ಫೆ.1ರಿಂದ ಬೆಂಗಳೂರಿನಲ್ಲಿ ಶಾಲೆಗಳು ಪುನರಾರಂಭ..?

Social Share

ಬೆಂಗಳೂರು,ಜ.25-ಮುಂದಿನ ವಾರದಿಂದ ನಗರದಲ್ಲಿ ಶಾಲಾ ಕಾಲೇಜುಗಳು ಓಪನ್ ಆಗುವ ಸಾಧ್ಯತೆಗಳಿವೆ. ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಶಾಲೆಗಳನ್ನು ಪುನರಾರಂಭಿಸಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ.
ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ಇದ್ದರೂ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಮತ್ತೆ ಶಾಲೆಗಳನ್ನು ಆಫ್‍ಲೈನ್ ಮೋಡ್‍ನಲ್ಲಿ ಆರಂಭಿಸಲು ತಯಾರಿ ನಡೆಸಲಾಗಿದೆ. ಹೀಗಾಗಿ ಫೆ.1 ರಿಂದ ಐದನೇ ತರಗತಿಯಿಂದ ಒಂಬತ್ತನೆ ತರಗತಿಗಳನ್ನು ಓಪನ್ ಮಾಡಲು ತೀರ್ಮಾನಿಸಲಾಗಿದೆ.
ಮೊದಲ ಹಂತದಲ್ಲಿ 5ರಿಂದ 9 ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಸಾಧಕ ಭಾದಕ ಪರಿಶೀಲಿಸಿ ಫೆ.5ರಿಂದ ಉಳಿದ ತರಗತಿಗಳನ್ನು ಆರಂಭಿಸಲು ತಯಾರಿ ನಡೆಸಲಾಗುತ್ತಿದೆ.
ಈ ಕುರಿತಂತೆ ಈಗಾಗಲೇ ನಗರದ ಎಲ್ಲಾ ಬಿಇಒಗಳಿಗೆ ಶಿಕ್ಷಣ ಸಚಿವ ನಾಗೇಶ್ ಅವರು ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ವಾರದಿಂದ ಶಾಲೆಗಳ ಆರಂಭಕ್ಕೆ ಸಿಎಂ ಅವರ ಸಲಹೆ ಪಡೆದ ನಂತರ ಅಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Articles You Might Like

Share This Article