ಬೆಂಗಳೂರು, ಜ. 31- ನಗರದ ಸಿಎಂಸಿಎ ಸಂಸ್ಥೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ನಮ್ಮ ಬೆಂಗಳೂರು ಸಂಚಾರಿ ಪೊಲೀಸ್ ಉತ್ಸವದ 15ನೇ ವರ್ಷದ ಅಂಗವಾಗಿ ಶಾಲಾ ಮಕ್ಕಳು ಸಂಚಾರಿ ಪೊಲೀಸರಿಗೆ ಗುಲಾಬಿ ಹೂ ನೀಡಿ ಧನ್ಯವಾದ ಸಲ್ಲಿಸಿದರು. ಸಂಚಾರಿ ಪೊಲೀಸ್ ಉತ್ಸವವು ಮಕ್ಕಳಲ್ಲಿ ಕೃತಜ್ಞತೆಯ ಸಂಸ್ಕøತಿ ಮತ್ತು ಅನುಭೂತಿಯನ್ನು ಬೆಳೆಸಲು ಸಿಎಂಸಿಎ ಪ್ರಾರಂಭಿಸಿರುವ ಒಂದು ಕಾರ್ಯಕ್ರಮವಾಗಿದೆ.
ಅನೇಕ ಸಂದರ್ಭಗಳಲ್ಲಿ ಸಮುದಾಯಕ್ಕಾಗಿ ಸಂಚಾರಿ ಪೊಲೀಸರು ಮಾಡುವ ಬಹು ಮುಖ್ಯ ಸೇವೆಗಳು ಗುರುತಿಸಲ್ಪಡದೇ ಹೋಗುತ್ತವೆ. ಹಾಗಾಗಿ ಸಂಚಾರಿ ಪೊಲೀಸರೊಂದಿಗೆ ಮಾತುಕತೆ ನಡೆಸುವ ಮೂಲಕ ನಮ್ಮ ಸಂಚಾರಿ ಪೊಲೀಸರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮಕ್ಕಳಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಹಿಂದೂ ಸೆಂಟ್ ಮಾಕ್ರ್ಸ್ ರಸ್ತೆಯ ಸಂಚಾರಿ ಪೊಲೀಸ್ ಪಾರ್ಕ್ನಲ್ಲಿ ಸಿಎಂಸಿಎ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮವು ಸಂಚಾರಿ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ. ಎಂ. ಅಬ್ದುಲ್ ಸಲೀಂ ಅವರ ಉಪಸ್ಥಿತಿಯಲ್ಲಿ ನಡೆಯಿತು. ಬೆಂಗಳೂರಿನ ಶಾಲೆಗಳ ಸುಮಾರು 50 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಗರಗಳಲ್ಲಿ ನಮ್ಮ ಸಂಚಾರಿ ಪೊಲೀಸರ ಮಹತ್ವ ಹಾಗೂ ಕಾನೂನು ಮತ್ತು ನಿಯಮಗಳ ಮೌಲ್ಯವನ್ನು ತಿಳಿಸಲು ವಿದ್ಯಾರ್ಥಿಗಳೊಂದಿಗೆ ಜಾಗೃತಿ ಅಭಿಯಾನ ನಡೆಸಲಾಯಿತು.
ಈ ಕಾರ್ಯಕ್ರಮದ ಉದ್ದೇಶವನ್ನರಿತ ವಿದ್ಯಾರ್ಥಿಗಳು ಜನವರಿ ತಿಂಗಳಿನಾದ್ಯಂತ ವಿವಿಧ ಸಂಚಾರಿ ಪೊಲೀಸ್ ಠಾಣೆಗಳು ಹಾಗೂ ಮಾನವ ಸಹಿತ ಜಂಕ್ಷನ್ಗಳಿಗೆ ಭೇಟಿ ನೀಡಿ ಸಂಚಾರಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಹಾಗೂ 50ಕ್ಕೂ ಹೆಚ್ಚು ಸಂಚಾರಿ ಪೊಲೀಸ್ ಕಾನ್ಸ್ಸ್ಟೇಬಲ್ಗಳು ಉಪಸ್ಥಿತರಿದ್ದರು.
#SchoolChildren, #thanked, #trafficpolice,