ಜೊಂಬಿ ವೈರಾಣು: ವಿಶ್ವಕ್ಕೆ ಗಂಡಾಂತರದ ಸೂಚನೆ

Social Share

ಮಾಸ್ಕೌ,ನ.30- ಹೆಪ್ಪುಗಟ್ಟಿದ ಕೆರೆಯ ತಳಭಾಗದಲ್ಲಿ ಸುಮಾರು 48,500 ವರ್ಷಗಳಿಂದ ಬದುಕುಳಿದಿರುವ ಜೊಂಬಿ ವೈರಾಣುವನ್ನು ವಿಜ್ಞಾನಿಗಳು ಪುನರುಜ್ಜೀವನಗೊಳಿಸುವ ಮೂಲಕ ವಿಶ್ವಕ್ಕೆ ಎದುರಾಗಬಹುದಾದ ಗಂಡಾಂತರದ ಮುನ್ಸೂಚನೆ ನೀಡಿದ್ದಾರೆ.

ಜಾಗತಿಕ ಹವಾಮಾನ ಬದಲಾವಣೆಯಿಂದ ಪುರಾತನ ಭೂಮಿಯ ಮೇಲ್ಮೈ ಪದರ ಕರಗುತ್ತಿದ್ದು, ಗರ್ಭದಲ್ಲಿರುವ ಹೊಸ ಸಾಂಕ್ರಾಮಿಕ ಸೋಂಕುಗಳು ಅಪಾಯ ಉಂಟು ಮಾಡುವ ಆತಂಕ ಸೃಷ್ಟಿಯಾಗಿದೆ. ಯೂರೋಪಿಯನ್ ಸಂಶೋಧಕರು ರಷ್ಯಾದ ಸೈಬೀರಿಯಾ ವಲಯದಲ್ಲಿ ಸಂಶೋಧನೆ ನಡೆಸಿ ಹೆಪ್ಪುಗಟ್ಟಿದ ನೆಲದ ಒಳಗೆ 13ಕ್ಕೂ ಹೆಚ್ಚು ರೋಗಕಾರಕ ಸೋಂಕುಗಳನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಅಪಾಯಕಾರಿ ಎಂದು ಭಾವಿಸಲಾದ ಜೊಂಬಿ ವೈರಸ್ ಕೂಡ ಒಂದಾಗಿದೆ.

ವ್ಯಕ್ತಿ ಚಾರಿತ್ರ್ಯಾ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಿ : ಹೈಕಮಾಂಡ್ ಸೂಚನೆ

ಸುಮಾರು 48,500 ವರ್ಷ ಕಳೆದರೂ ಜೊಂಬಿ ವೈರಸ್ ಶೀತಲೀಕರಣ ವಾತಾವರಣದಲ್ಲಿ ಬದುಕುಳಿದಿರುವುದು ಹೊಸ ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಸೋಂಕು ಭೂಮಿಯ ಮೇಲ್ಪದರಕ್ಕೆ ಬಂದ ಬಳಿಕ ಅಥವಾ ಮುಕ್ತ ವಾತಾವರಣಕ್ಕೆ ತೆಗೆದುಕೊಂಡ ನಂತರ ವರ್ತಿಸುವ ಮಾದರಿಗಳ ಬಗ್ಗೆ ಇನ್ನು ಸಂಶೋಧನೆ ನಡೆಯಬೇಕಿದೆ. ಆದರೆ ಮೇಲ್ನೋಟಕ್ಕೆ ಜೊಂಬಿ ವೈರಸ್ ಅಪಾಯಕಾರಿ ಎಂಬ ಚರ್ಚೆಗಳು ನಡೆಯುತ್ತಿವೆ.

ನ್ಯೂಯಾರ್ಕ್ ಫೋಸ್ಟ್ ಪ್ರಕಟಿಸಿರುವ ವರದಿಯ ಪ್ರಕಾರ ಜೊಂಬಿ ವೈರಸ್ ಪ್ರಾಣಿಗಳು, ಮನುಷ್ಯರು ಮತ್ತು ಸಸ್ಯ ಸಂಕುಲಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ. ಆದರೆ ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್‍ನ ಸಂಶೋಧಕರು, ಹೊಸದಾಗಿ ಪತ್ತೆಯಾದ ಸೋಂಕುಗಳಿಂದ ಜೈವಿಕ ಅಪಾಯದ ಪ್ರಮಾಣ ನಗಣ್ಯ ಎಂದು ಪ್ರತಿಪಾದಿಸಿದ್ದಾರೆ.

ಖ್ಯಾತ ಉದ್ಯಮಿ ವಿಕ್ರಮ್ ಕಿರ್ಲೋಸ್ಕರ್ ನಿಧನ

ಸಂಶೋತ ಸೋಂಕುಗಳು ಅಮೀಬಾ ಸೂಕ್ಷ್ಮ ಜೀವಿಗಳನ್ನು ಸಂಪರ್ಕಿಸುವ ಸಾಮಥ್ರ್ಯ ಹೊಂದಿದೆ. ನೀವು ಮನುಷ್ಯರು ಮತ್ತು ಪ್ರಾಣಿ ಸಂಕುಲದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮತ್ತು ವಾಸ್ತವ ಅಂಶಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದಿದ್ದಾರೆ.

ಜಾಗತಿಕ ತಾಪಮಾನದಿಂದ ಭೂಮಿಯ ಮೇಲ್ಪದರ ಕರಗುತ್ತಿದ್ದು, ಕೆಳಹಂತದಲ್ಲಿರುವ ವೈರಾಣು ಹಂತ ಹಂತವಾಗಿ ಹೊರಬರುವ ಸಾಧ್ಯತೆ ಇದೆ ವರದಿ ತಿಳಿಸಿದೆ.

Scientists, Revive, 48500YearOld, ZombieVirus, Buried, Ice,

Articles You Might Like

Share This Article