Saturday, September 23, 2023
Homeಇದೀಗ ಬಂದ ಸುದ್ದಿಇಂದಿನಿಂದ ರಾಜ್ಯಾದ್ಯಂತ ಶಾಲೆಗಳ ಆರಂಭ

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳ ಆರಂಭ

- Advertisement -

ಬೆಂಗಳೂರು, ಮೇ 31- ರಾಜ್ಯದಲ್ಲಿ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳು ಅಕೃತವಾಗಿ ಇಂದಿನಿಂದ ಆರಂಭಗೊಂಡಿದ್ದು, ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಇಂದು ಬೆಳಗ್ಗೆ ಸರ್ಕಾರಿ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಬರಮಾಡಿಕೊಳ್ಳಲಾಗಿದೆ. ಕೆಲವು ಶಾಲೆಗಳನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಶಿಕ್ಷಕರು, ಶಾಲಾ ಆಡಳಿತ ಸಮಿತಿಯ ಮುಖ್ಯಸ್ಥರು, ಸದಸ್ಯರು ಬಾಗಿಲಲ್ಲಿ ನಿಂತು ವಿದ್ಯಾರ್ಥಿ ಗಳನ್ನು ಬರಮಾಡಿಕೊಂಡರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲೆಗಳ ಆರಂಭವನ್ನು ವಿದ್ಯಾರ್ಥಿಗಳು ಸಂಭ್ರಮಿಸುವಂತಹ ವಾತಾವರಣ ಸೃಷ್ಟಿಸಬೇಕು ಎಂದು ಸೂಚಿಸಿದ್ದರು. ಅದರ ಅನುಸಾರ ಶಿಕ್ಷಣ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.

- Advertisement -

ಬೇಸಿಗೆ ರಜೆ ಮುಗಿದು ಇಂದಿನಿಂದ ಆರಂಭಗೊಂಡಿರುವ ಶಾಲೆಗಳಲ್ಲಿ 224 ದಿನ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ. 121 ದಿನ ರಜೆ ಇರಲಿದ್ದು, 26 ದಿನ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯ ಗಳು ನಡೆಯಲಿವೆ.

ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ ಸಾಧ್ಯತೆ

ಪಠ್ಯೇತರ ಚಟುವಟಿಕೆಗಳು, ಸ್ಪರ್ಧೆಗಳ ನಿರ್ವಹಣೆಗೆ 24 ದಿನಗಳನ್ನು ಮೀಸಲಿಡಲಾಗಿದೆ.
ಶಾಲೆಗಳ ಸ್ಥಳೀಯ ರಜೆಗಳಿಗೆ ನಾಲ್ಕು ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆಗೆ 10 ದಿನ ಹೊರತುಪಡಿಸಿದರೆ ಬೋಧನೆ, ಕಲಿಕೆ ಪ್ರಕ್ರಿಯೆಗಳಿಗೆ 180 ದಿನಗಳು ಲಭ್ಯವಾಗಲಿವೆ.

ಮೇ 29ರಿಂದ ಅಕ್ಟೋಬರ್ 7ರ ವರೆಗೂ ಮೊದಲ ಅವ, ಅ.25 ರಿಂದ 2024ರ ಏಪ್ರಿಲ್ 10ರ ವರೆಗೂ ಎರಡನೆ ಅವ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಮಾಡಲಾಗಿದೆ. ಅಕ್ಟೋಬರ್ 8 ರಿಂದ 24ರ ವರೆಗೆ ದಸರಾ ರಜೆ, 2024ರ ಏಪ್ರಿಲ್ 11 ರಿಂದ ಮೇ 28ರ ವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ.

ಶೈಕ್ಷಣಿಕ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

Schools, #reopen, #Karnataka,

- Advertisement -
RELATED ARTICLES
- Advertisment -

Most Popular