ಶಾಲಾ-ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಯೋಗ ಆರಂಭ

Spread the love

ಬೆಂಗಳೂರು,ಮೇ29- ಮುಂದಿನ ವರ್ಷದಿಂದ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಯೋಗ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾಕಾಲೇಜುಗಳಲ್ಲಿ ಯೋಗ ಆರಂಭಿಸಲು ಬೇಕಾದ ಸಿದ್ದತೆ ಮಾಡಿಕೊಳ್ಳಬೇಕಿದೆ. ಈ ಸಂಬಂಧ ಯೋಗ ಪರಿಣಿತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ಮಕ್ಕಳು ಒತ್ತಡದಲ್ಲಿದ್ದಾರೆ. ಅದರಲ್ಲೂ ಕೋವಿಡ್ ನಂತರ ಹೊಸ ರೀತಿಯ ಒತ್ತಡಗಳು ಅವರ ಮೇಲೆ ಉಂಟಾಗಿದೆ. ಯಾವುದೇ ಒತ್ತಡವಿಲ್ಲದೆ ಬಾಲ್ಯವನ್ನು ಸಂತೋಷದಿಂದ ಕಳೆಯಬೇಕು. ಯೋಗ ಮಕ್ಕಳ ಆರೋಗ್ಯಕ್ಕೂ ಅನುಕೂಲಕರವಾಗಿದೆ ಎಂದು ಹೇಳಿದರು.

ಯೋಗಾ ದಿನಾಚರಣೆಯಂದು ಮೈಸೂರಿಗೆ ಪ್ರಧಾನಿ ನರೇಂದ್ರಮೋದಿ ಆಗಮಿಸುವ ಕಾರ್ಯಕ್ರಮವಿದೆ. ಅವರು ರಾಜ್ಯಕ್ಕೆ ಬರುವುದೇ ವಿಶೇಷ. ಅಂದು ದೊಡ್ಡ ಪ್ರಮಾಣದಲ್ಲಿ ಶಾಲಾಕಾಲೇಜು, ಸಂಘಸಂಸ್ಥೆಗಳಿಂದ ಯೋಗಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ರಾಜ್ಯದಲ್ಲಿ ಯೋಗದ ಬೆಳವಣಿಗೆಗೆ ಏನೇನು ಕ್ರಮ ಕೈಗೊಂಡಿದ್ದೇವೆ. ಯೋಗಾಕ್ಕೆ ರಾಜ್ಯ ಏನು ಕೊಡುಗೆ ನೀಡಿದೆ ಎಂಬುದನ್ನು ಪ್ರಧಾನಿ ಸಮ್ಮುಖದಲ್ಲಿ ಆರೋಗ್ಯ ಎಂಬ ಥೀಮ್‍ನಡಿಯಲ್ಲಿ ಅನಾವರಣ ಮಾಡಲಾಗುವುದು ಎಂದರು.

Facebook Comments