ತಜ್ಞರ ಅಭಿಪ್ರಾಯ ಪಡೆದು ಶಾಲೆ ಆರಂಭ ಕುರಿತು ನಿರ್ಧಾರ : ಸಚಿವ ಬಿ.ಸಿ.ನಾಗೇಶ್

Social Share

ಬೆಂಗಳೂರು, ಜ.27- ಒಂದರಿಂದ ಒಂಬತ್ತನೆ ತರಗತಿಗಳವರೆಗಿನ ಭೌತಿಕ ತರಗತಿಗಳನ್ನು ನಗರದಲ್ಲಿ ಪುನರಾರಂಭಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಜನವರಿ ಅಂತ್ಯದವರೆಗೂ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿರಲಿವೆ. ಫೆಬ್ರವರಿಯಿಂದ ತರಗತಿಗಳನ್ನು ಮರು ಆರಂಭಿಸುವ ಬಗ್ಗೆ ಸಿದ್ಧತೆ ನಡೆಸಲಾಗಿದೆ. ಆದರೆ, ಶಾಲೆ ಆರಂಭವಾಗುವುದು ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಆಧರಿಸಿದೆ.
1 ರಿಂದ 9ರ ವರೆಗಿನ ಭೌತಿಕ ತರಗತಿ ಆರಂಭಿಸಲು ಸಾಧ್ಯವಾಗದಿದ್ದರೆ 5 ರಿಂದ 9ನೆ ತರಗತಿಯನ್ನಾದರೂ ಪ್ರಾರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಒಲವು ತಳೆದಿದೆ. ಪರಿಣಿತ ತಜ್ಞರ ಅಭಿಪ್ರಾಯ ಪಡೆದು ಆನಂತರ ಶಾಲೆ ಪುನರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮುಚ್ಚಲಾಗಿರುವ 1 ರಿಂದ 9ನೆ ತರಗತಿ ಪುನರಾರಂಭದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ನೀಡುವ ಅಭಿಪ್ರಾಯದ ಮೇಲೆ ನಗರದಲ್ಲಿ ಶಾಲೆ ಮರು ಆರಂಭದ ನಿರ್ಧಾರ ಅವಲಂಬಿತವಾಗಿದೆ.

Articles You Might Like

Share This Article