“ಶಿವಮೊಗ್ಗದಲ್ಲಿ ಶಾಲೆ-ಕಾಲೇಜು ಆರಂಭ ವಿಚಾರ ಡಿಸಿ ನಿರ್ಧಾರಕ್ಕೆ ಬಿಟ್ಟಿದ್ದು”

Social Share

ಬೆಂಗಳೂರು,ಫೆ.22- ಶಿವಮೊಗ್ಗದಲ್ಲಿ ಶಾಲಾ- ಕಾಲೇಜು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಹಿಜಾಬ್‍ಗೊಂದಲ-ಶಾಲಾ-ಕಾಲೇಜು ನಡೆಯುತ್ತಿರುವ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲಾ-ಕಾಲೇಜು ತೆರೆಯುತ್ತೇವೆ. ಇಂದು ಗಂಭೀರ ಪರಿಸ್ಥಿತಿ ಇದ್ದ ಕಾರಣ ಒಂದು ದಿನ ರಜೆ ನೀಡಲಾಗಿದೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ನೀಡಿರುವ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ವಿನಾಃಕಾರಣ ರಾಷ್ಟ್ರಧ್ವಜದ ವಿವಾದ ಪ್ರಸ್ತಾಪಿಸಿದ್ದಾರೆ.
ಬೇರೆ ಯಾರಾದರೂ ರಾಷ್ಟ್ರೀಯ ವಾದಿಗಳು ದೇಶಭಕ್ತಿ ಪಾಠ ಹೇಳಿಕೊಟ್ಟರೆ ಕಲಿಯಬಹುದಿತ್ತು. ಆದರೆ, ಕಾಂಗ್ರೆಸ್‍ನವರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯಬೇಕಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದ ವರ್ಷದ ಅವ ನೋಡಿದರೆ ಇಂತಹ ಕೃತ್ಯ ಎಸಗಿದವರ ಮೇಲಿನ ಕೇಸು ವಾಪಸ್ ಪಡೆದಿದ್ದಾರೆ. ಹಾಗೆ ವಾಪಸ್ ಪಡೆಯದಿದ್ದರೆ ಅವರಿಗೂ ಭಯವಿರುತ್ತಿತ್ತು.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶವಿದೆ. ಅದನ್ನು ಕೆಲವರು ವಿರೋಸಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ ಮಾತನಾಡುತ್ತಿದೆ ಎಂದರು.
ಹಿಜಾಬ್ ಕಾರಣಕ್ಕಾಗಿ ಪರೀಕ್ಷೆಗೆ ಗೈರು ಹಾಜರಾದರೆ ಅವರಿಗೆ ಬೇರೆ ಆಯ್ಕೆಗಳಿಲ್ಲ. ಪರೀಕ್ಷೆ ಬರೆಯಬೇಕೆಂದರೆ ಹಿಜಾಬ್ ತೆಗೆದು ಬರೆಯಬೇಕು. ಒಂದು ವೇಳೆ ಬೇರೆ ಕಾರಣಕ್ಕೂ ಪರೀಕ್ಷೆಗೆ ತಪ್ಪಿಸಿಕೊಂಡವರಿಗೆ ಅವರಿಗೂ ಬೇರೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

Articles You Might Like

Share This Article