ರಾಜ್ಯದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ

Scholorship--01

ಬೆಂಗಳೂರು, ಡಿ.7- ರಾಜ್ಯದ ಪರಿಶಿಷ್ಟ ಪಂಗಡದ (ಎಸ್‍ಟಿ) ವಿದ್ಯಾರ್ಥಿಗಳಿಗೆ 11ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣಕ್ಕೆ ನೆರವಾಗಲು ಕರ್ನಾಟಕ ಸರ್ಕಾರ ಸ್ಕಾಲರ್‍ಶಿಪ್ (ವಿದ್ಯಾರ್ಥಿ ವೇತನ) ನೀಡುತ್ತಿದೆ. ಆರ್ಥಿಕ ತೊಂದರೆಯಿಂದ ಈ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಸೌಲಭ್ಯ ಕಲ್ಪಿಸುತ್ತಿದೆ.

ಅರ್ಹತೆ : ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಪರಿಶಿಷ್ಟ ಪಂಗಡಕ್ಕೆ(ಎಸ್‍ಟಿ) ಸೇರಿದವರಾಗಿರಬೇಕು. ಮಾನ್ಯತೆ ಪಡೆದ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಮೆಟ್ರಿಕ್ ನಂತರದ ಅಥವಾ ಪೋಸ್ಟ್ ಸೆಕೆಂಡರಿ ಮಟ್ಟದಿಂದ ಸ್ನಾತಕೋತ್ತರ, ಸಂಶೋಧನಾ ಪದವಿ ಶಿಕ್ಷಣ ಪಡೆಯುವವರಾಗಿರಬೇಕು.

# ಶುಲ್ಕ ಮತ್ತು ನಗದು ಪುರಸ್ಕಾರ :
ನೋಂದಣಿ ಶುಲ್ಕ, ಗ್ರಂಥಾಲಯ ಶುಲ್ಕ, ವೈದ್ಯಕೀಯ ಪರೀಕ್ಷಾ ಶುಲ್ಕ, ಇತರ ಶುಲ್ಕಗಳು ಸೇರಿ ವರ್ಷಕ್ಕೆ 1,600 ರೂ.ಗಳನ್ನು ಸರ್ಕಾರವು ಶೈಕ್ಷಣಿಕ ವೆಚ್ಚವಾಗಿ ನೀಡುತ್ತದೆ. ಸಂಶೋಧನಾ ವಿದ್ವಾಂಸರಿಗಾಗಿ ಮಹಾ ಪ್ರಬಂಧ ಮಂಡನೆ ಮತ್ತು ಮುದ್ರಣ ಶುಲ್ಕವಾಗಿ 1,600 ರೂ.ಗಳನ್ನು ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಗಾಗಿ ಹೆಚ್ಚುವರಿ ವೆಚ್ಚವಾಗಿ ಮಾಸಿಕ 1,200 ರೂ.ಗಳು ಪಾವತಿಸಲಾಗುತ್ತದೆ. ಅಲ್ಲದೆ, ಮಾಸಿಕ 1,200 ರೂ.ಗಳು ಮತ್ತು ಮಾಸಿಕ 550 ರೂ.ಗಳನ್ನು ಅನುಕ್ರಮವಾಗಿ ಹಾಸ್ಟೆಲ್ ಮತ್ತು ಶೈಕ್ಷಣಿಕ ವೆಚ್ಚಕ್ಕಾಗಿ ಪಾವತಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31ನೇ ಡಿಸೆಂಬರ್, 2018.
ಅರ್ಜಿ ಸಲ್ಲಕೆ : ಅರ್ಜಿಯನ್ನು ಆನ್‍ಲೈನ್‍ನಿಂದ ಮಾತ್ರವೇ ಸಲ್ಲಿಸತಕ್ಕದ್ದು.
ಹೆಚ್ಚಿನ ವಿವರಗಳಿಗೆ : http://www.b4s.in/ees/PMS57

(ಈ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ )

Courtesy: www.buddy4study.com

Sri Raghav

Admin