ಉತ್ತರ ಪ್ರದೇಶ : ವಿದ್ಯಾರ್ಥಿವೇತನದಲ್ಲಿ ಭಾರೀ ಭ್ರಷ್ಟಾಚಾರ ಬಯಲು

Social Share

ನವದೆಹಲಿ,ಫೆ.18- ಆರ್ಥಿಕವಾಗಿ ದುರ್ಬಲ, ಅಲ್ಪಸಂಖ್ಯಾತ ವರ್ಗ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಮೀಸಲಾದ 75 ಕೋಟಿ ರೂಪಾಯಿ ವಿದ್ಯಾರ್ಥಿವೇತನ ನಿಧಿಯನ್ನು ಉತ್ತರ ಪ್ರದೇಶದ ಕೆಲವು ಶಿಕ್ಷಣ ಸಂಸ್ಥೆಗಳು ದುರುಪಯೋಗಪಡಿಸಿಕೊಂಡಿವೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಪತ್ತೆ ಹಚ್ಚಿದೆ.

ಮೆಟ್ರಿಕ್ಯುಲೇಷನ್ ನಂತರದ ವಿದ್ಯಾರ್ಥಿವೇತನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಫೆಬ್ರವರಿ 16 ರಂದು ಉತ್ತರ ಪ್ರದೇಶದ ಆರು ಜಿಲ್ಲೆಗಳ 22 ಸ್ಥಳಗಳಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು.

ರಾಜ್ಯ ಜಾಗೃತದಳ ವಿಚಾರಣೆ ನಡೆಸಿದ ವಿದ್ಯಾರ್ಥಿ ವೇತನ ದುರುಪಯೋಗವನ್ನು ಪತ್ತೆ ಹಚ್ಚಿಸಿದ್ದು, 2017ರಲ್ಲಿ ದೂರು ದಾಖಲಿಸಿತ್ತು. ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರುಹುಗಳು ಪತ್ತೆಯಾಗಿದ್ದರಿಂದ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ.

ಉತ್ತರ ಪ್ರದೇಶದ ಲಕ್ನೋದ ಎಸ್.ಎಸ್.ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಹೈಜಿಯಾ ಕಾಲೇಜ್ ಆಫ್ ಫಾರ್ಮಸಿ, ಹೈಜಿಯಾ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ, ಲಕ್ನೋ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಎಜುಕೇಶನ್, ಫರೂಕಾಬಾದ್‍ನ ಡಾ ಓಂ ಪ್ರಕಾಶ್ ಗುಪ್ತಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ಹರ್ದೋಯಿ ಭಾಗದ ಡಾ.ಭೀಮ್ ರಾವ್ ಅಂಬೇಡ್ಕರ್ ಫೌಂಡೇಶನ್, ಜೀವಿಕಾ ಕಾಲೇಜ್ ಆಫ್ ಫಾರ್ಮಸಿ, ಆರ್.ಪಿ. ಇಂಟರ್ ಕಾಲೇಜ್, ಜ್ಞಾನವತಿ ಇಂಟರ್ ಕಾಲೇಜ್, ಜಗದೀಶ್ ಪ್ರಸಾದ್ ವರ್ಮಾ ಉಚಾತರ್ ಮಾಧ್ಯಮಿಕ ವಿದ್ಯಾಲಯ ಸಂಸ್ಥೆಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

“ಸಾಹಿಲ್ ಮತ್ತು ನಿಕ್ಕಿ ಯಾದವ್ ದಂಪತಿಗಳಾಗಿದ್ದರು”

ಈ ಕಾಲೇಜುಗಳ ಪೈಕಿ ಹೈಜಿಯಾ ಗುಂಪು ಕಾಲೇಜುಗಳನ್ನು ಐ.ಎಚ್.ಜಾಫ್ರಿ, ಒ.ಪಿ.ಗುಪ್ತಾ ಇನ್ಸ್ಟಿಟ್ಯೂಟ್ ಕಾಲೇಜುಗಳನ್ನು ಶಿವಂ ಗುಪ್ತಾ, ಎಸ್.ಎಸ್.ಇನ್ಸ್ಟಿಟ್ಯೂಟ್ ಅನ್ನು ಪ್ರವೀಣ್ ಕುಮಾರ್ ಚೌಹಾನ್, ಜಿವಿಕಾ ಕಾಲೇಜನ್ನು ರಾಮ್ ಗುಪ್ತಾ ಅವರು ನಿಯಂತ್ರಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಸಂಸ್ಥೆಗಳು ಅನರ್ಹ ಅಭ್ಯರ್ಥಿಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ವಿದ್ಯಾರ್ಥಿವೇತನವನ್ನು ಪಡೆದುಕೊಂಡು, ದುರುಪಯೋಗಪಡಿಸಿಕೊಂಡಿವೆ ಎಂದು ಇಡಿ ಆರೋಪಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ ಸಮುದಾಯದ ವಿಕಲಚೇತನರು, ಆರ್ಥಿಕವಾಗಿ ದುರ್ಬಲವಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿವೇತನವನ್ನು ಒದಗಿಸುತ್ತವೆ. ಹಣ ದುರುಪಯೋಗ ದುರ್ಬಲ ವರ್ಗಗಳ ಮೇಲೆ ಭಾರಿ ಸಾಮಾಜಿಕ ಪರಿಣಾಮ ಬೀರುತ್ತದೆ ಎಂದು ಇಡಿ ತಿಳಿಸಿದೆ.

