ ವಿದ್ಯಾರ್ಥಿನಿಯರ ಗುಂಪೆÇಂದು ಸುಪ್ರೀಂಗೆ ಮನವಿ ಮಾಡಿದೆ.
ಈ ಬಗ್ಗೆ ಪ್ರತ್ಯೇಕ ಪೀಠ ರಚಿಸಿ ವಿಚಾರಣೆ ನಡೆಸಲಾಗುವುದು ಎಂದ ಮುಖ್ಯ ನ್ಯಾ. ಚಂದ್ರಚೂಡ್, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಸಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಈ ಹಿಂದೆಯೆ ಮಧ್ಯಂತರ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಮಾ.9 ರಂದು ನಡೆಯುವ ಪರೀಕ್ಷೆಗಳಿಗೆ ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ವಿದ್ಯಾರ್ಥಿನಿಯರು ಕೇವಲ ಶಿರವಸ್ತ್ರ ಧರಿಸಿಕೊಂಡು ಹೋಗಲಿಚ್ಚಿಸುತ್ತಿದ್ದಾರೆ. ಅದಕ್ಕೂ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ ಹಲವಾರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಬಗ್ಗೆ ಶೀಘ್ರ ವಿಚಾರಣೆ ನಡೆಸಬೇಕೆಂದು ಅರ್ಜಿದಾರರ ಪರ ವಕೀಲ ಶದನ್ ಫರಸತ್ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಮು.ನ್ಯಾಯಮೂರ್ತಿ ತಿಳಿಸಿದ್ದಾರೆ.
ಕಳೆದ ವರ್ಷ ಅ.13 ರಂದು ಮಧ್ಯಂತರ ತೀರ್ಪು ನೀಡಿದ ಕೋರ್ಟ್, ಈ ವಿಚಾರಣೆಗಾಗಿ ಪ್ರತ್ಯೇಕ ಪೀಠ ರಚಿಸುವುದಾಗಿ ತಿಳಿಸಿತ್ತು.