ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ನ.14- ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚಿದರೆ ವಿರೋಧ ಪಕ್ಷದವರಿಗೆ ಏನು ಸಮಸ್ಯೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳ ನಡೆಗೆ ಆಕ್ಷೇಪಿಸಿದರು.

ವಿಧಾನಸೌಧದಲ್ಲಿ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರತಿಪಕ್ಷಗಳು ಪ್ರತಿಯೊಂದರಲ್ಲೂ ವಿರೋಧ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟಕ್ಕೂ ಕೇಸರಿ ಬಣ್ಣ ಕಂಡರೆ ಇವರಿಗೆ ಆಗುವುದೇ ಇಲ್ಲವೇ. ಕೇಸರಿ ಬಣ್ಣ ನಮ್ಮ ಭಾರತದ ಧ್ವಜದಲ್ಲೇ ಇದೆ. ಕೇಸರಿ ಬಣ್ಣ ಕಂಡರೆ ಯಾಕೆ ಇವರಿಗೆ ಅಷ್ಟು ಲಕ್ಷೆ ಎಂದು ಪ್ರಶ್ನಿಸಿದರು. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆ ಮಾಡುತ್ತಿದ್ದೇವೆ. ಅವರು ತೊಡವಂತದ್ದೆಲ್ಲ ಕೇಸರಿ. ವಿವೇಕ ಅಂದರೆ ಜ್ಞಾನ ಎಂದು ಕಲಿಬೇಕು ವಿನಹ ರಾಜಕಾರಣ ಮಾಡುವುದು ಸರಿಯಲ್ಲ ಎಂದ ಆಕ್ಷೇಪಿಸಿದರು.

ನೆಹರೂ ಕಾರ್ಯಗಳನ್ನು ಶ್ಲಾಘಿಸಿದ ಸಿಎಂ ಬೊಮ್ಮಾಯಿ

ಶಾಲಾ ಕೊಠಡಿಗಳಿಗೆ ಹೆಚ್ಚುವುದಾದರೆ ಮೂರು ಬಣ್ಣ ಹಚ್ಚಬೇಕು ಎಂಬ ಪ್ರತಿಪಕ್ಷಗಳ ವಿಚಾರವಾಗಿ ಮುಖ್ಯಮಂತ್ರಿಗಳು ಏನನ್ನೂ ಪ್ರತಿಕ್ರಿಯೆ ನೀಡಲಿಲ್ಲ. ಮಕ್ಕಳನ್ನ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡುತ್ತಿದ್ದ ಜವಹರಲಾಲ್ ನೆಹರು ಜನ್ಮ ದಿನದಂದು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದೇವೆ.

ಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮ ವಲಸೆ ತಡೆಗೆ ವ್ಯಾಪಕ ಕ್ರಮ : ಗೃಹ ಸಚಿವಾಲಯ

ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದವರು. ಭಾರತದ ಮೊದಲ ಪ್ರಧಾನಿಯಾಗಿದ್ದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನೆಡೆಸಿದವರು ಎಂದು ಸ್ಮರಿಸಿದರು. ಎಲ್ಲದರಲ್ಲೂ ರಾಜಕಾರಣ ಮಾಡುವಂತದ್ದು ಬಹಳ ಕೆಳ ಹಂತಕ್ಕೆ ಹೋಗುತ್ತಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು.

ಸಂಗೊಳ್ಳಿ ರಾಯಣ್ಣ ಸಮಾಧಿಗೆ ತರಳಬಾಳು ಶ್ರೀಗಳಿಂದ ಗೌರವ ಪ್ರಾರ್ಥನೆ

ಈ ಸಂದರ್ಭದಲ್ಲಿ ಸಚಿವ ಹಾಲಪ್ಪ ಆಚಾರ್,ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತಿರಿದ್ದರು.

Articles You Might Like

Share This Article