ಫಿನೋ ಪೆಮೆಂಟ್ ಬ್ಯಾಂಕ್, ಮಧ್ಯವರ್ತಿಗಳಾದ ಮೊಹಮ್ಮದ್ ಸಾಹಿಲ್ ಅಜೀಜ್, ಅಮಿತ್ ಕುಮಾರ್ ಮೌರ್ಯ, ತನ್ವೀರ್ ಅಹ್ಮದ್, ಜಿತೇಂದ್ರ ಸಿಂಗ್ ಮತ್ತು ರವಿ ಪ್ರಕಾಶ್ ಗುಪ್ತಾ ಸೇರಿದಂತೆ ಹಲವರ ಸಕ್ರಿಯ ನೆರವಿನೊಂದಿಗೆ ಹಣ ದುರುಪಯೋಗ ಮಾಡಲಾಗಿದೆ. ಬ್ಯಾಂಕ್‍ನಲ್ಲಿ ಖಾತೆ ತೆರೆಯಲು ಸುಲಭ ಮಾರ್ಗವನ್ನು ಅಳವಡಿಸಿಕೊಂಡು ಹಗರಣ ನಡೆಸಲಾಗಿದೆ.

ಆರೋಪಿಗಳು ಎಲ್ಲಾ ಖಾತೆಗಳನ್ನು ಫಿನೋ ಬ್ಯಾಂಕ್‍ನ ಲಕ್ನೋ ಮತ್ತು ಮುಂಬೈ ಶಾಖೆಗಳಲ್ಲಿ ತೆರೆದಿದ್ದಾರೆ. ಬ್ಯಾಂಕ್‍ನಿಂದ ವಿದ್ಯುನ್ಮಾನ ವರ್ಗಾವಣೆ ಮತ್ತು ವಿದ್ಯಾರ್ಥಿವೇತನ ನಿಧಿಗಳ ನಗದು ಹಿಂಪಡೆಯುವಿಕೆ ಎರಡು ಸೇವೆಗಳನ್ನು ಪಡೆದಿದ್ದಾರೆ. ಏಳರಿಂದ 12 ವರ್ಷದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಡೆಯಲು 45 ವರ್ಷಕ್ಕೂ ಮೇಲ್ಪಟ್ಟ ಹಿರಿಯರ ಖಾತೆಗಳನ್ನು ಬಳಕೆ ಮಾಡಲಾಗಿದೆ. ಬೇರೆ ಬೇರೆ ವ್ಯಕ್ತಿಗಳ ದಾಖಲೆಗಳ ನೆರವಿನಲ್ಲಿ ಸುಮಾರು 3,000 ಖಾತೆಗಳನ್ನು ತೆರೆಯಲಾಗಿದೆ.

ಬಹುತೇಕ ಖಾತೆಗಳು ಅಮಾಯಕ ಗ್ರಾಮೀಣರ ಹೆಸರಿಲ್ಲಿ ಸ್ಥಾಪಿಸಲಾಗಿದೆ. ಈ ಬಗ್ಗೆ ಫಲಾನುಭವಿ ವಿದ್ಯಾರ್ಥಿಗಳಿಗೆ ಮಾಹಿತಿಯೇ ಇಲ್ಲ. ವಿದ್ಯಾರ್ಥಿ ವೇತನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಬೇಕು ಎಂಬ ನಿಯಮವಿದ್ದರೂ ಆರೋಪಿಗಳು, ಅದನ್ನು ಉಲ್ಲಂಘನೆ ಮಾಡಿ ಫಿನೋ ಬ್ಯಾಂಕ್‍ನ ಮಧ್ಯವರ್ತಿಗಳ ಖಾತೆಗಳಿಗೆ ರವಾನೆ ಮಾಡಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ನಗದುರಹಿತ ವಹಿವಾಟು ನಡೆಸಿ ದಾಖಲೆ ಬರೆದ ಭಾರತ

ಶಿಕ್ಷಣ ಸಂಸ್ಥೆಗಳು ಬ್ಯಾಂಕ್‍ಗಳಿಗೆ ಸಹಿ ಮಾಡಿದ ಮುಂಗಡ ಚೆಕ್‍ಗಳನ್ನು ಸಲ್ಲಿಸಿ, ನಗದು ವರ್ಗಾವಣೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಶಾಲಾ ಕಾಲೇಜು ಆವರಣದಲ್ಲಿರುವ ಎಟಿಎಂಗಳಲ್ಲಿ ನಗದನ್ನು ಡ್ರಾ ಮಾಡಲಾಗಿದೆ. ಮತ್ತೂ ಆಘಾತಕಾರಿ ಎಂದರೆ ಫಿನೋ ಪೆಮೆಂಟ್ ಬ್ಯಾಂಕ್‍ನ ಅಕಾರಿ ಮತ್ತು ಸಿಬ್ಬಂದಿಗಳ ಖಾತೆಗಳ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್ ಅನ್ನು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಬಳಕೆ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ.

ಬಾರೀ ಪ್ರಮಾಣದ ಈ ವಂಚನೆಯ ತನಿಖೆ ವೇಳೆ ಸಾವಿರಾರು ಸಿಮ್ ಕಾರ್ಡ್‍ಗಳು, ನಕಲಿ ದಾಖಲೆಗಳನ್ನು ಅಕಾರಿಗಳು ವಶ ಪಡಿಸಿಕೊಂಡಿರುವುದಾಗಿ ಇಡಿ ತಿಳಿಸಿದೆ.

Scholarship, scam, ED, searches, 6 districts, Uttar Pradesh,

Articles You Might Like

Share This Article