ಬೆಂಗಳೂರು, ಜ.22- ಬ್ಯಾಗ್ ಪರಿಶೀಲಿಸಲು ಮುಂದಾದ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಅಪಾರ್ಟ್ಮೆಂಟ್ನ ನಿವಾಸಿಯೊಬ್ಬರು ಜಾಲತಾಣದ ಮೂಲಕ ಊಟ ಆರ್ಡರ್ ಮಾಡಿದ್ದರು. ಅದರಂತೆ ಡಿಲವರಿ ಬಾಯ್ ಅಪಾರ್ಟ್ಮೆಂಟ್ ಬಳಿ ಬಂದಿದ್ದಾನೆ. ಈ ವೇಳೆ ಭದ್ರತೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಆತನನ್ನು ತಡೆದು ಬ್ಯಾಗ್ ಪರಿಶೀಲಿಸಬೇಕೆಂದು ಹೇಳಿದ್ದಾನೆ. ಇದರಿಂದ ಗಲಾಟೆ ನಡೆದಿದೆ.
ಸ್ವಲ್ಪ ಸಮಯದ ನಂತರ ಸುಮಾರು ನಾಲ್ಕೈದು ಮಂದಿ ಪುನಃ ಅಪಾರ್ಟ್ಮೆಂಟ್ ಬಳಿ ಬಂದು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಚಿಕಿತ್ಸೆಗಾಗಿ ಸೆಕ್ಯುರಿಗಾರ್ಡ್ನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದುಬೈ ಅಧಿಕಾರಿಯಂತೆ ನಟಿಸಿ ಲೀಲಾ ಪ್ಯಾಲೇಸ್ಗೆ ವಂಚಿಸಿದ್ದ ಆರೋಪಿ ಸೆರೆ
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಅಪಾರ್ಟ್ಮೆಂಟ್ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಾವಳಿಗಳು ಸೆರೆಯಾಗಿದೆ.
security guard, assaulting, Five, arrested,