ಶಾಲಾ ವಾಹನ ಪಲ್ಟಿ, ತಪ್ಪಿದ ಅನಾಹುತ

busಗದಗ, ನ.27- ಸ್ಟೇರಿಂಗ್ ಕಟ್ಟಾಗಿ ಶಾಲಾ ವಾಹನವೊಂದು ಪಲ್ಟಿ ಹೊಡೆದು, ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿರುವ ಘಟನೆ ತಾಲ್ಲೂಕಿನ ಕಲ್ಲೂರ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ತಾಲ್ಲೂಕಿನ ಹೊಸಹಳ್ಳಿಯ ಬೂದಿಶ್ವರ ವಿದ್ಯಾಪೀಠಕ್ಕೆ ಸೇರಿದ ಶಾಲಾ ಬಸ್ ಎಂದಿನಂತೆ ಕಲ್ಲೂರು, ಚಿಂಚಲಿ, ಅಂತೂರ ಬೆಂತೂರ ಗ್ರಾಮದ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸ್ಟೇರಿಂಗ್ ಕಟ್ಟಾಗಿದೆ. ತಕ್ಷಣ ಎಚ್ಚೆತ್ತ ಚಾಲಕ ರಸ್ತೆ ಬದಿಗೆ ವಾಹನ ಚಲಾಯಿಸಿದ್ದರಿಂದ ಬಸ್ ಪಲ್ಟಿಯಾಗಿದೆ.
ಬಸ್‍ನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.