ಉಮೇಶ್ ಪಾಲ್ ಹತ್ಯೆಗೈದ ಮತ್ತೊಬ್ಬ ಆರೋಪಿಯ ಎನ್‍ಕೌಂಟರ್

Social Share

ಪ್ರಯಾಗ್ ರಾಜ್,ಮಾ.6 – ಇತ್ತೀಚ್ಚೆಗಷ್ಟೆ ನಡೆದ ಉಮೇಶ್ ಪಾಲ್ ಹತ್ಯೆ ಪ್ರಕರಣದ ಅರೋಪಿಯೊಬ್ಬನನ್ನು ಕೆಲದಿನಗಳ ಹಿಂದೆ ಪೊಲೀಸರು ಎನ್‍ಕೌಂಟರ್ ಮಾಡಿದ್ದು, ಇದೀಗ ಮತ್ತೊಬ್ಬ ಆರೋಪಿಯನ್ನು ಇಂದು ಮುಂಜಾನೆ ಎನ್‍ಕೌಂಟರ್ ಮಾಡಿದ್ದಾರೆ.

ಮೃತ ಆರೋಪಿ ವಿಜಯ್ ಅಲಿಯಾಸ್ ಉಸ್ಮಾನ್‍ನನ್ನು ಇಂದು ಬೆಳಗ್ಗೆ 5:30 ವೇಳೆಗೆ ಕೌಂದಿಯಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಹಚ್ಚಿದ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ

ಬಿಎಸ್‍ಪಿ ಶಾಸಕ ರಾಜ್ ಪಾಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಖ್ಷಿಯಾಗಿದ್ದ ಉಮೇಶ್ ಪಾಲ್ ಅವರ ಮೇಲೆ ಫೆ.24 ರಂದು ಹಂತಕರು ಗುಂಡಿನ ದಾಳಿ ಮಾಡಿದ್ದರು. ಈ ವೇಳೆ ಉಮೇಶ್ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ.

ಬ್ರಿಟನ್ ಸಂಸತ್‍ನಲ್ಲಿ ರಾಹುಲ್ ಭಾಷಣ

ಕೆಲ ದಿನಗಳಲ್ಲಿ, ಪ್ರಕರಣದ ಆರೋಪಿ ಅರ್ಬಾಜ್‍ನನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಇದೀಗ ಮತ್ತೊಬ್ಬ ಆರೋಪಿಯನ್ನು ಕೂಡಾ ಹೆಡೆಮುರಿಕಟ್ಟಲಾಗಿದೆ.

Second, Encounter, Killing, UP, Witness, Murder, Shot Dead, Umesh Pal,

Articles You Might Like

Share This Article