ವರುಣನ ಅಬ್ಬರಕ್ಕೆ ತಮಿಳುನಾಡು ತತ್ತರ, ಶಾಲಾ-ಕಾಲೇಜು ರಜೆ

Social Share

ಚೆನ್ನೈ, ನ.12-ತಮಿಳುನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರು ಹೈರಾಣಾಗಿ ಹೋಗಿದ್ದು, ಮಳೆಯ ಆರ್ಭಟಕ್ಕೆ ತಮಿಳುನಾಡು ತಲ್ಲಣಗೊಂಡಿದೆ. ರಸ್ತೆಯೆಲ್ಲ ಹೊಳೆಗಳಂತಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಎತ್ತ ನೋಡಿದರೂ ನೀರು ನಿಂತಿದೆ. ಮನೆ ಒಳಗೆ ಸೇರಿರುವ ನೀರನ್ನು ಹೊರಹಾಕಲು ಜನ ಹರಸಾಹಸ ಪಡುತ್ತಿದ್ದಾರೆ. ಭಾರೀ ಮಳೆಯ ಆರ್ಭಟಕ್ಕೆ ರಾಜಧಾನಿ ಚೆನ್ನೈ ತತ್ತರಿಸಿಹೋಗಿದೆ.

ಧಾರಾಕಾರ ಮಳೆಗೆ ನಲುಗಿ ಹೋಗಿರುವ ಜನ ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಚೆನ್ನೈ, ತಿರುವಳ್ಳುವರ್, ಅಲ್ಲುಕುರ್ಚಿ, ಸೇಲಂ, ವೆಲ್ಲೂರ್, ತಿರುಪತ್ತೂರ್, ರಾಣಿಪೇಟೆ, ತಿರುವಣ್ಣಾಮುಲೈ ಹಾಗೂ ಪುದುಚೇರಿ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಸೋಮವಾರ ಕಾಂಗ್ರೆಸ್ ಕಾರ್ಯಪಡೆಯೊಂದಿಗೆ ಖರ್ಗೆ ಮೊದಲ ಸಭೆ

ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆಯಿಂದ ತಮಿಳುನಾಡಿನ ಹಲವು ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಹಲವೆಡೆ ಜಿಟಿಜಿಟಿ ಮಳೆಯಿಂದ ಜನರು ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಚಿಪುರಂ, ತಿರುವಳ್ಳುವರ್, ಚಂಗಲ್‍ಪಟ್ಟು, ವೆಲ್ಲೂರು, ಕಡಲೂರ್, ಮೇಲಾಡುತುರೈ, ತಿರುವಾರೂರು, ನಾಗಪಟ್ಟಣಂ, ತಂಜಾವೂರು, ಹರಿಯಲೂರು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ರಜೆ ನೀಡಲಾಗಿದೆ.

ನಡುರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಪೋಟ : 12 ಮಂದಿ ಸಾವು

ಮುಂದಿನ 24 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯ ಕಾರಣ ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾವಿರಾರು ಹೆಕ್ಟೇರ್ ಕೃಷಿಭೂಮಿ ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಟಾವಿನ ಹಂತಕ್ಕೆ ಬಂದು ರೈತರ ಕೈ ಸೇರಬೇಕಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.

ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಶೀತಗಾಳಿ

ಮಳೆಗಾಲದಲ್ಲಿ ನಿದ್ದೆಗೆಡಿಸಿದ್ದ ವರುಣ ಈಗ ಚಳಿಗಾಲದಲ್ಲೂ ತನ್ನ ಆರ್ಭಟ ಮುಂದುವರೆಸಿದ್ದು, ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದಾನೆ.

Articles You Might Like

Share This Article