ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ

Social Share

ಬೆಂಗಳೂರು,ನ.14- ಮೈದಾನದಲ್ಲಿ ಶಾಲೆ ಕಟ್ಟಲು ಮುಂದಾಗಿದ್ದ ಬಿಬಿಎಂಪಿ ಧೋರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜರಾಜೇಶ್ವರಿನಗರದಲ್ಲಿರುವ ಕೆಂಪೇಗೌಡ ಕ್ರೀಡಾಂಗಣದಲ್ಲಿ ಬಿಬಿಎಂಪಿ ಗುಣಮಟ್ಟದ ಶಾಲೆ ನಿರ್ಮಾಣ ಮಾಡಲು ತೀರ್ಮಾನಿಸಿತ್ತು.

ಆದರೆ, ಈ ಶಾಲೆ ನಿರ್ಮಾಣಕ್ಕೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಹಾದಿ ಹಿಡಿದಿರುವುದರಿಂದ ಬಿಬಿಎಂಪಿ ಆಡಳಿತ ವರ್ಗಕ್ಕೆ ಹೊಸ ತಲೆನೋವು ಆರಂಭವಾಗಿದೆ. ಆರ್ ಆರ್ ನಗರ ವಲಯದ ಬಿಇಎಂಎಲ್ 5 ಹಂತದಲ್ಲಿ ಇರುವ ಕೆಂಪೇಗೌಡ ಕ್ರೀಡಾಂಗಣದಲ್ಲಿ ಕಳೆದ 1992 ರಿಂದ ಸ್ಥಳೀಯ ಮಕ್ಕಳು ಆಟವಾಡುತ್ತಿದ್ದಾರೆ.

ಸುತ್ತಮುತ್ತಲಿನ ನಿವಾಸಿಗರ ಮಕ್ಕಳಿಗೆ ಆಡಲು ಇರುವ ಗ್ರೌಂಡ್ ಇದೊಂದೆ ಹೀಗಾಗಿ ಮೈದಾನವನ್ನು ಹಾಗೆ ಉಳಿಸಿಕೊಳ್ಳಬೇಕು ಎಂಬುದು ಸ್ಥಳೀಯರ ವಾದವಾಗಿದೆ.

ಹಿತಶತ್ರುಗಳ ಕಾಟದಿಂದ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸಿದ್ದರಾಮಯ್ಯ

ಮೈದಾನದಲ್ಲಿ ಶಾಲೆ ನಿರ್ಮಿಸಿದರೆ, ಮಕ್ಕಳ ಫಿಸಿಕಲ್ ಆಕ್ಟಿವಿಟಿಸ್‍ಗೆ ಅಡ್ಡಿಯಾಗುವುದರಿಂದ
ಮೈದಾನ ಬಿಟ್ಟು ಬೇರೆ ಕಡೆ ಶಾಲೆ ನಿರ್ಮಿಸುವಂತೆ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಸ್ಥಳೀಯರು ಪ್ರತಿಭಟನೆ ಮಾಡುತ್ತಿರುವ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

ಸ್ಥಳೀಯರ ವಿರೋಧದಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ನಾಳೆ ಸ್ಥಳೀಯರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

Articles You Might Like

Share This Article